ETV Bharat / sports

IPL 2022 RR vs LSG: ರಾಜಸ್ಥಾನ್ ಬೌಲಿಂಗ್‌ ದಾಳಿಗೆ ಮಣಿದ ಲಕ್ನೋ

author img

By

Published : May 16, 2022, 8:37 AM IST

ನಿನ್ನೆ ಸಂಜೆ ನಡೆದ ಹೈ-ವೋಲ್ಟೇಜ್ ಐಪಿಎಲ್ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ಬಳಗ ಲಖನೌ ಸೂಪರ್‌ ಜೈಂಟ್ಸ್‌ ಎದುರು 24 ರನ್‌ಗಳ ಜಯ ದಾಖಲಿಸಿತು.

Rajasthan Royals won against Lucknow Super Giants, Lucknow Super Giants vs Rajasthan Royals in IPL match, Indian Premier League 2022, Mumbai Brabourne Stadium, Rajasthan Royals won the match, ಐಪಿಎಲ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್​ಗೆ ಗೆಲುವು, ಐಪಿಎಲ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಪಂದ್ಯ, ಇಂಡಿಯನ್ ಪ್ರೀಮಿಯರ್ ಲೀಗ್ 2022, ಮುಂಬೈ ಬ್ರಬೋರ್ನ್ ಸ್ಟೇಡಿಯಂ, ರಾಜಸ್ಥಾನ ರಾಯಲ್ಸ್​ಗೆ ಗೆಲುವು,
ಕೃಪೆ: IPL Twitter

ಮುಂಬೈ: ಸಂಜು ಸ್ಯಾಮ್ಸನ್‌ ಟೀಂ ಲಖನೌ ಸೂಪರ್‌ ಜೈಂಟ್ಸ್​ ಎದುರು 24 ರನ್‌ಗಳ ಭರ್ಜರಿ ಜಯ ದಾಖಲಿಸಿತು. ಆಲ್‌ರೌಂಡ್‌ ಪ್ರದರ್ಶನ ಹೊರತಂದ ಆರ್‌ಆರ್‌ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ತನ್ನ 8ನೇ ಜಯ ದಾಖಲಿಸಿತು.

ರಾಜಸ್ಥಾನ್​ ರಾಯಲ್ಸ್​ ಇನ್ನಿಂಗ್ಸ್​: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿದ ಆರ್‌ಆರ್‌ ಟೀಂ ಲಖನೌ ಸೂಪರ್‌ ಜೈಂಟ್ಸ್‌ಗೆ ಕಠಿಣ ಗುರಿ ನೀಡಿತು. ಯುವ ಓಪನರ್‌ ಯಶಸ್ವಿ ಜೈಸ್ವಾಲ್‌ 41 ರನ್‌, ಸಂಜು ಸ್ಯಾಮ್ಸನ್ 32 ರನ್​ ಮತ್ತು ದೇವದತ್‌ ಪಡಿಕ್ಕಲ್‌ 39 ರನ್‌ ಗಳಿಸಿ ಬಿರುಸಿನ ಬ್ಯಾಟಿಂಗ್‌ ನಡೆಸಿದರು. ಈ ಮೂಲಕ ತಂಡ 20 ಓವರ್‌ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 178 ರನ್‌ ಕಲೆ ಹಾಕಿತು. ಲಖನೌ ಪರ ಲೆಗ್‌ ಸ್ಪಿನ್ನರ್‌ ರವಿ ಬಿಷ್ಣೋಯ್‌ 2 ವಿಕೆಟ್‌ ಪಡೆದರೆ, ಅವೇಶ್ ಖಾನ್, ಜೇಸನ್ ಹೋಲ್ಡರ್, ಆಯುಷ್ ಬದೋನಿ ತಲಾ ಒಂದು ವಿಕೆಟ್​ ಪಡೆದರು.

ಇದನ್ನೂ ಓದಿ:CSK vs GT: ಕ್ವಾಲಿಫೈಯರ್ 1 ಖಚಿತ ಪಡಿಸಿಕೊಂಡ ಟೈಟನ್ಸ್​

ಲಖನೌ ಸೂಪರ್‌ ಜೈಂಟ್ಸ್ ಇನ್ನಿಂಗ್ಸ್‌: ಗುರಿ ಬೆನ್ನತ್ತಿದ್ದ ಕೆ.ಎಲ್‌.ರಾಹುಲ್‌ ಸಾರಥ್ಯದ ಲಖನೌ ಸೂಪರ್‌ ಜೈಂಟ್ಸ್ ತಂಡ ಆರಂಭದಿಂದಲೇ ಸಂಕಷ್ಟಕ್ಕೆ ಸಿಲುಕಿತು. ಶಿಸ್ತಿನ ದಾಳಿ ಸಂಘಟಿಸಿದ ರಾಯಲ್ಸ್‌ ಬಳಗ ಸತತವಾಗಿ ವಿಕೆಟ್‌ ಪಡೆಯುತ್ತ ರಾಹುಲ್​ ಬಳಗದ ಬ್ಯಾಟರ್‌ಗಳ ಮೇಲೆ ಒತ್ತಡ ಹೇರಿದರು. ಪರಿಣಾಮ, ಲಖನೌ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 154 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ರಾಜಸ್ಥಾನ್​ ರಾಯಲ್ಸ್​ ತಂಡದ ವಿರುದ್ಧ ಲಖನೌ ತಂಡ 24 ರನ್​ಗಳಿಂದ ಸೋಲು ಕಂಡು ಪಾಯಿಂಟ್ಸ್​ ಟೇಬಲ್​ನಲ್ಲಿ ಒಂದು ಸ್ಥಾನದಿಂದ ಕುಸಿಯಿತು. ರಾಯಲ್ಸ್‌ ವೇಗಿಗಳಾದ ಟ್ರೆಂಟ್‌ ಬೌಲ್ಟ್‌, ಪ್ರಸಿಧ್ ಕೃಷ್ಣ, ಒಬೆಡ್‌ ಮೆಕಾಯ್‌ ತಲಾ ಎರಡು ವಿಕೆಟ್​ ಪಡೆದರು. ಸ್ಪಿನ್ನರ್‌ಗಳಾದ ಆರ್‌.ಅಶ್ವಿನ್‌ ಮತ್ತು ಯಜ್ವೇಂದ್ರ ಚಹಲ್‌ ತಲಾ ಒಂದು ವಿಕೆಟ್​ ಪಡೆದು ಗೆಲುವಿಗೆ ಕಾರಣರಾದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.