ETV Bharat / sports

ರಾಬಿನ್ಸನ್​ 5 ವಿಕೆಟ್​: ಭಾರತಕ್ಕೆ ಇನ್ನಿಂಗ್ಸ್ ಮತ್ತು 76ರನ್​ಗಳ ಸೋಲು, ಸರಣಿ 1-1ರಲ್ಲಿ ಸಮಬಲ

author img

By

Published : Aug 28, 2021, 5:45 PM IST

ಶುಕ್ರವಾರ 3ನೇ ದಿನದಂತ್ಯಕ್ಕೆ 180 ಎಸೆತಗಳಲ್ಲಿ ಅಜೆಯ 91 ರನ್​ಗಳಿಸಿದ್ದ ಚೇತೇಶ್ವರ್ ಪೂಜಾರ ಇಂದು ಕೇವಲ 9 ಎಸೆತಗಳನ್ನೆದುರಿಸಿ ಅದೇ ಮೊತ್ತಕ್ಕೆ ಔಟಾದರು. ಇವರ ಬೆನ್ನಲ್ಲೇ ನಿನ್ನೆ 45 ರನ್​ಗಳಿಸಿದ್ದ ಕೊಹ್ಲಿ ಇಂದು ಆ ಮೊತ್ತವನ್ನು 55ಕ್ಕೇರಿಸಿಕೊಂಡು ನಿರ್ಗಮಿಸಿದರು. ಇವರಿಬ್ಬರು ರಾಬಿನ್ಸನ್​ಗೆ ವಿಕೆಟ್​ ಒಪ್ಪಿಸಿದರು.

England thrash visitors by an innings and 76 runs in 3rd Test
ಭಾರತದ ವಿರುದ್ದ ಇಂಗ್ಲೆಂಡ್​ಗೆ ಇನ್ನಿಂಗ್ಸ್ ಜಯ

ಲೀಡ್ಸ್: ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್​ನಲ್ಲಿ ಭಾರತ ತಂಡ ಇನ್ನಿಂಗ್ಸ್​ ಮತ್ತು 76 ರನ್​ಗಳ ಅಂತರದಿಂದ ಸೋಲು ಕಂಡಿದ್ದು, 5 ಪಂದ್ಯಗಳ ಸರಣಿಯಲ್ಲಿ ಎರಡು ತಂಡಗಳು 1-1ರಲ್ಲಿ ಸಮಬಲ ಸಾಧಿಸಿವೆ.

3ನೇ ದಿನ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಭಾರತ 2 ವಿಕೆಟ್ ಕಳೆದುಕೊಂಡು 215ರನ್​ಗಳಿಸಿತ್ತು. ಆದರೆ 4ನೇ ದಿನ ಮೊದಲ ಸೆಷನ್​ನಲ್ಲೆ ರಾಬಿನ್​ಸನ್​ ದಾಳಿಗೆ ತತ್ತರಿಸಿ ನಿನ್ನೆಯ ಮೊತ್ತಕ್ಕೆ ಕೇವಲ 63 ರನ್​ ಸೇರಿಸಿ 99.3 ಓವರ್​ಗಳಲ್ಲಿ 278ಕ್ಕೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಹಾಗೂ 76 ರನ್​ಗಳ ಹೀನಾಯ ಸೋಲು ಕಂಡಿತು.

ಶುಕ್ರವಾರ 3ನೇ ದಿನದಂತ್ಯಕ್ಕೆ 180 ಎಸೆತಗಳಲ್ಲಿ ಅಜೆಯ 91 ರನ್​ಗಳಿಸಿದ್ದ ಚೇತೇಶ್ವರ್ ಪೂಜಾರ ಇಂದು ಕೇವಲ 9 ಎಸೆತಗಳನ್ನೆದುರಿಸಿ ಅದೇ ಮೊತ್ತಕ್ಕೆ ಔಟಾದರು. ಇವರ ಬೆನ್ನಲ್ಲೇ ನಿನ್ನೆ 45 ರನ್​ಗಳಿಸಿದ್ದ ಕೊಹ್ಲಿ ಇಂದು ಆ ಮೊತ್ತವನ್ನು 55ಕ್ಕೇರಿಸಿಕೊಂಡು ನಿರ್ಗಮಿಸಿದರು. ಇವರಿಬ್ಬರು ರಾಬಿನ್ಸನ್​ಗೆ ವಿಕೆಟ್​ ಒಪ್ಪಿಸಿದರು.

