2ನೇ ಟಿ20 ಪಂದ್ಯ... ಪ್ರತಿ ತಂಡಕ್ಕೆ 8 ಓವರ್​ ನಿಗದಿ... ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ

author img

By

Published : Sep 23, 2022, 7:04 PM IST

Updated : Sep 23, 2022, 9:35 PM IST

india-vs-australia-t20-match-report

ನಾಗ್ಪುರದಲ್ಲಿ ಮಳೆಯಾಗುತ್ತಿರುವ ಕಾರಣ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟಿ20 ಪಂದ್ಯ ವಿಳಂಬವಾಗಿದೆ. ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ನಾಗ್ಪುರ (ಮಹಾರಾಷ್ಟ್ರ): ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ 24 ಓವರ್​ಗಳನ್ನು ಕಡಿತಗೊಳಿಸಲಾಗಿದೆ. ಪ್ರತಿ ತಂಡಕ್ಕೆ ತಲಾ 8 ಓವರ್​ಗಳನ್ನು ನಿಗದಿ ಮಾಡಿದ್ದು, ಒಟ್ಟು 16 ಓವರ್​ಗಳಿಗೆ ಪಂದ್ಯ ನಡೆಯಲಿದೆ.

ನಾಗ್ಪುರದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಮೈದಾನ ಒದ್ದೆಯಾಗಿ ಕಾರಣ ಟಾಸ್ ವಿಳಂಬವಾಗಿತ್ತು. ಸಂಜೆ 7 ಗಂಟೆ, 8 ಗಂಟೆ ಹಾಗೂ ನಂತರ 8.45ಕ್ಕೆ ಗ್ರೌಂಡ್​ ಅನ್ನು ಪರಿಶೀಲನೆ ನಂತರ ಕೊನೆಗೆ 9.15ಕ್ಕೆ ಟಾಸ್​ ನಿಗದಿ ಮಾಡಲಾಯಿತು. ಅಲ್ಲದೇ, 9.30ಕ್ಕೆ ಪಂದ್ಯ ಆರಂಭಿಸಲು ನಿರ್ಧರಿಸಲಾಯಿತು. ಜೊತೆಗೆ ಪ್ರತಿ ಇನಿಂಗ್ಸ್‌ನಲ್ಲಿ ಎಂಟು ಓವರ್‌ಗಳನ್ನು ನಿಗದಿ ಮಾಡಿ ಎರಡು ಓವರ್‌ಗಳು ಪವರ್‌ಪ್ಲೇ ಎಂದು ಘೋಷಿಸಲಾಯಿತು.

1ನೇ ಇನಿಂಗ್ಸ್ 9.30ಕ್ಕೆ ಆರಂಭವಾಗಿ 10:04ಕ್ಕೆ ಮುಗಿಯಲಿದೆ. ಮಧ್ಯಂತರವು 10.04ರಿಂದ 10.14ರವರೆಗೆ 10 ನಿಮಿಷ ಇರಲಿದೆ. 2ನೇ ಇನಿಂಗ್ಸ್ 10.14ಕ್ಕೆ ಶುರುವಾಗಿ 10.48ಕ್ಕೆ ಮುಗಿಯಲಿದೆ. ಪ್ರತಿ ಬೌಲರ್‌ಗೆ ಗರಿಷ್ಠ 2 ಓವರ್‌ಗಳು ಹಾಗೂ ಸ್ಲೋ ಓವರ್ ರೇಟ್‌ಗೆ ಆಟದ ಪೆನಾಲ್ಟಿಯೂ ಇರುವುದಿಲ್ಲ ಹಾಗೂ ಯಾವುದೇ ಡ್ರಿಂಕ್ಸ್​ ವಿರಾಮವ ಇರುವುದಿಲ್ಲ.

ಪಂಜಾಬ್​ನ ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ನಾಲ್ಕು ವಿಕೆಟ್​ಗಳಿಂದ ಗೆಲುವು ಸಾಧಿಸಿದ್ದ ಆಸ್ಟ್ರೇಲಿಯಾ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಇಂದು ನಾಗ್ಪುರದಲ್ಲಿ ಎರಡನೇ ಪಂದ್ಯ ಜರುಗಲಿದ್ದು, ಸೆಪ್ಟೆಂಬರ್​ 25ರಂದು ಹೈದರಾಬಾದ್​ನಲ್ಲಿ ಮೂರನೇ ಹಾಗೂ ಕೊನೆಯ ಪಂದ್ಯ ನಡೆಯಲಿದೆ.

ಇದನ್ನೂ ಓದಿ: ಟಿಕೆಟ್​​ಗಳ ಖರೀದಿಗಾಗಿ ನೂಕುನುಗ್ಗಲು: ಅಜರುದ್ದೀನ್ ವಿರುದ್ಧ ಕ್ರಿಮಿನಲ್ ಕೇಸ್​ ದಾಖಲಿಸುವಂತೆ ಒತ್ತಾಯ

Last Updated :Sep 23, 2022, 9:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.