ETV Bharat / sports

ಇಂದೋರ್​ ಟೆಸ್ಟ್​​: ಮತ್ತೆ ಜಡೇಜಾ ಕಮಾಲ್​, ಭಾರತಕ್ಕೆ 47 ರನ್​​ಗಳ​ ಹಿನ್ನಡೆ

author img

By

Published : Mar 1, 2023, 6:56 PM IST

ಮೂರನೇ ಟೆಸ್ಟ್​ ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 156/4 - 109 ರನ್​ಗೆ ಆಲ್​ಔಟ್​ ಆದ ಭಾರತ - ಆಸಿಸ್​ನ ನಾಲ್ಕು ವಿಕೆಟ್​ ಪಡೆದ ಜಡೇಜಾ

Etv Bharat
Etv Bharat

ಮುಂಬೈ: ಬೌಂನ್ಸಿ ಪಿಚ್​ನಲ್ಲಿ ಸ್ಪಿನ್ನರ್​ಗಳ ಕಮಾಲ್​ ಕಂಡು ಬರುತ್ತಿದ್ದು, ಮೂರನೇ ಟೆಸ್ಟ್​ನ ಮೊದಲ ದಿನದಾಟದ ಅಂತ್ಯಕ್ಕೆ ಜಡೇಜಾ ಆಸ್ಟ್ರೇಲಿಯಾದ ನಾಲ್ಕು ವಿಕೆಟ್​ ಕಬಳಿಸಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ಆಸಿಸ್​ 156ಕ್ಕೆ 4 ವಿಕೆಟ್​ ಕಳೆದುಕೊಂಡಿದೆ. ಆರಂಭಿಕ ಆಟಗಾರ ಉಸ್ಮಾನ್​ ಖವಾಜಾ ಅವರ ಅರ್ಧಶತಕದ ನೆರವಿನಿಂದ ಆಸಿಸ್​ ತಂಡ ಭಾರತದ 109 ರನ್​ ದಾಟಿ 47 ರನ್​ಗಳ ಮುನ್ನಡೆ ಹೊಂದಿದ್ದಾರೆ. ಕ್ರೀಸ್​ನಲ್ಲಿ ಪೀಟರ್ ಹ್ಯಾಂಡ್​​​ಸ್ಕೋಬ್ (7) ಮತ್ತು ಕ್ಯಾಮರೂನ್ ಗ್ರೀನ್ (6) ಇದ್ದಾರೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿದ್ದ ರೋಹಿತ್​ ಶರ್ಮಾ ಅವರ ನಿರ್ಧಾರ ಬುಡಮೇಲಾಯಿತು. ಬ್ಯಾಟಿಂಗ್​ಗೆ ಇಳಿದ ಭಾರತ ಅಲ್ಪ ಮೊತ್ತಕ್ಕೆ ಕುಸಿತ ಕಂಡಿತು. ಆಸಿಸ್​ನ ಸ್ಪಿನ್ನರ್​ ಮ್ಯಾಥ್ಯೂ ಕುಹ್ನೆಮನ್ (5 ವಿಕೆಟ್​) ಮತ್ತು ನಾಥನ್ ಲಿಯಾನ್ (3) ಮಾರಕ ದಾಳಿಗೆ ನಲುಗಿದ ಭಾರತ 109ಕ್ಕೆ ಸರ್ವ ಪತನ ಕಂಡಿತ್ತು. ಇದನ್ನು ಬೆನ್ನು ಹತ್ತಿದ ಆಸಿಸ್​ ಭಾರತೀಯ ಬೌಲರ್​ಗಳನ್ನು ತಾಳ್ಮೆಯಿಂದಲೇ ಎದುರಿಸಿದರು.

ಎರಡನೇ ಓವರ್​ ಮಾಡಿದ ಜಡೇಜಾ, ವಾರ್ನರ್​ ಬದಲಿ ಆಟಗಾರ ಟ್ರಾವಿಸ್ ಹೆಡ್ (9) ಅವರ ವಿಕೆಟ್​ ತೆಗೆದರು. ನಂತರ ಬಂದ ಲಬುಶೇನ್​ ಮತ್ತು ಉಸ್ಮಾನ್​ ಖವಾಜಾ 100 ರನ್​ಗಳ ಜೊತೆಯಾಟವಾಡಿದರು. ಇದರಿಂದ ಭಾರತದ ಮೊದಲ ಇನ್ನಿಂಗ್ಸ್​ನ ಸನಿಹಕ್ಕೆ ಕಾಂಗರೂ ಪಡೆ ಸುಲಭವಾಗಿ ತಲುಪಿತು. 34 ರನ್​ ಗಳಿಸಿದ್ದ ಲಬುಶೇನ್​​ ಜಡೇಜಾರ ಮ್ಯಾಜಿಕ್​ ಸ್ಪೆಲ್​ಗೆ ಕ್ಲೀನ್​ ಬೌಲ್ಡ್​ ಆದರು.

