ETV Bharat / sports

ಇಂದಾದರೂ ನಡೆಯುತ್ತಾ ಭಾರತ-ಪಾಕಿಸ್ತಾನ ಪಂದ್ಯ? ಹವಾಮಾನ ವರದಿ ಹೀಗಿದೆ!

author img

By ETV Bharat Karnataka Team

Published : Sep 11, 2023, 12:00 PM IST

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಿನ್ನೆ ಮಳೆಯಿಂದಾಗಿ ಅಪೂರ್ಣಗೊಂಡಿದ್ದು, ಇಂದು ಮಧ್ಯಾಹ್ನದಿಂದ ಮತ್ತೆ ಪ್ರಾರಂಭವಾಗಲಿದೆ. ಸದ್ಯ ಕೊಲಂಬೊದಲ್ಲಿ ಹವಾಮಾನ ಹೇಗಿದೆ ತಿಳಿಯೋಣ.

Reserve Day match  India Pakistan Reserve Day match  Weather report over India Pakistan  India vs Pakistan Asia Cup 2023  ಇಂದು ಭಾರತ ಪಾಕಿಸ್ತಾನ ಮೀಸಲು ದಿನ ಪಂದ್ಯ  ಪ್ರೇಮದಾಸ್​ ಮೈದಾನದಲ್ಲಿ ಮತ್ತೆ ವರುಣನ ಆಟ  ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಪಂದ್ಯ  ಪಂದ್ಯ ಮಳೆಯಿಂದಾಗಿ ಅಪೂರ್ಣ  ಇಂದು ಮಧ್ಯಾಹ್ನದಿಂದ ಮತ್ತೆ ಪ್ರಾರಂಭ  ಅಲ್ಲಿ ಹವಮಾನ ವರದಿ ಹೇಗಿದೆ  ಏಷ್ಯಾಕಪ್‌ನ ಸೂಪರ್ ಫೋರ್‌  ಪಾಕಿಸ್ತಾನ ನಡುವಿನ ಪಂದ್ಯ ಮೀಸಲು ದಿನಕ್ಕೆ ಶಿಫ್ಟ್​​ ಹೇಗಿದೆ ಕೊಲಂಬೊದ ಹವಾಮಾನ ಸ್ಥಿತಿ
ಇಂದು ಭಾರತ ಪಾಕಿಸ್ತಾನ ಮೀಸಲು ದಿನ ಪಂದ್ಯ

ಕೊಲೊಂಬೊ (ಶ್ರೀಲಂಕಾ): ಏಷ್ಯಾಕಪ್‌ನ ಸೂಪರ್ ಫೋರ್‌ ಘಟ್ಟದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಇಂದಿನ ಮೀಸಲು ದಿನಕ್ಕೆ ಶಿಫ್ಟ್​​ ಆಗಿದೆ. ಆದ್ರೆ ಈ ಪಂದ್ಯ ನಡೆಯುವ ಕೊಲಂಬೊ ನಗರಿಯಲ್ಲಿ ಮಳೆ ಸುರಿಯುವ ದಟ್ಟ ಕಾರ್ಮೋಡ ಕಂಡುಬಂದಿದೆ. ಹೀಗಾಗಿ, ಕ್ರಿಕೆಟ್‌ ಪ್ರೇಮಿಗಳಿಗೆ ಮತ್ತೆ ನಿರಾಶೆ ಕಾದಿದೆ.

ನಿನ್ನೆ ಪ್ರೇಮದಾಸ ಸ್ಟೇಡಿಯಂನಲ್ಲಿ ಪಂದ್ಯ ಶುರುವಾದಾಗ ಬಿಸಿಲು ಬೆಳಗುತ್ತಿತ್ತು. ಹವಾಮಾನ ಮಾಹಿತಿ ಒದಗಿಸುವ ವೆಬ್‌ಸೈಟ್‌ಗಳ ಭವಿಷ್ಯ ತಪ್ಪಾಯಿತು ಎಂದೇ ಅನೇಕರು ಭಾವಿಸಿದ್ದರು. ಆದರೆ, ಭಾರತೀಯ ಇನಿಂಗ್ಸ್‌ನ 25ನೇ ಓವರ್‌ನಲ್ಲಿ ಆರಂಭವಾದ ಮಳೆ, ಕೆಲ ಹೊತ್ತಿನಲ್ಲಿ ಧಾರಾಕಾರ ಸ್ವರೂಪ ಪಡೆಯಿತು. ಔಟ್‌ಫೀಲ್ಡ್ ಕೆಸರುಮಯವಾಯಿತು. ಮಳೆ ನಿಂತ ಬಳಿಕ ನೀರು ನಿಂತು ಇಡೀ ಮೈದಾನ ಒದ್ದೆಯಾಯಿತು. ಪಂದ್ಯ ಮುನ್ನಡೆಸಲು ಸಾಧ್ಯವೇ ಆಗಲಿಲ್ಲ. ಹೀಗಾಗಿ ಪಂದ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಿ ಇಂದಿನ ಮೀಸಲು ದಿನಕ್ಕೆ ಮುಂದೂಡಲಾಯಿತು.

