ETV Bharat / sports

IND vs WI 4th T20 : ಭಾರತ ಭರ್ಜರಿ ಬ್ಯಾಟಿಂಗ್​.. ಜೈಸ್ವಾಲ್​, ಗಿಲ್​ ಅರ್ಧಶತಕ

author img

By

Published : Aug 12, 2023, 10:01 PM IST

Updated : Aug 12, 2023, 11:06 PM IST

ಭಾರತ ಮತ್ತು ವೆಸ್ಟ್​ ಇಂಡೀಸ್​ ನಡುವಣ ನಾಲ್ಕನೇ ಟಿ 20 ಪಂದ್ಯದಲ್ಲಿ ಭಾರತ ಅಬ್ಬರದ ಬ್ಯಾಟಿಂಗ್​ ಮುಂದುವರೆಸಿದೆ. 13 ಓವರ್ ಅಂತ್ಯಕ್ಕೆ ಯಾವುದೇ ವಿಕೆಟ್​ ನಷ್ಟವಿಲ್ಲದೆ 139 ರನ್​ ಗಳಿಸಿದೆ.

india-vs-west-indies-4th-t-20-match
IND vs WI 4th T20 : ಶಿಮ್ರಾನ್​ , ಹೋಪ್​ ಭರ್ಜರಿ ಆಟ.. ಭಾರತಕ್ಕೆ 179 ರನ್​ ಗುರಿ

ಫ್ಲೋರಿಡಾ (ಅಮೆರಿಕ): ಭಾರತ ಮತ್ತು ವೆಸ್ಟ್​ ಇಂಡೀಸ್​ ನಡುವಿನ ನಾಲ್ಕನೇ ಟಿ 20 ಪಂದ್ಯ ಇಲ್ಲಿನ ಸೆಂಟ್ರಲ್​ ಬ್ರೋವರ್ಡ್​ ರೀಜನಲ್​ ಪಾರ್ಕ್ ಸ್ಟೇಡಿಯಂ​ನಲ್ಲಿ ನಡೆಯುತ್ತಿದ್ದು, ಭಾರತ ಅಬ್ಬರದ ಬ್ಯಾಟಿಂಗ್​ ಮುಂದುವರೆಸಿದೆ. ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿದ ವೆಸ್ಟ್​ ಇಂಡೀಸ್​ ತಂಡ 8 ವಿಕೆಟ್​ ನಷ್ಟಕ್ಕೆ 178 ರನ್​ ಗಳಿಸಿದೆ. ಶಾಯಿ ಹೋಪ್ (45)​ ಮತ್ತು ಶಿಮ್ರಾನ್​ ಹೆಟ್ಮಯರ್(61)​ ಅವರ ಭರ್ಜರಿ ಬ್ಯಾಟಿಂಗ್​ ನೆರವಿನಿಂದಾಗಿ ವೆಸ್ಟ್​ ಇಂಡೀಸ್​ ತಂಡವು 178 ರನ್​ ಗಳಿಸಿದೆ. ಈ ಗುರಿಯನ್ನು ಬೆನ್ನತ್ತಿದ ಭಾರತ 13 ಓವರ್ ಅಂತ್ಯಕ್ಕೆ ಯಾವುದೇ ವಿಕೆಟ್​ ನಷ್ಟವಿಲ್ಲದೆ 139 ರನ್​ ಗಳಿಸಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ಮಾಡಿದ ವೆಸ್ಟ್​ ಇಂಡೀಸ್​​ ತಂಡಕ್ಕೆ ಬಿರುಸಿನ ಆಟ ಆಡುವ ಮುನ್ಸೂಚನೆ ನೀಡಿದರು. ಭರ್ಜರಿಯಾಗಿ ಬ್ಯಾಟ್​ ಬೀಸಿದ ಆರಂಭಿಕ ಆಟಗಾರರಾದ ಕೈಲ್​ ಮೇಯರ್ಸ್​ (17), ಬ್ರಾಂಡನ್​ ಕಿಂಗ್​ (18) ರನ್​ ಗಳಿಸಿ ಇಬ್ಬರೂ ಆರ್ಷದೀಪ್​ ಅವರ ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸಿದರು. ಬಳಿಕ ಬಂದ ಶಾಯಿ ಹೋಪ್​ 2 ಸಿಕ್ಸರ್​ ಮತ್ತು 3 ಬೌಂಡರಿ ನೆರವಿನಿಂದ 45 ರನ್​ ಗಳಿಸಿದರು. 45 ರನ್​ ಗಳಿಸಿದ್ದಾಗ ಯಜ್ವೇಂದ್ರ ಚಾಹಲ್​ ಅವರಿಗೆ ವಿಕೆಟ್​ ಒಪ್ಪಿಸಿದರು.

