ETV Bharat / sports

ರೋಚಕ ಪಂದ್ಯದಲ್ಲಿ ಗೆಲುವು ಕಂಡ ಭಾರತ.. ರೋಹಿತ್​ ಪಡೆಗೆ ಸತತ ಮೂರನೇ ಸರಣಿ ಜಯ!

author img

By

Published : Feb 18, 2022, 11:00 PM IST

Updated : Feb 19, 2022, 2:30 PM IST

ವೆಸ್ಟ್​ಇಂಡೀಸ್​ ತಂಡದ ಬಿರುಸಿನ ಆಟದ ಮಧ್ಯವೂ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿ ಸರಣಿ ವಶಪಡಿಸಿಕೊಂಡಿತು.

India vs West Indies 2nd T20I,  2nd T20I India won aginst West Indies, India vs West Indies t20 match, India vs West Indies news, ಭಾರತ ಮತ್ತು ವೆಸ್ಟ್​ಇಂಡೀಸ್​ 2ನೇ ಟಿ20 ಪಂದ್ಯ, 2ನೇ ಟಿ20 ಪಂದ್ಯದಲ್ಲಿ ವೆಸ್ಟ್​ಇಂಡೀಸ್​ ವಿರುದ್ಧ ಗೆದ್ದ ಭಾರತ, ಭಾರತ ಮತ್ತು ವೆಸ್ಟ್​ಇಂಡೀಸ್​ 2ನೇ ಟಿ20, ಭಾರತ ಮತ್ತು ವೆಸ್ಟ್​ಇಂಡೀಸ್​ ಸುದ್ದಿ,
ಕೃಪೆ: Twitter/ICC

ಕೋಲ್ಕತಾ: ರೋಹಿತ್‌ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ-20 ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿಯೂ ಗೆಲುವು ಸಾಧಿಸಿ ಸರಣಿ ವಶಪಡಿಸಿಕೊಂಡಿದೆ. ಈ ಗೆಲುವಿನ ಮೂಲಕ ನಾಯಕ ರೋಹಿತ್​ ಶರ್ಮಾ ಸತತ ಮೂರನೇ ಸರಣಿ ತನ್ನದಾಗಿಸಿಕೊಂಡಿದ್ದಾರೆ.

ಇಲ್ಲಿನ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಶುಕ್ರವಾರ ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್‌ ಗೆದ್ದ ವೆಸ್ಟ್‌ ಇಂಡೀಸ್‌ ನಾಯಕ ಪೊಲಾರ್ಡ್‌ ಆತಿಥೇಯರನ್ನು ಮೊದಲು ಬ್ಯಾಟ್‌ ಮಾಡುವಂತೆ ಆಹ್ವಾನಿಸಿದರು. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಟೀಮ್ ಇಂಡಿಯಾ ಆರಂಭಿಕ ಆಘಾತ ಕಂಡಿತು. ಆದರೂ ಸಹ ಮಾಜಿ ನಾಯಕ ವಿರಾಟ್‌ ಕೊಹ್ಲಿ ಬಾರಿಸಿದ ಮನಮೋಹಕ ಅರ್ಧಶತಕದಿಂದ ಚೇತರಿಸಿಕೊಂಡಿತು.

ಓದಿ: Watch.. ಮಳೆ ಬೆಳೆ ಸಂಪಾಯಿತಲೆ ಪರಾಕ್: ಮೈಲಾರದಲ್ಲಿ ಅದ್ಧೂರಿ ಕಾರ್ಣಿಕೋತ್ಸವಕ್ಕೆ ಸಾಕ್ಷಿಯಾದ ಭಕ್ತರು

ಇನ್ನಿಂಗ್ಸ್​​ ಮಧ್ಯದಲ್ಲಿ ಕೆಲ ವಿಕೆಟ್‌ಗಳನ್ನು ಕೈಚೆಲ್ಲಿದ ಭಾರತ ತಂಡ ಒತ್ತಡಕ್ಕೆ ಸಿಲುಕಿತು. ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ 28 ಎಸೆತಗಳಲ್ಲಿ ಅಜೇಯ 52 ರನ್‌ ಗಳಿಸುವ ಮೂಲಕ ತಂಡಕ್ಕೆ ದೊಡ್ಡ ಮೊತ್ತ ತಂದುಕೊಟ್ಟರು.

ಆಲ್‌ರೌಂಡರ್‌ ವೆಂಕಟೇಶ್‌ ಅಯ್ಯರ್‌ ಬಿರುಸಿನ ಬ್ಯಾಟಿಂಗ್‌ ನಡೆಸಿ 18 ಎಸೆತಗಳಲ್ಲಿ 33 ರನ್‌ಗಳ ಕೊಡುಗೆ ಕೊಟ್ಟ ಪರಿಣಾಮ ಭಾರತ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 186 ರನ್‌ಗಳನ್ನು ಕಲೆಹಾಕಿತು. ವಿಂಡೀಸ್‌ ಪರ ರಾಸ್ಟನ್‌ ಚೇಸ್‌ 3 ವಿಕೆಟ್‌ಗಳನ್ನು ಕಿತ್ತು ಗಮನ ಸೆಳೆದರು.

ಓದಿ: ತಿರುಮಲದಲ್ಲಿ ಗೋವಿಂದಾನಂದ ಯಾತ್ರೆಗೆ ಪೊಲೀಸರ ಅಡ್ಡಿ.. ಹನುಮ ಜನ್ಮಭೂಮಿ ವಿವಾದ ಮತ್ತಷ್ಟು ಜಟಿಲ

ಭಾರತ ನೀಡಿದ ಮೊತ್ತವನ್ನು ಬೆನ್ನಟ್ಟಿದ್ದ ವೆಸ್ಟ್​ಇಂಡೀಸ್​ ತಂಡ ಆರಂಭದಿಂದಲೇ ಬಿರುಸಿನ ಆಟ ಪ್ರದರ್ಶಿಸಿತು. ಆದರೆ ಕೊನೆಯಲ್ಲಿ ಭಾರತ ನೀಡಿದ ಗುರಿಯನ್ನು ತಲುಪುವಲ್ಲಿ ವಿಫಲವಾಯಿತು. ನಿಗದಿತ 20 ಓವರ್​ಗಳಿಗೆ 3 ವಿಕೆಟ್​ಗಳನ್ನು ಕಳೆದುಕೊಂಡು 178 ರನ್​ಗಳನ್ನು ಮಾತ್ರ ಕಲೆ ಹಾಕಿತು. ಈ ಮೂಲಕ ವೆಸ್ಟ್​ ಇಂಡೀಸ್​ ತಂಡ ಭಾರತದ ವಿರುದ್ಧ 8 ರನ್​ಗಳ ಸೋಲು ಕಂಡಿತು. ಭಾರತ ಪರ ಭುವನೇಶ್ವರ್​ ಕುಮಾರ್​, ಚಹಾಲ್​ ಮತ್ತು ರವಿ ತಲಾ ಒಂದೊಂದು ವಿಕೆಟ್​ ಪಡೆದು ತಂಡಕ್ಕೆ ಆಸರೆಯಾದರು.

Last Updated : Feb 19, 2022, 2:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.