ETV Bharat / sports

ದ.ಆಫ್ರಿಕಾ - ಪಾಕಿಸ್ತಾನ ಟಿ-20 ಸರಣಿ : ಕೊನೆಯ ಪಂದ್ಯ ಗೆದ್ದು ಸರಣಿ ವಶ ಪಡಿಸಿಕೊಂಡ ಪಾಕ್

author img

By

Published : Apr 17, 2021, 2:32 PM IST

3 ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಜಯಿಸಿದ್ದ ಪಾಕಿಸ್ತಾನ, ಇದೀಗ ಟಿ-20 ಸರಣಿಯಲ್ಲಿ 3-1ರ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಸಾಧನೆ ಮಾಡಿದೆ.

Pakistan defeat South Africa to win T20I series 3-1
ದ.ಆಫ್ರಿಕಾ-ಪಾಕಿಸ್ತಾನ ಟಿ-20 ಸರಣಿ

ಸೆಂಚುರಿಯನ್‌: ದಕ್ಷಿಣ ಆಫ್ರಿಕಾ ವಿರುದ್ಧ 4ನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ 3 ವಿಕೆಟ್‌ ಗೆಲುವು ಸಾಧಿಸಿದ ಪಾಕಿಸ್ತಾನ 3-1ರ ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ದಕ್ಷಿಣ​ ಆಫ್ರಿಕಾ, ವಾನ್‌ ಡರ್‌ ಡುಸ್ಸೆನ್‌ 52 ರನ್​ ಹಾಗೂ ಜನ್ನೆಮಾನ್‌ ಮಲಾನ್ ‌33ರನ್​​ಗಳ ನೆರವಿನಿಂದ 19.3 ಓವರಲ್ಲಿ 144 ರನ್‌ಗಳಿಗೆ ಆಲೌಟ್‌ ಆಯಿತು. ಪಾಕಿಸ್ತಾನ ಪರ ಫಹೀಂ ಅಶ್ರಫ್‌ ಹಾಗೂ ಹಸನ್‌ ಅಲಿ ತಲಾ 3 ವಿಕೆಟ್‌ ಪಡೆದು ಹರಿಣಗಳ ಆರ್ಭಟಕ್ಕೆ ಕಡಿವಾಣ ಹಾಕಿದರು.

ದಕ್ಷಿಣ ಆಫ್ರಿಕಾ ನೀಡಿದ್ದ 145 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಫಖರ್‌ ಜಮಾನ್‌ 60 ಗಳಿಸಿ ಆಸರೆಯಾದರು. ನಾಯಕ ಬಾಬರ್‌ 24 ರನ್​ ಗಳಿಸಿ ಉತ್ತಮ ಬೆಂಬಲ ನೀಡಿದರು. ಒಂದು ಹಂತದಲ್ಲಿ 10 ಓವರ್‌ ಮುಕ್ತಾಯದ ವೇಳೆಗೆ ಕೇವಲ ಒಂದು ವಿಕೆಟ್‌ ಕಳೆದುಕೊಂಡು 92 ರನ್‌ ಬಾರಿಸಿದ್ದ ಪಾಕಿಸ್ತಾನ ಆ ಬಳಿಕ ದಿಢೀರ್​ ಕುಸಿತ ಕಂಡಿತು. 15 ಓವರ್‌ ಅಂತ್ಯದ ವೇಳೆಗೆ ಪಾಕಿಸ್ತಾನ ಕೇವಲ 23 ರನ್‌ ಗಳಿಸಿ ಪ್ರಮುಖ 5 ವಿಕೆಟ್‌ ಕಳೆದುಕೊಂಡು ಆತಂಕಕ್ಕೆ ಒಳಗಾಗಿತ್ತು. ಕೊನೆಯಲ್ಲಿ ಮೊಹಮದ್‌ ನವಾಜ್‌ 25* ಆಕರ್ಷಕ ಆಟವಾಡಿ ಪಾಕಿಸ್ತಾನಕ್ಕೆ ಇನ್ನೊಂದು ಎಸೆತ ಬಾಕಿ ಇರುವಂತೆ ಗೆಲುವು ತಂದುಕೊಟ್ಟರು.

3 ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಜಯಿಸಿದ್ದ ಪಾಕಿಸ್ತಾನ, ಇದೀಗ ಟಿ-20 3-1ರ ಅಂತರದಲ್ಲಿ ಸರಣಿ ಗೆಲ್ಲುವ ಮೂಲಕ ಸಾಧನೆ ಮಾಡಿದೆ..

ಸಂಕ್ಷಿಪ್ತ ಸ್ಕೋರ್​: ಸೌತ್​ ಆಫ್ರಿಕಾ 20 ಓವರ್​ಗಳಲ್ಲಿ 144/10 (ವಾನ್‌ ಡರ್‌ ಡುಸ್ಸೆನ್‌ 52, ಜನ್ನೆಮಾನ್‌ ಮಲಾನ್ ‌33, ಹಸನ್‌ ಅಲಿ 3/40, ಫಹೀಂ ಅಶ್ರಫ್ 3/17 ) ಪಾಕಿಸ್ತಾನ 19.5 ಓವರ್​ಗಳಲ್ಲಿ 149/7( ಫಖರ್‌ ಜಮಾನ್‌ 60, ಬಾಬರ್‌ 24, ಮೊಹಮದ್‌ ನವಾಜ್‌ 25*, ಸಿಸಂದ ಮಗಾಲ 2/33).

ಓದಿ : ಪಂಜಾಬ್​ ವಿರುದ್ಧ ಸುಲಭ ಗೆಲುವು.. ಪಾಯಿಂಟ್ ಪಟ್ಟಿಯಲ್ಲಿ ಖಾತೆ ತೆರೆದ ಚೆನ್ನೈ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.