ಬಳಿಕ ಬಂದ ನಿಕೋಲಸ್​ ಪೂರನ್​ 1 ರನ್​, ರೋವನ್​ ಪೊವೆಲ್​ 1 ರನ್​ ಗಳಿಸಿ ಔಟಾದರು. ಐದು ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಶಿಮ್ರಾನ್ ಹೆಟ್ಮಯರ್​ ಆಸರೆಯಾದರು. 4 ಸಿಕ್ಸರ್​, 3 ಬೌಂಡರಿ ಮೂಲಕ 61 ರನ್​ ಗಳಿಸಿದ ಹೆಟ್ಮಯರ್​ ಆರ್ಷದೀಪ್​ ಎಸೆತದಲ್ಲಿ ತಿಲಕ್​ ವರ್ಮಾಗೆ ಕ್ಯಾಚಿತ್ತರು. ಬಳಿಕ ಬಂದ ಶೆಫರ್ಡ್​ 9 ರನ್​, ಜೇಸನ್ ಹೋಲ್ಡರ್​ 3 ರನ್ ಔಟಾದರು. ಓಡಿಯನ್​ ಸ್ಮಿತ್​ 15 ರನ್​, ಅಕೀಲ್​ ಹುಸೇನ್​ 5 ರನ್​ ಗಳಿಸಿ ಔಟಾಗದೇ ಉಳಿದರು. ಈ ಮೂಲಕ ವೆಸ್ಟ್​ ಇಂಡೀಸ್​ ತಂಡ 8 ವಿಕೆಟ್​ ನಷ್ಟಕ್ಕೆ 178 ರನ್​ ಗಳಿಸಿತು.

ಭಾರತ ಪರ ಅರ್ಷ ದೀಪ್​ ಸಿಂಗ್​ 38/3, ಕುಲದೀಪ್​ ಯಾದವ್​ 26/2, ಅಕ್ಷರ್ ಪಟೇಲ್​, ಚಾಹಲ್​, ಮುಕೇಶ್​ ಕುಮಾರ್​ ತಲಾ 1 ವಿಕೆಟ್​ ಗಳಿಸಿದರು. ಬಳಿಕ 179 ರನ್​ಗಳ ಗುರಿಯನ್ನು ಬೆನ್ನತ್ತಿದ ಭಾರತ, ಯಾವುದೇ ವಿಕೆಟ್​ ನಷ್ಟವಿಲ್ಲದೆ 12ನೇ ಓವರ್​ಗೆ 131 ರನ್​ ಗಳಿಸಿದೆ. ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್​ 1 ಸಿಕ್ಸರ್​ , 9 ಬೌಂಡರಿ ಮೂಲಕ 61 ರನ್​ ಗಳಿಸಿದ್ದು, ಶುಭ್​ಮನ್​ ಗಿಲ್​ 4 ಸಿಕ್ಸರ್​, 3 ಬೌಂಡರಿಯೊಂದಿಗೆ 62 ರನ್​ ಗಳಿಸಿ ಆಟ ಅಬ್ಬರದ ಆಟ ಮುಂದುವರೆಸಿದ್ದಾರೆ.

ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಭಾರತ ಉತ್ತಮ ರೆಕಾರ್ಡ್​ ಹೊಂದಿದೆ. ಇಲ್ಲಿ ಆಡಿದ ಆರು ಪಂದ್ಯದಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿದ್ದರೆ, 1ರಲ್ಲಿ ಸೋತು ಒಂದು ರದ್ದಾಗಿದೆ. ವೆಸ್ಟ್​ ಇಂಡೀಸ್​ ಇದೇ ಆಡಿರುವ ಒಟ್ಟಾರೆ 9 ಪಂದ್ಯದಲ್ಲಿ 3ರಲ್ಲಿ ಮಾತ್ರ ಗೆಲುವು ಕಂಡಿದೆ.

ಇದನ್ನೂ ಓದಿ : Asia Cup 2023: ಏಷ್ಯಕಪ್​ಗೆ ಪಾಕಿಸ್ತಾನ, ಬಾಂಗ್ಲಾ ತಂಡ ಪ್ರಕಟ.. ವಿಶ್ವಕಪ್​ನಲ್ಲೂ ಇದೇ ಆಟಗಾರರು ಆಡುವ ಸಾಧ್ಯತೆ..

Last Updated : Aug 12, 2023, 11:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.