ETV Bharat / sports

ನಾಳೆ ಭಾರತ ಪಾಕ್​ ಕದನ: ಅಗ್ರ ಕ್ರಮಾಂಕದ ಬ್ಯಾಟಿಂಗ್​ ಸಿಡಿಯಬೇಕೆಂದ ಆವೇಶ್​ ಖಾನ್​

author img

By

Published : Sep 3, 2022, 4:18 PM IST

ಏಷ್ಯಾ ಕಪ್​ ಟೂರ್ನಿಯ ಸೂಪರ್​ 4 ಹಂತ ಪಂದ್ಯದಲ್ಲಿ ನಾಳೆ ಭಾರತ ಮತ್ತು ಪಾಕಿಸ್ತಾನ ಮತ್ತೆ ಎದುರಾಗಲಿವೆ. ತಂಡದ ಅಗ್ರಕ್ರಮಾಂಕದ ಬ್ಯಾಟಿಂಗ್​ ಸುಧಾರಿಸುವ ಬಗ್ಗೆ ಬೌಲರ್​ ಆವೇಶ್​ ಖಾನ್ ಮಾತನಾಡಿದ್ದಾರೆ. ಪವರ್​ಪ್ಲೇ ಅನ್ನು ಬಳಸಿಕೊಂಡು ರನ್​ ಗಳಿಸಲೂ ಸಲಹೆ ನೀಡಿದ್ದಾರೆ.

Avesh Khan
ನಾಳೆ ಭಾರತ- ಪಾಕ್​ ಕದನ

ದುಬೈ: ಇಂದಿನಿಂದ ಏಷ್ಯಾಕಪ್​ ಟೂರ್ನಿಯ ಸೂಪರ್​ ಫೋರ್​ ಪಂದ್ಯಗಳು ನಡೆಯಲಿದ್ದು, ನಾಳೆ ಭಾರತ ತಂಡಕ್ಕೆ ಪಾಕಿಸ್ತಾನ ಮತ್ತೊಮ್ಮೆ ಎದುರಾಗಲಿದೆ. ಭಾರತ ತಂಡದಲ್ಲಿ ಬೌಲಿಂಗ್ ಮತ್ತು ಅಗ್ರ ಕ್ರಮಾಂಕವನ್ನು ಬಲಪಡಿಸಬೇಕಿದೆ ಎಂದು ವೇಗದ ಬೌಲರ್​ ಆವೇಶ್​ ಖಾನ್​ ಅಭಿಪ್ರಾಯಪಟ್ಟಿದ್ದಾರೆ.

ನಾಕೌಟ್​ ಪಂದ್ಯದಲ್ಲಿ ಪಾಕ್​ ತಂಡವನ್ನು ಬಗ್ಗುಬಡಿದ ಭಾರತ ಎರಡನೇ ಪಂದ್ಯದಲ್ಲಿ ಕ್ರಿಕೆಟ್​ ಕೂಸು ಹಾಂ​ಕಾಂಗ್​ ಸೋಲಿಸಿ ಸೂಪರ್​ 4 ಹಂತ ತಲುಪಿದೆ. ಪೈನಲ್​ ತಲುಪಲು ತಂಡಗಳಿಗೆ ಪ್ರತಿ ಪಂದ್ಯದಲ್ಲೂ ಗೆಲುವು ಸಾಧಿಸುವುದು ಅಗತ್ಯ. ಅಲ್ಲದೇಮ ಪಾಕ್​ ವಿರುದ್ಧದ ಪಂದ್ಯ ಎಂದಿಗೂ ಯುದ್ಧದಂತೆಯೇ ಭಾಸವಾಗುತ್ತದೆ. ಭಾರತ ಗೆಲ್ಲಲೇಬೇಕು ಎಂಬುದು ಅಭಿಮಾನಿಗಳ ಆಕಾಶದೆತ್ತರದ ಆಸೆ.

ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೂ, ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ಕಂಡಿತ್ತು. ಗಾಯದ ಬಳಿಕ ಚೇತರಿಸಿಕೊಂಡು ಆಡುತ್ತಿರುವ ಕೆ.ಎಲ್​. ರಾಹುಲ್​ ತಾವೆದುರಿಸಿದ ಮೊದಲ ಎಸೆತದಲ್ಲಿಯೇ ಔಟಾಗಿದ್ದರು. ಹಿಟ್​ಮ್ಯಾನ್​ ಖ್ಯಾತಿಯ ನಾಯಕ ರೋಹಿತ್ ಶರ್ಮಾ ರನ್​ ಗಳಿಸಲು ಪರದಾಡಿ ಔಟಾದರು. ಲಯದ ಸಮಸ್ಯೆ ನಡುವೆ ವಿರಾಟ್​ ಕೊಹ್ಲಿ 35 ರನ್​ ಮಾತ್ರ ಗಳಿಸಿದರು.