ಇನ್ನು ಉಪನಾಯಕ ಅಜಿಂಕ್ಯ ರಹಾನೆ (10) ಜೇಮ್ಸ್​ ಆ್ಯಂಡರ್ಸನ್ ಬೌಲಿಂಗ್​ನಲ್ಲಿ ಕೀಪರ್ ಬಟ್ಲರ್​ಗೆ ಕ್ಯಾಚ್​ ನೀಡಿ ಔಟಾದರೆ, ರಿಷಭ್​ ಪಂತ್ ಕೇವಲ 1ರನ್​ಗಳಿಸಿ ರಾಬಿನ್ಸನ್​ಗೆ 4ನೇ ಬಲಿಯಾದರು.

ಆದರೆ ರವೀಂದ್ರ ಜಡೇಜಾ 25 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 30 ರನ್​ಗಳಿಸಿ ಸೋಲನ್ನು ಸ್ವಲ್ಪ ಸಮಯ ಮುಂದೂಡಿದರು. ಆದರೆ ಇನ್ನಿಂಗ್ಸ್ ಸೋಲು ತಪ್ಪಿಸಲಾಗಲಿಲ್ಲ. ಉಳಿದಂತೆ ಶಮಿ 6, ಇಶಾಂತ್ ಶರ್ಮಾ 2, ಸಿರಾಜ್​ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

ಇಂಗ್ಲೆಂಡ್ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಒಲ್ಲಿ ರಾಬಿನ್​ಸನ್​ 65ಕ್ಕೆ 5, ಕ್ರೈಗ್​ ಓವರ್​ಟನ್​ 47ಕ್ಕೆ 3, ಮೊಯೀನ್ ಅಲಿ ಮತ್ತು ಆ್ಯಂಡರ್ಸನ್​ ತಲಾ ಒಂದು ವಿಕೆಟ್​ ಪಡೆದು ಭಾರತವನ್ನು ಅಂದು ಕೊಂಡಿದ್ದ ಸಮಯಕ್ಕಿಂತಲೂ ವೇಗವಾಗಿ ಆಲೌಟ್​ ಮಾಡಿ ಸರಣಿಯನ್ನು 1-1ರಲ್ಲಿ ಸಮಬಲ ಸಾಧಿಸಲು ನೆರವಾದರು.

England thrash visitors by an innings and 76 runs in 3rd Test
ಇಂಗ್ಲೆಂಡ್ ಜಯಕ್ಕೆ ಕಾರಣರಾದ ಒಲ್ಲಿ ರಾಬಿನ್​ಸನ್​

ಭಾರತ ಮತ್ತು ಇಂಗ್ಲೆಂಡ್​ ನಡುವಿನ 4ನೇ ಟೆಸ್ಟ್​ ಲಂಡನ್​ ಕೆನ್ನಿಂಗ್ಟನ್ ಓವಲ್​ನಲ್ಲಿ ಸೆಪ್ಟೆಂಬರ್​ 2ರಿಂದ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್​: ಭಾರತ 78 ಆಲೌಟ್​ ಮತ್ತು 278 ಆಲೌಟ್( ಚೇತೇಶ್ವರ್ ಪೂಜಾರ 91,ಕೊಹ್ಲಿ 55, ರೋಹಿತ್ ಶರ್ಮಾ 59, ಒಲ್ಲಿ ರಾಬಿನ್ಸನ್​ 65ಕ್ಕೆ 5)

ಇಂಗ್ಲೆಂಡ್​ ಮೊದಲ ಇನ್ನಿಂಗ್ಸ್: 432 ಕ್ಕೆ ಆಲೌಟ್​( ಜೋ ರೂಟ್ 121, ಡೇವಿಡ್ ಮಲನ್​ 70, ಹಮೀದ್​ 68, ಮೊಹಮ್ಮದ್ ಶಮಿ 95ಕ್ಕೆ4 )​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.