ETV Bharat / sports

ಭಾರತ ಮತ್ತು ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್​: ಖವಾಜಾ ಶತಕ, ಗ್ರೀನ್ ಅರ್ಧಶತಕಕ್ಕೆ ಒಂದೇ ಹೆಜ್ಜೆ ಬಾಕಿ

author img

By

Published : Mar 9, 2023, 6:06 PM IST

ಭಾರತ ಮತ್ತು ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್​ನ ಮೊದಲನೇ ದಿನ ಪೂರ್ಣಗೊಂಡಿದ್ದು, ಆಸೀಸ್​ ತಂಡ ಮೊದಲ ಇನ್ನಿಂಗ್ಸ್​ನಲ್ಲಿ ನಾಲ್ಕು ವಿಕೆಟ್​ ಕಳೆದುಕೊಂಡು 255 ರನ್​ಗಳನ್ನು ಕಲೆ ಹಾಕಿದೆ.

India vs Australia 4th test day 1 update  Narendra Modi Stadium Ahmedabad  Australia won the toss and opt to bat  India vs Australia 4th Test  ಭಾರತ ಮತ್ತು ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್  ಗ್ರೀನ್ ಅರ್ಧಶತಕಕ್ಕೆ ಒಂದೇ ಹೆಜ್ಜೆ ಬಾಕಿ  ನಾಲ್ಕನೇ ಟೆಸ್ಟ್​ನ ಮೊದಲನೇ ದಿನ ಪೂರ್ಣ  ಆಸೀಸ್​ ತಂಡ ಮೊದಲ ಇನ್ನಿಂಗ್ಸ್  ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್  ಮೊದಲ ದಿನದಾಟದ ಅಂತ್ಯ  ಆರಂಭದಲ್ಲಿ ಆಕ್ರಮಣಕಾರಿ ಆಟವಾಡಿದ ಆರಂಭಿಕ ಆಟಗಾರ
ಖವಾಜಾ ಶತಕ, ಗ್ರೀನ್ ಅರ್ಧಶತಕಕ್ಕೆ ಒಂದೇ ಹೆಜ್ಜೆ ಬಾಕಿ

ಅಹಮದಾಬಾದ್, ಗುಜರಾತ್​: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ (India vs Australia)ನ ಮೊದಲ ದಿನದಾಟ ಪೂರ್ಣಗೊಂಡಿದೆ. ಮೊದಲ ದಿನದಾಟದ ಅಂತ್ಯಕ್ಕೆ ಆಸೀಸ್ ಮೊದಲ ಇನಿಂಗ್ಸ್​ನಲ್ಲಿ 4 ವಿಕೆಟ್ ನಷ್ಟಕ್ಕೆ 255 ರನ್ ಗಳಿಸಿದೆ. ಉಸ್ಮಾನ್ ಖವಾಜಾ (104*; 251 ಎಸೆತಗಳಲ್ಲಿ 15 ಬೌಂಡರಿ) ಶತಕ ಗಳಿಸಿ ತಮ್ಮ ಆಟವನ್ನು ನಾಳೆಗೆ ಕಾಯ್ದಿರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಕ್ಯಾಮರೂನ್ ಗ್ರೀನ್ (49*; 64 ಎಸೆತಗಳಲ್ಲಿ 8 ಬೌಂಡರಿ) ಅವರ ಅರ್ಧಶತಕಕ್ಕೆ ಒಂದು ರನ್ ಬಾಕಿ ಉಳಿದಿದ್ದು, ಅವರು ನಾಳೆಗೆ ತಮ್ಮ ಆಟವನ್ನು ಕಾಪಾಡಿಕೊಂಡಿದ್ದಾರೆ.

ತಮ್ಮ ತಂಡದ ಪರ ಟ್ರಾವಿಸ್ ಹೆಡ್ 32 ರನ್​, (44 ಎಸೆತ, 7 ಬೌಂಡರಿ), ಲಾಬುಶೇನ್​ಗೆ 3 ರನ್​, ಹ್ಯಾಂಡ್ಸ್‌ಕಾಂಬ್ 17 ರನ್​ (27 ಎಸೆತ, 3 ಬೌಂಡರಿ) ಮತ್ತು ಸ್ಟೀವ್ ಸ್ಮಿತ್ 38 ರನ್​ (135 ಎಸೆತ, 3 ಬೌಂಡರಿ) ಗಳಿಸಿದರು. ಭಾರತದ ಬೌಲರ್‌ಗಳಲ್ಲಿ ಮೊಹಮ್ಮದ್ ಶಮಿ ಎರಡು ವಿಕೆಟ್ ಪಡೆದರು. ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದಿದ್ದಾರೆ.