ಟಾಪ್​ ಬ್ಯಾಟ್ಸ್​ಮನ್​ಗಳ ವೈಫಲ್ಯ ತಂಡಕ್ಕೆ ಮುಳುವಾಗಲಿದೆ. ಪಾಕ್​ ವಿರುದ್ಧ ಸಿಡಿದಿದ್ದ ಆಲ್​ರೌಂಡರ್​ ರವೀಂದ್ರ ಜಡೇಜಾ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಬ್ಯಾಟಿಂಗ್​ ಪವರ್​ಪ್ಲೇ ಅನ್ನು ಬಳಸಿಕೊಳ್ಳಲು ತಂಡ ಸೋತಿದೆ. ಇದು ಮುಂದಿನ ಪಂದ್ಯಗಳಲ್ಲಿ ಮರುಕಳಿಸಬಾರದು ಎಂದು ಆವೇಶ್​ಖಾನ್​ ಅಭಿಪ್ರಾಯಪಟ್ಟಿದ್ದಾರೆ.

ಮತ್ತೆ ಪ್ರಯೋಗ ನಡೆಸ್ತಾರಾ ರಾಹುಲ್​: ಪಾಕ್​ ವಿರುದ್ಧದ ಪಂದ್ಯದಲ್ಲಿ ಎಡ- ಬಲ ಆಟವನ್ನು ಪ್ರಯೋಗ ಮಾಡಲು ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಅವರು ರವೀಂದ್ರ ಜಡೇಜಾರನ್ನು 4ನೇ ಕ್ರಮಾಂಕದಲ್ಲಿ ಆಡಿಸಿದ್ದರು. ಇದು ವರ್ಕ್​ ಕೂಡ ಆಗಿತ್ತು. ಸಿಡಿದ ಜಡೇಜಾ 35 ರನ್​ ಚಚ್ಚಿದ್ದರು. ಆದರೆ, ಗಾಯಗೊಂಡ ಅವರು ಟೂರ್ನಿಯಿಂದ ಹೊರಬಿದ್ದಿದ್ದು, ವಿಕೆಟ್​ ಕೀಪರ್​ ರಿಷಬ್​ ಪಂತ್​ಗೆ ಈ ಜವಾಬ್ದಾರಿ ವಹಿಸುತ್ತಾರೆಯೇ ಎಂದು ನಾಳಿನ ಪಂದ್ಯದಲ್ಲಿ ಗೊತ್ತಾಗಲಿದೆ.

ರೋಹಿತ್​, ರಾಹುಲ್​, ಕೊಹ್ಲಿಗೆ ಏನಾಯ್ತು: ಬ್ಯಾಟಿಂಗ್​ ಪವರ್​ಪ್ಲೇ ವೇಳೆ ತಂಡ ವೇಗವಾಗಿ ರನ್​ ಮಾಡಲು ಸೋತಿದೆ. ಇದು ಮಧ್ಯಮ ಕ್ರಮಾಂಕದ ಮೇಲೆ ಹೊರೆ ಹೆಚ್ಚಿಸಲಿದ್ದು, ಈ ಕಾರಣಕ್ಕಾಗಿ ರಾಹುಲ್​, ರೋಹಿತ್​ ಸಿಡಿಯಲೇಬೇಕಿದೆ. ಇದು ಎದುರಾಳಿ ತಂಡವನ್ನು ಕಟ್ಟಿಹಾಕಲು ಸಾಧ್ಯವಾಗುತ್ತದೆ.

ಹಾಂ​ಕಾಂಗ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿ 6 ತಿಂಗಳ ಬಳಿಕ ಅರ್ಧಶತಕ ಸಿಡಿಸಿದರು. ಸಿಕ್ಸ್​ ಬಾರಿಸಿ ಆತ್ಮವಿಶ್ವಾಸ ಗಳಿಸಿರುವ ಕೊಹ್ಲಿ ನಾಳಿನ ಪಾಕ್​ ವಿರುದ್ಧದ ಪಂದ್ಯದಲ್ಲಿ ಇದೇ ಪ್ರದರ್ಶನ ನೀಡಬೇಕಿದೆ.

ಓದಿ: ಏಷ್ಯಾಕಪ್​​​ನಲ್ಲಿ ಹಾಂಗ್​​​​ಕಾಂಗ್​ ವಿರುದ್ಧ ಗೆದ್ದ ಪಾಕ್​​: ನಾಳೆ ಮತ್ತೊಮ್ಮೆ ಭಾರತ-ಪಾಕ್​ ಹೈವೋಲ್ಟೇಜ್​ ಪಂದ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.