ETV Bharat / sports

ದ.ಆಫ್ರಿಕಾ ಟಿ -20 ಸರಣಿ : ರಾಹುಲ್​ಗೆ ನಾಯಕತ್ವ, ತಂಡಕ್ಕೆ ಮರಳಿದ ಹಾರ್ದಿಕ್​, ಕಾರ್ತಿಕ್​

author img

By

Published : May 22, 2022, 6:41 PM IST

Updated : May 22, 2022, 8:41 PM IST

ಹಾರ್ದಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್ ತಂಡಕ್ಕೆ ಮರಳಿದ್ದಾರೆ. ಆರ್‌ಸಿಬಿಯಲ್ಲಿ ಫಿನಿಷರ್​ ಆಗಿ ಕಂಡು ಬಂದ ದಿನೇಶ್​ ಕಾರ್ತಿಕ್​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 191.33ರ ಬ್ಯಾಟಿಂಗ್ ಸ್ಟ್ರೈಕ್ ರೇಟ್‌ನೊಂದಿಗೆ ಈ ಐಪಿಎಲ್​ ಆವೃತ್ತಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ..

ರಾಹುಲ್​ಗೆ ನಾಯಕತ್ವ, ತಂಡಕ್ಕೆ ಮರಳಿದ ಹಾರ್ದಿಕ್​, ಕಾರ್ತಿಕ್​
ರಾಹುಲ್​ಗೆ ನಾಯಕತ್ವ, ತಂಡಕ್ಕೆ ಮರಳಿದ ಹಾರ್ದಿಕ್​, ಕಾರ್ತಿಕ್​

ನವದೆಹಲಿ : ಜೂನ್​ 9ರಿಂದ ತವರಿನಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ-20 ಸರಣಿಗೆ ಭಾರತ ತಂಡವನ್ನು ಘೋಷಿಸಲಾಗಿದ್ದು, ಯುವಪಡೆಗೆ ಮಣೆ ಹಾಕಲಾಗಿದೆ. ಕಳೆದ ವರ್ಷ ಇಂಗ್ಲೆಂಡ್​ ವಿರುದ್ಧದ 5 ಟೆಸ್ಟ್​ ಪಂದ್ಯಗಳ ಸರಣಿಯ ಕೊನೆಯ ಪಂದ್ಯ ಕೋವಿಡ್ ಕಾರಣ ರದ್ದಾಗಿತ್ತು. ಇದೀಗ ಆ ಪಂದ್ಯಕ್ಕೂ ತಂಡವನ್ನು ಘೋಷಿಸಲಾಗಿದೆ.

ಹಿರಿಯರಿಗೆ ವಿಶ್ರಾಂತಿ : ಇಂದು ನಡೆದ ಆಯ್ಕೆ ಮಂಡಳಿಯ ಸಭೆಯಲ್ಲಿ ಐಪಿಎಲ್​ನಲ್ಲಿ ಮಿಂಚಿದ ಹೊಸ ಪ್ರತಿಭೆಗಳಿಗೆ ಆಯ್ಕೆಗಾರರು ಮಣೆ ಹಾಕಿದ್ದಲ್ಲದೇ, ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ತಂಡದ ಕಾಯಂ ಮತ್ತು ಹಿರಿಯ ಆಟಗಾರರಾದ ನಾಯಕ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ, ಜಸ್ಪ್ರೀತ್​ ಬೂಮ್ರಾ, ಮಹಮ್ಮದ್​ ಶಮಿ, ಶಿಖರ್​ ದವನ್​ಗೆ ವಿಶ್ರಾಂತಿ ನೀಡಲಾಗಿದೆ.

ಹೊಸ ಪ್ರತಿಭೆಗಳಿಗೆ ಮಣೆ : ಇನ್ನು ಐಪಿಎಲ್​ನಲ್ಲಿ ಮಿಂಚು ಹರಿಸಿದ ಯುವ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ತಂಡದಲ್ಲಿ ಮತ್ತೊಮ್ಮೆ ಸ್ಥಾನ ಪಡೆದ ಋತುರಾಜ್​ ಗಾಯಕ್ವಾಡ್​, ದೀಪಕ್​ ಹೂಡಾ, ರವಿ ಬಿಷ್ಣೋಯಿ, ಹರ್ಷಲ್​ ಪಟೇಲ್​ಗೆ ಮತ್ತೊಂದು ಅವಕಾಶ ನೀಡಲಾಗಿದೆ.