ನಂತರ ಕಮಿನ್ಸ್​ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿರುವ ಸ್ಟೀವ್​ ಸ್ಮಿತ್​ ಕ್ರೀಸಿಗಿಳಿದರು. ತಂಡಕ್ಕೆ 27 ರನ್​ ಸೇರ್ಪಡೆಯಾಗುತ್ತಿದ್ದಂತೆ ಕ್ರೀಸ್​ನಲ್ಲಿ ಬಲವಾಗಿ ನಿಂತು ಅರ್ಧಶತಕ ಗಳಿಸಿ ಮುನ್ನುಗ್ಗುತ್ತಿದ್ದ ಖವಾಜಾ (60) ಅವರ ವಿಕೆಟನ್ನು ಜಡೇಜಾ ಕಬಳಿಸಿದರು. ಫಾರ್ಮ್​ನಲ್ಲಿರುವ ಸ್ಟೀವ್​ ಸ್ಮಿತ್​ ಭಾರತೀಯ ದಾಳಿಯನ್ನು ತಾಳ್ಮೆಯಿಂದ ಎದುರಿಸಿದರು. 26 ರನ್​ ಗಳಿಸಿದ್ದ ಸ್ಮಿತ್​ ಅವರನ್ನು ಸ್ಪಿನ್​ ಜಾಲಕ್ಕೆ ಜಡೇಜಾ ಕೆಡವಿದರು. ಈ ಮೂಲಕ ಆಸಿಸ್​ನ ನಾಲ್ಕು ವಿಕೆಟ್​ಗಳನ್ನು ಜಡೇಜಾ ಕಬಳಿಸಿದರು.

ಮ್ಯಾಥ್ಯೂ ಕುಹ್ನೆಮನ್ ಪಂಚ ವಿಕೆಟ್ ದಾಖಲೆ: ಮ್ಯಾಥ್ಯೂ ಕುಹ್ನೆಮನ್ 16 ರನ್​ ಬಿಟ್ಟುಕೊಟ್ಟು ಭಾರತದ 5 ವಿಕೆಟ್​ಗಳನ್ನು ಕಬಳಿಸಿದರು. ಇದು ಅವರ ಮೊದಲ ಪಂಚ ವಿಕೆಟ್​ ಮತ್ತು ವೈಯಕ್ತಿಕ ಉತ್ತಮ ಬೌಲಿಂಗ್​ ಸಾಧನೆಯಾಗಿದೆ. ಭಾರತವನ್ನು 109 ರನ್​ಗೆ ಕಟ್ಟಿ ಹಾಕುವಲ್ಲಿ ಮ್ಯಾಥ್ಯೂ ಕುಹ್ನೆಮನ್ ಪ್ರಮುಖ ಪಾತ್ರ ವಹಿಸಿದರು. ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಹಾಗೂ ಶ್ರೇಯಸ್​ ಅಯ್ಯರ್​, ಅಶ್ವಿನ್​ ಮತ್ತು ಉಮೇಶ್​ ಯಾದವ್​ ವಿಕೆಟ್​ ಕಬಳಿಸಿದರು. ನಾಥನ್​ ಲಿಯಾನ್​ ಮೂರು ವಿಕೆಟ್​ ಪಡೆದರೆ. ಮರ್ಫಿ ಒಂದು ವಿಕೆಟ್​ ಗಳಿಸಿದರು. ಭಾರತದ ಪರ ಕೊಹ್ಲಿ 22 ಮತ್ತು ಗಿಲ್​ 21 ರನ್​ ಗಳಿಸಿದ್ದೇ ಅತೀ ಹೆಚ್ಚಿನ ರನ್​ ಆಗಿದೆ.

ಸಂಕ್ಷಿಪ್ತ ಸ್ಕೋರ್‌ಗಳು : ಭಾರತ 109 ಆಲೌಟ್ (ವಿರಾಟ್ ಕೊಹ್ಲಿ 22; ಮ್ಯಾಥ್ಯೂ ಕುಹ್ನೆಮನ್ 5-16, ನಾಥನ್ ಲಿಯಾನ್ 3-35) ಆಸ್ಟ್ರೇಲಿಯಾ 156/4 (ಉಸ್ಮಾನ್ ಖವಾಜಾ 60, ಮಾರ್ನಸ್ ಲ್ಯಾಬುಸ್‌ಚಾಗ್ನೆ 31; ರವೀಂದ್ರ ಜಡೇಜಾ 4-63) ಭಾರತಕ್ಕೆ 47 ರನ್​ ಹಿನ್ನಡೆ.

ಭಾರತದ ಇನ್ನಿಂಗ್ಸ್​ ಇಲ್ಲಿ ಓದಿ: IND Vs AUS 3rd Test: ಆಸೀಸ್​ ಸ್ಪಿನ್ನರ್​ಗಳೆದುರು ಎಡವಿಡ ಭಾರತ, 109ಕ್ಕೆ ಸರ್ವ ಪತನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.