ETV Bharat / sports

IND vs AUS 3rd ODI: ನಿರ್ಣಾಯಕ ಪಂದ್ಯದಲ್ಲಿ ಟಾಸ್​​ ಗೆದ್ದ ಸ್ಮಿತ್​, ಬ್ಯಾಟಿಂಗ್​ ಆಯ್ಕೆ

author img

By

Published : Mar 22, 2023, 1:19 PM IST

Updated : Mar 22, 2023, 2:09 PM IST

ಐಸಿಸಿ ರ್‍ಯಾಂಕಿಂಗ್​ನಲ್ಲಿ ಅಗ್ರಸ್ಥಾನಕ್ಕೇರಲು ಮತ್ತು ಸರಣಿ ವಶಪಡಿಸಿಕೊಳ್ಳಲು ಆಸಿಸ್ ಎದುರು ನೋಡುತ್ತಿದ್ದು, ಟಾಸ್​ ಗೆದ್ದ ಸ್ಟೀವ್​ ಸ್ಮಿತ್​ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ.

Etv Bharat
Etv Bharat

ಚೆನ್ನೈ: ಇಲ್ಲಿನ ಚೆಪಾಕ್​ ಕ್ರೀಡಾಂಗಣದಲ್ಲಿ ಭಾರತ-ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿಯ ನಿರ್ಣಾಯಕ ಪಂದ್ಯ ಇಂದು ನಡೆಯುತ್ತಿದ್ದು, ಟಾಸ್​ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್​ ಆಯ್ದುಕೊಂಡಿದೆ. ಕಾಂಗರೂ ಪಡೆಯಲ್ಲಿ ಕೆಲವು ಬದಲಾವಣೆಗಳಾಗಿದ್ದು, ಆರಂಭಿಕ ಡೇವಿಡ್​ ವಾರ್ನರ್​ ಚೇತರಿಸಿಕೊಂಡು ತಂಡ ಸೇರಿದ್ದಾರೆ. ಕ್ಯಾಮರಾನ್ ಗ್ರೀನ್ ಅನಾರೋಗ್ಯದ ಕಾರಣ ಹೊರಗಿದ್ದಾರೆ. ಸ್ಪಿನ್​ ಪಿಚ್​ ಸಲುವಾಗಿ ಆಷ್ಟನ್ ಅಗರ್ ತಂಡ ಸೇರಿಕೊಂಡಿದ್ದಾರೆ. ಭಾರತ ತಂಡದಲ್ಲಿ ಯಾವುದೇ ಬದಲಾವಣೆಗಳಿಲ್ಲ.

ಏಕದಿನ ವಿಶ್ವಕಪ್​ಗೆ ತಯಾರಿ: ಭಾರತದಲ್ಲಿ ಈ ವರ್ಷ ನಡೆಯಲಿರುವ ವಿಶ್ವಕಪ್​ಗೆ ಎರಡೂ ತಂಡಗಳು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಈ ಟೂರ್ನಿಯನ್ನು ಪೂರ್ವಭಾವಿ ತಯಾರಿಗಾಗಿ ಬಳಸಿಕೊಳ್ಳುತ್ತಿವೆ. ಆದರೆ, ಕಳೆದೆರಡು ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾದ ಬ್ಯಾಟಿಂಗ್ ವೈಫಲ್ಯ ಕಂಡಿವೆ. ವೇಗಿಗಳ ದಾಳಿಗೆ ತಂಡಗಳ ಅಲ್ಪಮೊತ್ತಕ್ಕೆ ಕುಸಿತ ಕಂಡಿವೆ. ಇಂದಿನ ಪಂದ್ಯ ಸರಣಿ ಗೆಲುವಿಗೆ ನಿರ್ಣಾಯಕವಾಗಿದ್ದು ಇತ್ತಂಡಗಳಿಗೂ ಪ್ರಮುಖವಾಗಿದೆ.

