ETV Bharat / sports

ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್ ಇನ್ನಿಂಗ್ಸ್​ಗೆ ಒಲಿದ ಜಯ: ತಪ್ಪಿದ ಕ್ಲೀನ್​​ ಸ್ವೀಪ್​ ಮುಖಭಂಗ

author img

By ETV Bharat Karnataka Team

Published : Dec 10, 2023, 10:54 PM IST

ENGW vs INDW 3rd T20: ಇಂಗ್ಲೆಂಡ್​ ವಿರುದ್ಧದ ಮೂರನೇ ಟಿ20 ಪಂದ್ಯವನ್ನು ಗೆದ್ದ ವನಿತೆಯರ ಪಡೆ ಕ್ಲೀನ್​ಸ್ವೀಪ್​ ಮುಖಭಂಗವನ್ನು ತಪ್ಪಿಸಿಕೊಂಡಿದೆ.

India Women vs England Women
India Women vs England Women

ಮುಂಬೈ (ಮಹಾರಾಷ್ಟ್ರ): ಆಂಗ್ಲರ ವಿರುದ್ಧದ ಕೊನೆಯ ಪಂದ್ಯದಲ್ಲಿ ಆಲ್​ರೌಂಡರ್​ ಪ್ರದರ್ಶನ ನೀಡದ ಹರ್ಮನ್​ಪ್ರೀತ್​ ಕೌರ್​ ಪಡೆ ಕ್ಲೀನ್​ ಸ್ವೀಪ್​ನಿಂದ ತಪ್ಪಿಸಿಕೊಂಡಿತು. ಉಪನಾಯಕಿ ಸ್ಮೃತಿ ಮಂಧಾನ ಮತ್ತು ಜೆಮಿಮಾ ರಾಡ್ರಿಗಸ್ ಅವರ ಇನ್ನಿಂಗ್ಸ್​ ನೆರವಿನಿಂದ ಭಾರತದ ವನಿತೆಯರು ಒಂದು ಓವರ್​ ಉಳಿಸಿಕೊಂಡು ಪಂದ್ಯವನ್ನು ಜಯಿಸಿದ್ದರು.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಇಂಗ್ಲೆಂಡ್​ ತಂಡ ಶ್ರೇಯಾಂಕ ಪಾಟೀಲ್, ಸೈಕಾ ಇಶಾಕ್, ಅಮಂಜೋತ್ ಕೌರ್ ಮತ್ತು ರೇಣುಕಾ ಠಾಕೂರ್ ಸಿಂಗ್ ಅವರ ಬೌಲಿಂಗ್​ನಿಂದ ದೊಡ್ಡ ಮೊತ್ತ ಗಳಿಸಲಿಲ್ಲ. ಆದರೆ ಹೀದರ್ ನೈಟ್ (52) ಅರ್ಧಶತಕ ಮತ್ತು ಆಮಿ ಜೋನ್ಸ್ (25) ಅವರ ಸಮಯೋಚಿತ ಇನ್ನಿಂಗ್ಸ್​ನ ನೆರವಿನಿಂದ 20 ಓವರ್​ ಅಂತ್ಯಕ್ಕೆ 10 ವಿಕೆಟ್​ ನಷ್ಟಕ್ಕೆ 126 ರನ್​ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಭಾರತದ ವನಿತೆಯರಿಗೆ ಉತ್ತಮ ಆರಂಭ ಸಿಗಲಿಲ್ಲ. 6 ರನ್​ ಗಳಿಸಿದ ಶಫಾಲಿ ವರ್ಮಾ ಔಟ್​ ಆದರು. ಆದರೆ ಎರಡನೇ ವಿಕೆಟ್​ಗೆ ಸ್ಮೃತಿ ಮಂಧಾನ ಮತ್ತು ಜೆಮಿಮಾ ರಾಡ್ರಿಗಸ್ ಅರ್ಧಶತಕದ ಜೊತೆಯಾಟ ಆಡಿ ತಂಡದ ಒತ್ತಡವನ್ನು ಕಡಿಮೆ ಮಾಡಿದರು. 33 ಬಾಲ್ ಎದುರಿಸಿದ ಅವರು 4 ಬೌಂಡರಿಯ ಸಹಾಯದಿಂದ 29 ರನ್​ ಗಳಿಸಿ ವಿಕೆಟ್​ ಕೊಟ್ಟರು.

