ETV Bharat / sports

ವಿಂಡೀಸ್​ - ಲಂಕಾ 2ನೇ ಟೆಸ್ಟ್​: ಸುಭದ್ರ ಸ್ಥಿತಿಯಲ್ಲಿ ಶ್ರೀಲಂಕಾ

author img

By

Published : Mar 31, 2021, 10:20 AM IST

ದಿನದಾಟದ ಅಂತ್ಯದ ವೇಳೆ ಶ್ರೀಲಂಕಾ 136 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡಿದ್ದು, ಚಂಡಿಮಲ್ (34) ಮತ್ತು ಡಿ ಸಿಲ್ವಾ (23) ರನ್​​ಗಳಿಸಿ ಕ್ರೀಸ್‌ ನಲ್ಲಿದ್ದಾರೆ.

WI vs SL, 2nd Test:
ವಿಂಡೀಸ್​-ಲಂಕಾ 2ನೇ ಟೆಸ್ಟ್

ಸೇಂಟ್ ಜಾನ್ಸ್ [ಆಂಟಿಗುವಾ]: ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ - ಶ್ರೀಲಂಕಾ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಅಂತ್ಯವಾಗಿದ್ದು, ವಿಂಡೀಸ್​ 218 ರನ್​ಗಳ ಮುನ್ನಡೆ ಸಾಧಿಸಿದೆ.

ಮೊದಲ ದಿನ ಬ್ಯಾಟಿಂಗ್​ ಮಾಡಿದ್ದ ವೆಸ್ಟ್​​ ಇಂಡೀಸ್​ ತಂಡ 287 ರನ್​ಗಳಿಗೆ 7 ವಿಕೆಟ್​​ ಕಳೆದುಕೊಂಡಿತ್ತು. ಎರಡನೇ ದಿನದಾಟದಲ್ಲಿ ವಿಂಡೀಸ್​ 354 ರನ್​ಗಳಿಸಿ ಆಲೌಟ್​ ಆಯಿತು. ನಂತರ ಮೊದಲ ಇನ್ನಿಂಗ್ಸ್​ ಆರಂಭಿಸಿದ ಶ್ರೀಲಂಕಾ ಆರಂಭದಲ್ಲೇ ನಾಯಕ ದಿಮುತ್ ಕರುಣರತ್ನ (1) ವಿಕಟ್​ ಕಳೆದುಕೊಂಡಿತು. ಲಹಿರು ತಿರಿಮನ್ನೆ ಮತ್ತು ಒಶಾಡಾ ಫರ್ನಾಂಡೊ ಎರಡನೇ ವಿಕೆಟ್‌ಗೆ 46 ರನ್ ಗಳಿಸಿದರು. ಫರ್ನಾಂಡೊ 18 ರನ್​ ಗಳಿಸಿ ಔಟಾದರು. ಇತ್ತ ತಂಡಕ್ಕೆ ಉತ್ತಮ ಕೊಡುಗೆ ನೀಡಿದ ಲಹಿರು ತಿರಿಮನ್ನೆ ಅರ್ಧ ಶತಕ ಸಿಡಿಸಿ ಮಿಂಚಿದರು. ದಿನದಾಟದ ಅಂತ್ಯದ ವೇಳೆಗೆ ಶ್ರೀಲಂಕಾ 136 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡಿದ್ದು, ಚಂಡಿಮಲ್ (34) ಮತ್ತು ಡಿ ಸಿಲ್ವಾ (23) ರನ್​​ಗಳಿಸಿ ಕ್ರೀಸ್‌ ನಲ್ಲಿದ್ದಾರೆ.

ಓದಿ : IPL 2021: ಡೆಲ್ಲಿ ಕ್ಯಾಪಿಟಲ್ಸ್​ ನಾಯಕನಾಗಿ ಬಡ್ತಿ ಪಡೆದ ರಿಷಭ್‌ ಪಂತ್

ಸಂಕ್ಷಿಪ್ತ ಸ್ಕೋರ್​ : ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್​ 354/10 (ಕ್ರೈಗ್ ಬ್ರಾಥ್‌ವೈಟ್ 126, ರಾಹಕೀಮ್ ಕಾರ್ನ್‌ವಾಲ್ 73, ಸುರಂಗ ಲಕ್ಮಲ್ 4/94). ಶ್ರೀಲಂಕಾ ಮೊದಲ ಇನ್ನಿಂಗ್ಸ್ 136/3 (ಲಹಿರು ತಿರಿಮನ್ನೆ 55, ಚಂಡಿಮಲ್ 34*, ಕೈಲ್ ಮೇಯರ್ಸ್ 1-6).

ETV Bharat Logo

Copyright © 2024 Ushodaya Enterprises Pvt. Ltd., All Rights Reserved.