ಆರಂಭದಲ್ಲಿ ಆಕ್ರಮಣಕಾರಿ ಆಟವಾಡಿದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರನ್ನು ಅಶ್ವಿನ್ ವಾಪಸ್ ಪೆವಿಲಿಯನ್​ ಕಳುಹಿಸುವಲ್ಲಿ ಸಫಲರಾದರು. ಹೆಡ್​ ಔಟಾದ ಬೆನ್ನೆಲ್ಲೇ 3 ರನ್​ ಗಳಿಸಿದ್ದ ಲಾಬುಶೇನ್​ ಶಮಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಭೋಜನ ವಿರಾಮದ ವೇಳೆಗೆ ಆಸೀಸ್ 29 ಓವರ್​ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿತ್ತು. ಎರಡನೇ ಸೆಷನ್​ನಲ್ಲಿ ಆಸೀಸ್ ಬ್ಯಾಟ್ಸ್​ಮನ್​ಗಳು ನಿಧಾನವಾಗಿ ಆಟವಾಡಿ ಭಾರತದ ಬೌಲರ್​ಗಳ ತಾಳ್ಮೆಯನ್ನು ಪರೀಕ್ಷಿಸಿದರು. ಒಂದು ವಿಕೆಟ್ ಪತನವಿಲ್ಲದೇ ಸೆಷನ್ ಕೊನೆಗೊಂಡಿತು.

ಸುಮಾರು 40 ಓವರ್​ಗಳ ಬಳಿಕ ಆಸೀಸ್ ಮೂರನೇ ವಿಕೆಟ್ ಕಳೆದುಕೊಂಡಿತು. ಚಹಾ ವಿರಾಮದ ನಂತರ ರವೀಂದ್ರ ಜಡೇಜಾ ಸ್ಟೀವ್ ಸ್ಮಿತ್ ಅವರನ್ನು ಔಟ್ ಮಾಡಿದರು. ಇದು ಉಸ್ಮಾನ್ ಖವಾಜಾ ಅವರೊಂದಿಗೆ ಮೂರನೇ ವಿಕೆಟ್‌ಗೆ ಕಲೆ ಹಾಕಿದ್ದ 79 ರನ್‌ಗಳ ಜೊತೆಯಾಟವನ್ನು ಅಂತ್ಯಗೊಳಿಸಿತು. ಸ್ಟೀವ್ ಸ್ಮಿತ್ ಔಟಾದ ಬಳಿಕ ಕ್ರೀಸ್​ಗೆ ಬಂದ ಪೀಟರ್ ಹ್ಯಾಂಡ್ಸ್ ಕಾಂಬ್ ಆಕ್ರಮಣಕಾರಿ ಆಟವಾಡಲು ಯತ್ನಿಸಿದರು. ಆದರೆ ಶಮಿ (70.4ನೇ ಓವರ್) ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಹಾದಿ ಹಿಡಿದರು.

ಹ್ಯಾಂಡ್ಸ್​ಕಾಂಬ್​​ ಔಟಾದ ಬಳಿಕ ಕ್ರೀಸ್​ಗೆ ಬಂದ ಗ್ರೀನ್ ಆಕ್ರಮಣಕಾರಿ ಆಟವಾಡಿದರು. ಖವಾಜಾ ನಿಧಾನವಾಗಿ ಬ್ಯಾಟ್​ ಬೀಸುತ್ತಿದ್ದರು. ಉಮೇಶ್ ಯಾದವ್ ಅವರ 82ನೇ ಓವರ್​ ಮತ್ತು ಶಮಿ ಅವರ 85ನೇ ಓವರ್‌ಗಳಲ್ಲಿ ಗ್ರೀನ್ ಎರಡು ಬೌಂಡರಿಗಳನ್ನು ಬಾರಿಸಿದರು. ಶಮಿ ಅವರ ಮೊದಲ ದಿನದ ಕೊನೆಯ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಖವಾಜಾ ತಮ್ಮ ಶತಕವನ್ನು ಪೂರ್ಣಗೊಳಿಸಿದರು.

ಭಾರತ ತಂಡದ 11ರ ಬಳಗ: ರೋಹಿತ್ ಶರ್ಮಾ (c), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಶ್ರೀಕರ್ ಭರತ್ (WK), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಮೊಹಮ್ಮದ್ ಶಮಿ

ಆಸ್ಟ್ರೇಲಿಯಾ ತಂಡದ 11ರ ಬಳಗ: ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲಾಬುಸೇನ್​ , ಸ್ಟೀವನ್ ಸ್ಮಿತ್ (ಸಿ), ಪೀಟರ್ ಹ್ಯಾಂಡ್ಸ್ಕಾಂಬ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಾಕ್), ಮಿಚೆಲ್ ಸ್ಟಾರ್ಕ್, ಮ್ಯಾಥ್ಯೂ ಕುಹ್ನೆಮನ್, ಟಾಡ್ ಮರ್ಫಿ, ನಾಥನ್ ಲಿಯಾನ್.

ಓದಿ: ಗಾಯಗೊಂಡಿದ್ದ ಬೆತ್​ ಮೂನಿ ಡಬ್ಲ್ಯುಪಿಎಲ್​ನಿಂದ ಔಟ್​.. ಗುಜರಾತ್ ತಂಡಕ್ಕೆ ಸ್ನೇಹ ರಾಣಾ ನಾಯಕಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.