ಮುಂದಿನ 5 ತಿಂಗಳು ಏಕದಿನದಿಂದ ಭಾರತ ದೂರ: ಇಂದಿನ ಪಂದ್ಯದ ನಂತರ ಭಾರತ ಇನ್ನು ಐದು ತಿಂಗಳ ಕಾಲ ಏಕದಿನ ಪಂದ್ಯ ಆಡುವುದಿಲ್ಲ. ತಂಡವು ಆಗಸ್ಟ್​ನಲ್ಲಿ ವೆಸ್ಟ್​ ಇಂಡೀಸ್​ ಪ್ರವಾಸ ತೆರಳುವವರೆಗೆ ಏಕದಿನ ಕ್ರಿಕೆಟ್‌ನಲ್ಲಿ ಭಾಗಿಯಾಗುವುದಿಲ್ಲ. ಪ್ರಸ್ತುತ ಸರಣಿಯ ನಂತರ ಐಪಿಎಲ್​ ನಡೆಯಲಿದ್ದು, ಜೂನ್​ 7ಕ್ಕೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾರತ ಭಾಗಿಯಾಗಲಿದೆ. ಹೀಗಾಗಿ ತಂಡ ನಿರ್ಣಯಕ್ಕೆ ಸರಣಿಯ ಆಟಗಳು ಮಹತ್ವ ಪಡೆದಿದ್ದವು.

ಸೂರ್ಯಕುಮಾರ್​ ಯಾದವ್​ ಮೇಲೆ ಒತ್ತಡ: ಸತತ ಎರಡು ಪಂದ್ಯಗಳಿಂದ ಸೊನ್ನೆ ಸುತ್ತಿದ ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ ಸಾಮರ್ಥ್ಯ ತೋರಿಸಬೇಕಿದೆ. ಏಕದಿನದಲ್ಲಿ ಅವರ ಭವಿಷ್ಯ ಇದೇ ಪಂದ್ಯದಲ್ಲಿ ನಿರ್ಣಯ ಆಗುವ ಸಾಧ್ಯತೆಯೂ ಇದೆ. ಮತ್ತೆ ವೈಫಲ್ಯ ಕಂಡಲ್ಲಿ ಕೇವಲ ಟಿ20 ತಂಡದಲ್ಲಿ ಮಾತ್ರ ಉಳಿದುಕೊಳ್ಳುವ ಸಾಧ್ಯತೆ ಇದೆ.

ಆಸಿಸ್​ಗೆ ಮರಳಿದ ವಾರ್ನರ್, ಗ್ರೀನ್​ಗೆ ಅನಾರೋಗ್ಯ​: ಟೆಸ್ಟ್​ ಪಂದ್ಯದ ವೇಳೆ ಗಾಯಗೊಂಡು ಆಸ್ಟ್ರೇಲಿಯಾಗೆ ತೆರಳಿದ್ದ ವಾರ್ನರ್​ ತಂಡಕ್ಕೆ ಮರಳಿದ್ದಾರೆ. ಆದರೆ, ತಂಡದ ಗಾಯದ ಸಮಸ್ಯೆ ಮುಗಿದಿಲ್ಲ. ಅತ್ತ ಕ್ಯಾಮರಾನ್ ಗ್ರೀನ್ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಹೆಜಲ್​ವುಡ್ ಸಹ ಗಾಯಕ್ಕೆ ಒಳಗಾಗಿದ್ದು ವೇಗದ ಪಾಳಯಕ್ಕೆ ಕೊರತೆ ಕಾಡುತ್ತಿದೆ. ​

ಆಸ್ಟ್ರೇಲಿಯಾ ತಂಡ ಹೀಗಿದೆ.. : ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್ (ನಾಯಕ), ಮಾರ್ನಸ್ ಲಬುಶೇನ್​, ಅಲೆಕ್ಸ್ ಕ್ಯಾರಿ (ವಿಕೆಟ್​ ಕೀಪರ್​), ಮಾರ್ಕಸ್ ಸ್ಟೊಯಿನಿಸ್, ಆಶ್ಟನ್ ಅಗರ್, ಸೀನ್ ಅಬಾಟ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆ.ಎಲ್.ರಾಹುಲ್ (ವಿಕೆಟ್​ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್

ಇದನ್ನೂ ಓದಿ: ಮಹಿಳಾ ಪ್ರೀಮಿಯರ್ ಲೀಗ್​: ಯುಪಿ ಸೋಲಿಸಿ ಫೈನಲ್‌ಗೆ ನೇರ​ ಪ್ರವೇಶ ಪಡೆದ ಡೆಲ್ಲಿ

Last Updated : Mar 22, 2023, 2:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.