2 ರನ್​ನಿಂದ ಅರ್ಧಶತಕ ​ವಂಚಿತರಾದ ಮಂಧಾನ: ಉಪನಾಯಕಿ ಮಂಧಾನ ಕಳೆದ ಎರಡು ಪಂದ್ಯದಲ್ಲಿ ಬ್ಯಾಟಿಂಗ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಕೊನೆಯ ಪಂದ್ಯದಲ್ಲಿ ಎಚ್ಚರಿಕೆ ಬ್ಯಾಟಿಂಗ್​​ ಮಾಡಿದ ಅವರು ಒಂದಡೆ ವಿಕೆಟ್​ ಕಾಯ್ದುಕೊಂಡು ಇನ್ನಿಂಗ್ಸ್​ ಬೆಳೆಸಿದರು. ರಾಡ್ರಿಗಸ್ ನಂತರ ದೀಪ್ತಿ ಶರ್ಮಾ (12) ಮಂಧಾನಗೆ ಸಾಥ್​ ನೀಡಿದರು. 48 ಬಾಲ್​ನಲ್ಲಿ 5 ಬೌಂಡರಿ ಮತ್ತು 2 ಸಿಕ್ಸ್​ನಿಂದ 48 ರನ್​ ಗಳಿಸಿದ್ದ ಮಂಧಾನ ವಿಕೆಟ್​ ಕೊಟ್ಟರು. 2 ರನ್​ನಿಂದ 23ನೇ ಅರ್ಧಶತಕವನ್ನು ಮಿಸ್​ ಮಾಡಿಕೊಂಡರು. ಆದರೆ ಅವರ ಇನ್ನಿಂಗ್ಸ್​ ಪಂದ್ಯದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿತು.

ಗೆಲುವಿನ ದಡ ಸೇರಿಸಿದ ಅಮಂಜೋತ್ ಕೌರ್: ಮಂಧಾನ ವಿಕೆಟ್​ ಬಳಿಕ ರಿಚಾ ಘೋಷ್ ಸಹ ಔಟ್​ ಆದರು. ನಾಯಕಿ ಕೌರ್​ ಜೊತೆಗೆ ಅಮಂಜೋತ್ ಕೌರ್​ ಕೊನೆಯ 11 ರನ್​ಗೆ ಜೊತೆಯಾದರು. ಒಂದು ಓವರ್ ಬಾಕಿ ಇರುವಂತೆಯೇ ಇನ್ನಿಂಗ್ಸ್​ ಮುಕ್ತಾಯ ಮಾಡಿದ ಅವರು ಭಾರತಕ್ಕೆ 5 ವಿಕೆಟ್​ಗಳ ಗೆಲುವು ತಂದಿತ್ತರು.

ಆಂಗ್ಲರ ಪರ ​ಫ್ರೇಯಾ ಕೆಂಪ್ ಮತ್ತು ಸೋಫಿ ಎಕ್ಲೆಸ್ಟೋನ್ ತಲಾ 2 ವಿಕೆಟ್​ ಪಡೆದರೆ, ಷಾರ್ಲೆಟ್ ಡೀನ್ ಒಂದು ವಿಕೆಟ್​ ಪಡೆದರು. 4 ಓವರ್​ ಬೌಲಿಂಗ್​ ಮಾಡಿ ಕೇವಲ 19ರನ್​ ಕೊಟ್ಟು 3 ವಿಕೆಟ್​ ಕಬಳಿಸಿದ ಶ್ರೇಯಾಂಕ ಪಾಟೀಲ್​ ಪಂದ್ಯ ಶ್ರೇಷ್ಠರಾದರು.

ಇದನ್ನೂ ಓದಿ: ಗುವಾಹಟಿ ಮಾಸ್ಟರ್ಸ್: ಮಹಿಳೆಯರ ಡಬಲ್ಸ್ ಪ್ರಶಸ್ತಿ ಗೆದ್ದ ಅಶ್ವಿನಿ-ತನಿಶಾ ಜೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.