IND vs NZ Test: ದಿಢೀರ್ ಕುಸಿದ ಭಾರತಕ್ಕೆ ಅಯ್ಯರ್-ಜಡೇಜಾ ಆಸರೆ, ಟೀ ವಿರಾಮಕ್ಕೆ 154/4

author img

By

Published : Nov 25, 2021, 11:58 AM IST

Updated : Nov 25, 2021, 3:04 PM IST

India vs New Zealand first test

ಕಿವೀಸ್​ ವಿರುದ್ಧದ ಕಾನ್ಪುರ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಟೀ ವಿರಾಮದ ವೇಳೆಗೆ 4 ವಿಕೆಟ್​​ಗೆ 154 ರನ್​ ಗಳಿಸಿದೆ. ಅಯ್ಯರ್ 17 ಮತ್ತು ಜಡೇಜಾ 6 ರನ್​ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಕಾನ್ಪುರ: ಕಿವೀಸ್​ ವಿರುದ್ಧದ ಸರಣಿಯ ಮೊದಲ ಟೆಸ್ಟ್​ ಪಂದ್ಯದಲ್ಲಿ ಶುಭಮನ್ ಗಿಲ್​ ಅವರ ಅರ್ಧಶತಕದ ಬಲದೊಂದಿಗೆ ಭೋಜನ ವಿರಾಮದ ವೇಳೆಗೆ 1 ವಿಕೆಟ್​​ಗೆ 82 ರನ್​ ಗಳಿಸಿದ್ದ ಭಾರತ ತಂಡ ದಿಢೀರ್​ 3 ವಿಕೆಟ್​ ಕಳೆದುಕೊಂಡು 154 ರನ್​ಗಳಿಸಿದೆ.

ಟಾಸ್​ ಗೆದ್ದ ಭಾರತದ ತಂಡದ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್​ ಆಯ್ದುಕೊಂಡರು. ಆರಂಭಿಕರಾಗಿ ಯುವ ಆಟಗಾರರಾದ ಶುಭಮನ್ ಗಿಲ್, ಮಯಾಂಕ್ ಅಗರ್ವಾಲ್ ಕಣಕ್ಕಿಳಿದರು. ಆದರೆ, ತಂಡದ ಮೊತ್ತ 21 ರನ್​ಗಳಾಗಿದ್ದಾಗಲೇ 28 ಎಸೆತಗಳಲ್ಲಿ 13 ರನ್​ ಬಾರಿಸಿದ್ದ ಅಗರ್ವಾಲ್, ಜೇಮಿಸನ್​ ಬೌಲಿಂಗ್​ನಲ್ಲಿ ಟಾಮ್ ಬ್ಲಂಡೆಲ್​ಗೆ ಕ್ಯಾಚ್​ ನೀಡಿ ಔಟಾದರು.

ಭೋಜನ ವಿರಾಮದ ಬೆನ್ನಲ್ಲೇ ಅರ್ಧಶತಕ ಸಿಡಿಸಿದ್ದ ಗಿಲ್ (52) ಜೇಮಿಸನ್​ ಬೌಲಿಂಗ್​ನಲ್ಲಿ ಬೌಲ್ಡ್​ ಆದರು. ನಂತರ ಆಗಮಿಸಿದ ನಾಯಕ ರಹಾನೆ ಚೇತೇಶ್ವರ ಪೂಜಾರ(26) ಅವರೊಂದಿಗೆ 3ನೇ ವಿಕೆಟ್​ಗೆ 24ರನ್​ ಸೇರಿಸಿದರು. ಪೂಜಾರ 26 ರನ್​ಗಳಿಸಿದ್ದ ವೇಳೆ ಸೌಥಿ ಬೌಲಿಂಗ್​ನಲ್ಲಿ ಕೀಪರ್ ಬ್ಲಂಡೆಲ್​ಗೆ ಕ್ಯಾಚ್​ ನೀಡಿ ಔಟಾದರು. ವೇಗದ ಆಟಕ್ಕೆ ಮುಂದಾಗಿ 63 ಎಸೆತಗಳಲ್ಲಿ 6 ಬೌಂಡರಿ ಸಿಡಿಸಿದ್ದ ನಾಯಕ ರಹಾನೆ ಕೂಡ ಜೇಮಿಸನ್​ಗೆ 3ನೇ ಬಲಿಯಾದರು.

ಇದೀಗ ಟೀ ವಿರಾಮದ ವೇಳೆಗೆ ಭಾರತ 4 ವಿಕೆಟ್ ಕಳೆದುಕೊಂಡು 154 ರನ್​ಗಳಿಸಿದೆ. ಅಯ್ಯರ್ 17 ಮತ್ತು ಜಡೇಜಾ 6 ರನ್​ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಈ ಪಂದ್ಯದ ಮೂಲಕ ಮಧ್ಯಮ ಕ್ರಮಾಂಕದ ಬ್ಯಾಟರ್​ ಶ್ರೇಯಸ್​ ಅಯ್ಯರ್​ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದು, ಭಾರತೀಯ ಕ್ರಿಕೆಟ್​ನ ದಂತಕತೆ ಸುನಿಲ್​ ಗವಾಸ್ಕರ್​ ಅವರು ಟೆಸ್ಟ್​ ಕ್ಯಾಪ್​ ನೀಡಿ ಶುಭ ಕೋರಿದರು.

ಇದನ್ನೂ ಓದಿ: VIDEO:​ ಟೆಸ್ಟ್​ ಕ್ರಿಕೆಟ್​ಗೆ ಶ್ರೇಯಸ್​ ಪದಾರ್ಪಣೆ.. ಕ್ಯಾಪ್​ ನೀಡಿದ ಸುನಿಲ್​ ಗವಾಸ್ಕರ್​

Last Updated :Nov 25, 2021, 3:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.