ಧೋನಿಯನ್ನು ಮೀರಿಸಿ 16 ಕೋಟಿ ರೂ. ಪಡೆದ ರವೀಂದ್ರ ಜಡೇಜಾ

author img

By

Published : Nov 30, 2021, 10:30 PM IST

Updated : Nov 30, 2021, 10:43 PM IST

ರವೀಂದ್ರ ಜಡೇಜಾ
ರವೀಂದ್ರ ಜಡೇಜಾ ()

ಸಿಎಸ್​ಕೆಗೆ ಭವಿಷ್ಯದ ನಾಯಕ ಸ್ಥಾನದ ಪ್ರಬಲ ಸ್ಪರ್ಧಿಯಾಗಿರುವ ರವೀಂದ್ರ ಜಡೇಜಾ ಅವರಿಗೆ ಫ್ರಾಂಚೈಸಿ ಪ್ರಾಮುಖ್ಯತೆ ನೀಡಿದೆ. ಇನ್ನು ಧೋನಿ ಅವರನ್ನು 2ನೇ ಆಟಗಾರನಾಗಿ ಆಯ್ಕೆ ಮಾಡಿಕೊಂಡಿದ್ದು, ಅವರು 12 ಕೋಟಿ ರೂ. ಪಡೆದಿದ್ದಾರೆ. ಈ ಮೂಲಕ ಧೋನಿ ಐಪಿಎಲ್​ನಲ್ಲಿ ಆಡುವುದು ಕೂಡ ಖಚಿತವಾಗಿದೆ..

ಮುಂಬೈ : ಭಾರತ ತಂಡದ ಆಲ್​ರೌಂಡರ್​ ರವೀಂದ್ರ ಜಡೇಜಾ ಅವರಿಗೆ ಜಾಕ್​ಪಾಟ್​ ಹೊಡೆದಿದೆ. 2022ಕ್ಕೂ ಮುನ್ನ ಚೆನ್ನೈ ಸೂಪರ್​ ಕಿಂಗ್ಸ್​ ಮೊದಲ ರಿಟೈನ್ ಆಟಗಾರನಾಗಿ ಜಡೇಜಾರನ್ನು ಆಯ್ಕೆ ಮಾಡಿದೆ. ಅವರು ಬರೋಬ್ಬರಿ 16 ಕೋಟಿ ರೂ. ಪಡೆದಿದ್ದಾರೆ.

ಸಿಎಸ್​ಕೆಗೆ ಭವಿಷ್ಯದ ನಾಯಕ ಸ್ಥಾನದ ಪ್ರಬಲ ಸ್ಪರ್ಧಿಯಾಗಿರುವ ರವೀಂದ್ರ ಜಡೇಜಾ ಅವರಿಗೆ ಫ್ರಾಂಚೈಸಿ ಪ್ರಾಮುಖ್ಯತೆ ನೀಡಿದೆ. ಧೋನಿ ಅವರನ್ನು 2ನೇ ಆಟಗಾರನಾಗಿ ಆಯ್ಕೆ ಮಾಡಿಕೊಂಡಿದ್ದು, ಅವರು 12 ಕೋಟಿ ರೂ. ಪಡೆದಿದ್ದಾರೆ. ಈ ಮೂಲಕ ಧೋನಿ ಐಪಿಎಲ್​ನಲ್ಲಿ ಆಡುವುದು ಕೂಡ ಖಚಿತವಾಗಿದೆ.

ಉಳಿದಂತೆ ಇಂಗ್ಲೆಂಡ್​ ಆಲ್​ರೌಂಡರ್​ ಮೊಯಿನ್​ ಅಲಿ 3ನೇ ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಅವರು 8 ಕೋಟಿ ರೂ. ಪಡೆದರೆ, 2021ರ ಆರೆಂಜ್​ ಕ್ಯಾಪ್ ವಿನ್ನರ್​ ರುತುರಾಜ್ ಗಾಯಕ್ವಾಡ್​ 6 ಕೋಟಿ ರೂ. ಪಡೆದಿದ್ದಾರೆ. ಇವರನ್ನು 2019ರ ಹರಾಜಿನಲ್ಲಿ ಕೇವಲ 20 ಲಕ್ಷಕ್ಕೆ ಸಿಎಸ್​ಕೆ ಖರೀದಿಸಿತ್ತು.

2008ರಿಂದಲೂ ತಂಡದಲ್ಲಿದ್ದ ಸುರೇಶ್​ ರೈನಾ, 2011ರಿಂದ ತಂಡದಲ್ಲಿದ್ದ ಫಾಫ್ ಡು ಪ್ಲೆಸಿಸ್​ರನ್ನು ಇದೇ ಮೊದಲ ಬಾರಿಗೆ ತಂಡದಿಂದ ಕೈಬಿಡಲಾಗಿದೆ.

Last Updated :Nov 30, 2021, 10:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.