ಕೊಲಂಬೊ ಹವಾಮಾನ ವರದಿ: ಕೊಲಂಬೊದಲ್ಲಿ ಇಂದು ಶೇ 80ರಿಂದ 90ರಷ್ಟು ಮಳೆ ಸುರಿಯುವ ಸಾಧ್ಯತೆ ಇದೆ. weather.com ಶೇ 90 ರಷ್ಟು ಮಳೆಯಾಗುವ ಮುನ್ಸೂಚನೆ ನೀಡಿದೆ. ಸ್ಥಳೀಯ ಕಾಲಮಾನದ ಪ್ರಕಾರ, ಮಧ್ಯಾಹ್ನ 3 ಗಂಟೆಯ ಬಳಿಕ ಶೇ 70ರಷ್ಟು ಮಳೆ ಬೀಳುವ ಸಾಧ್ಯತೆ ಕಂಡುಬಂದಿದೆ. ಸಂಜೆ 5:30ರ ನಂತರ ಗರಿಷ್ಠ ಮಳೆಯಾಗಲಿದೆ ಎಂದು weather.com ಭವಿಷ್ಯ ನುಡಿದಿದೆ. ಭಾರತ ಮತ್ತು ಪಾಕಿಸ್ತಾನದ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ಈ ಸುದ್ದಿ ನಿರಾಶೆ ಮೂಡಿಸಿದೆ.

ಪಂದ್ಯ ರದ್ದಾದರೆ ಏನಾಗುತ್ತೆ?: ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಮೀಸಲು ದಿನದಂದು ಪಂದ್ಯ ಮತ್ತೆ ಮಳೆಯಿಂದಾಗಿ ರದ್ದಾಗುವ ಸಂಭವ ದಟ್ಟವಾಗಿದೆ. ಒಂದು ವೇಳೆ ರದ್ದಾದರೆ ಎರಡೂ ತಂಡಗಳು ಅಂಕಗಳನ್ನು ಹಂಚಿಕೊಳ್ಳಬಹುದು. ಇದಕ್ಕೂ ಮೊದಲು ಭಾರತ ಮತ್ತು ಪಾಕಿಸ್ತಾನ ನಡುವಿನ ಗುಂಪು ಹಂತದಲ್ಲಿ ನಡೆದ ಮೊದಲ ಪಂದ್ಯವೂ ಮಳೆಗೆ ಆಹುತಿಯಾಗಿತ್ತು.

ನಿನ್ನೆಯ ಮ್ಯಾಚ್‌ ಹೇಗಿತ್ತು?: ರೋಹಿತ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಆಕ್ರಮಣಕಾರಿ ಅರ್ಧಶತಕದಿಂದಾಗಿ ಭಾರತ 24.1 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 147 ರನ್ ಗಳಿಸಿತ್ತು. ಇಬ್ಬರು ಆರಂಭಿಕರು ಔಟಾದ ನಂತರ ಮೈದಾನದಲ್ಲಿ ಮಳೆ ಅಬ್ಬರಿಸಿತು. ಅಂತಿಮವಾಗಿ ಪಂದ್ಯವನ್ನು ಮೀಸಲು ದಿನ ನಡೆಸುವ ನಿರ್ಧಾರ ತೆಗೆದುಕೊಳ್ಳಲಾಯಿತು.

ಇದನ್ನೂ ಓದಿ: ಬುಮ್ರಾ ಅಭಿನಂದಿಸಿ ವಿಶೇಷ ಉಡುಗೊರೆ ನೀಡಿದ ಪಾಕ್ ವೇಗಿ ಶಾಹೀನ್ ಅಫ್ರಿದಿ! ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.