ಉಮ್ರಾನ್​ ಮಲಿಕ್​ಗೆ ಒಲಿದ ಭಾಗ್ಯ : ಈ ಸೀಸನ್​ ಐಪಿಎಲ್​ನಲ್ಲಿ ತನ್ನ ವೇಗದ ಮೂಲಕವೇ ಮಿಂಚು ಹರಿಸಿದ ಉಮ್ರಾನ್​ ಮಲಿಕ್​ಗೆ ಆಯ್ಕೆಗಾರರು ಅಸ್ತು ಎಂದಿದ್ದಾರೆ. ಹೈದರಾಬಾದ್​ ವೇಗಿ ಪರ ಮಾಜಿ ಆಟಗಾರರು ಬ್ಯಾಟ್​ ಬೀಸಿದ್ದು, ಇದೀಗ ಟಿ-20 ತಂಡದಲ್ಲಿ ಸ್ಥಾನ ನೀಡಲಾಗಿದೆ. ಎಡಗೈ ವೇಗಿ ಹರ್ಷದೀಪ್​ ಸಿಂಗ್ ಗೆ ಚೊಚ್ಚಲ ಅವಕಾಶ ದೊರೆತಿದೆ.

  • TEST Squad - Rohit Sharma (Capt), KL Rahul (VC), Shubman Gill, Virat Kohli, Shreyas Iyer, Hanuma Vihari, Cheteshwar Pujara, Rishabh Pant (wk), KS Bharat (wk), R Jadeja, R Ashwin, Shardul Thakur, Mohd Shami, Jasprit Bumrah, Mohd Siraj, Umesh Yadav, Prasidh Krishna #ENGvIND

    — BCCI (@BCCI) May 22, 2022 " class="align-text-top noRightClick twitterSection" data=" ">

ಮರಳಿದ ಕಾರ್ತಿಕ್​, ಪಾಂಡ್ಯ : ಹಾರ್ದಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್ ತಂಡಕ್ಕೆ ಮರಳಿದ್ದಾರೆ. ಫಿಟ್​ನೆಸ್​ ಸಮಸ್ಯೆಯಿಂದ ತಂಡದಿಂದ ಹೊರಗಿದ್ದ ಹಾರ್ದಿಕ್​ ಪಾಂಡ್ಯ ಈ ಬಾರಿ ಗುಜಾರಾತ್​ನ ಮುನ್ನಡೆಸಿ ಬೌಲಿಂಗ್​ ಕೂಡ ಮಾಡಿ ಫಿಟ್​ ಇರುವುದಾಗಿ ಸಂದೇಶ ರವಾನಿಸಿದ್ದಾರೆ. ಆರ್‌ಸಿಬಿಯಲ್ಲಿ ಫಿನಿಷರ್​ ಆಗಿ ಕಂಡು ಬಂದ ದಿನೇಶ್​ ಕಾರ್ತಿಕ್​ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ ಮೂರು ವರ್ಷಗಳ ನಂತರ ದಿನೇಶ್​ ಕಾರ್ತಿಕ್ ತಂಡಕ್ಕೆ ಮಳಿದ್ದಾರೆ. 191.33ರ ಬ್ಯಾಟಿಂಗ್ ಸ್ಟ್ರೈಕ್ ರೇಟ್‌ನೊಂದಿಗೆ ಈ ಐಪಿಎಲ್​ ಆವೃತ್ತಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.

ಟಿ-20 ತಂಡ : ಕೆ ಎಲ್ ರಾಹುಲ್ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪ ನಾಯಕ) (ವಿಕೇಟ್​ ಕೀಪರ್​), ದಿನೇಶ್ ಕಾರ್ತಿಕ್ (ವಿಕೇಟ್​ ಕೀಪರ್​), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಆರ್ ಬಿಷ್ಣೋಯ್, ಭುವನೇಶ್ವರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್.

  • T20I Squad - KL Rahul (Capt), Ruturaj Gaikwad, Ishan Kishan, Deepak Hooda, Shreyas Iyer, Rishabh Pant(VC) (wk),Dinesh Karthik (wk), Hardik Pandya, Venkatesh Iyer, Y Chahal, Kuldeep Yadav, Axar Patel, R Bishnoi, Bhuvneshwar, Harshal Patel, Avesh Khan, Arshdeep Singh, Umran Malik

    — BCCI (@BCCI) May 22, 2022 " class="align-text-top noRightClick twitterSection" data=" ">

ಟೆಸ್ಟ್​ ತಂಡದಲ್ಲೂ ಕೆಲ ಬದಲಾವಣೆ : ಜುಲೈ 1ರಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಎಲ್ಲ ಪ್ರಮುಖ ಐದನೇ ಟೆಸ್ಟ್‌ಗೆ ತಂಡದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಲಾಗಿದೆ. ರೋಹಿತ್​ ಶರ್ಮಾ ನಾಯಕತ್ವ ವಹಿಸಲಿದ್ದು, ಕೆ ಎಲ್​ ರಾಹುಲ್​ಗೆ ಉಪ ನಾಯಕನ ಸ್ಥಾನ ನೀಡಲಾಗಿದೆ. ಟೆಸ್ಟ್ ಆಡುವ ಮೊದಲು ಇಂಗ್ಲೆಂಡ್​ನಲ್ಲಿ ಅಭ್ಯಾಸ ಪಂದ್ಯಗಳನ್ನು ಆಯೋಜಿಸಲಾಗಿದೆ.

ಜುಲೈ-ಸೆಪ್ಟೆಂಬರ್ 2021ರಲ್ಲಿ 2-1 ಮುನ್ನಡೆ ಸಾಧಿಸಿದ ತಂಡದಲ್ಲಿ ಕೆಲವು ಬದಲಾವಣೆಗಳಿವೆ. ಮಯಾಂಕ್ ಅಗರ್ವಾಲ್ ಬದಲಿಗೆ ಶುಭಮನ್ ಗಿಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಶ್ರೇಯಸ್ ಅಯ್ಯರ್​ ಗಾಯಗೊಂಡ ಅಜಿಂಕ್ಯ ರಹಾನೆ ಅವರ ಮಧ್ಯಮ ಕ್ರಮಾಂಕದ ಜವಾಬ್ದಾರಿ ನೀಡಲಾಗಿದೆ. ವೃದ್ಧಿಮಾನ್ ಸಹಾ ಬದಲಿಗೆ ಕೆ ಎಸ್ ಭರತ್ ತಂಡದಲ್ಲಿ ಎರಡನೇ ಕೀಪರ್ ಸೇರಿಸಲಾಗಿದೆ. ಗಾಯದ ಕಾರಣಕ್ಕೆ ಬದಲಿಯಾಗಿ ಕರೆಸಿಕೊಂಡಿದ್ದ ಸೂರ್ಯಕುಮಾರ್ ಯಾದವ್ ಮತ್ತು ಪೃಥ್ವಿ ಶಾ ಜೋಡಿಯನ್ನು ಸೇರಿಸಿಕೊಳ್ಳಲಾಗಿಲ್ಲ.

ಟೆಸ್ಟ್​ ತಂಡ : ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ್ ಪೂಜಾರ, ರಿಷಬ್ ಪಂತ್ (ವಿಕೇಟ್​ ಕೀಪರ್​), ಕೆಎಸ್ ಭರತ್ (ವಿಕೇಟ್​ ಕೀಪರ್​), ಆರ್ ಜಡೇಜಾ, ಆರ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ ಆಡಲಿದ್ದಾರೆ.

ಇದನ್ನೂ ಓದಿ: ಐತಿಹಾಸಿಕ ಥಾಮಸ್ ಕಪ್ ಗೆದ್ದ ಬ್ಯಾಡ್ಮಿಂಟನ್ ಚಾಂಪಿಯನ್​ಗಳೊಂದಿಗೆ ಮೋದಿ ಸಂವಾದ

Last Updated : May 22, 2022, 8:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.