ETV Bharat / sports

IND vs AUS: ಕ್ಲೀನ್​ ಸ್ವೀಪ್​ ಮುಖಭಂಗ ತಪ್ಪಿಸಿಕೊಂಡ ಆಸ್ಟ್ರೇಲಿಯಾ.. ವಿಶ್ವಕಪ್​ಗೂ ಮುನ್ನ ಸರಣಿ ಗೆದ್ದ ಭಾರತ

author img

By ETV Bharat Karnataka Team

Published : Sep 27, 2023, 10:14 PM IST

ಆಸ್ಟ್ರೇಲಿಯಾ ನೀಡಿದ್ದ ಬೃಹತ್​ ಮೊತ್ತದ ಗುರಿಯನ್ನು ಬೆನ್ನುಹತ್ತುವಲ್ಲಿ ಭಾರತ ವಿಫಲವಾಗಿದ್ದು, 66 ರನ್​ನಿಂದ ಪಂದ್ಯ ಸೋಲನುಭವಿಸಿದೆ.

IND vs AUS
IND vs AUS

ರಾಜ್​ಕೋಟ್ (ಗುಜರಾತ್): ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ 66 ರನ್​ ಗಳಿಂದ ಸೋಲು ಕಂಡಿದೆ. ಇದರಿಂದ ಐತಿಹಾಸಿಕ ಕ್ಲೀನ್​ಸ್ವೀಪ್​ ಸಾಧನೆ ವಿಫಲವಾಗಿದ್ದು, ಸರಣಿ 2-1 ರಿಂದ ಭಾರತದ ಕೈಸೇರಿದೆ. ಕಾಂಗರೂ ಪಡೆ ಕೊಟ್ಟಿದ್ದ 353 ರನ್​ ಗುರಿ ಬೆನ್ನತ್ತಿದ ಭಾರತೀಯ ತಂಡ 49.4 ಓವರ್​ಗೆ 286 ರನ್​ಗೆ ಆಲ್​ಔಟ್​ ಆಯಿತು. ಆಸ್ಟ್ರೇಲಿಯಾದ ಪಾರ್ಟ್​ ಟೈಂ ಬೌಲರ್​ ಮ್ಯಾಕ್ಸ್​ವೆಲ್​ ಭಾರತಕ್ಕೆ ಮುಳುವಾದರು.

ವಿಶ್ವಕಪ್​ ಹಿನ್ನೆಲೆಯಲ್ಲಿ ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿಗೆ ಕಳೆದೆರಡು ಪಂದ್ಯಗಳಿಗೆ ವಿಶ್ರಾಂತಿ ಕೊಡಲಾಗಿತ್ತು. ಕೊನೆಯ ಪಂದ್ಯಕ್ಕೆ ಈ ಇಬ್ಬರು ಬ್ಯಾಟರ್​ ಬಂದ ಕಾರಣ ಇಂದಿನ ತಂಡದಲ್ಲಿ ಬ್ಯಾಟಿಂಗ್​ ಬಲವನ್ನು ಕುಗ್ಗಿಸಿ ಬೌಲಿಂಗ್​ಗೆ ಹೆಚ್ಚು ಒತ್ತು ಕೊಡಲಾಯಿತು. ಭಾರತದ ಮೂವರು ವೇಗಿಗಳು ಮತ್ತು ಮೂವರು ಸ್ಪಿನ್ನರ್​ಗಳು ರಾಜ್​ಕೋಟ್​ನ ಹೈವೆ ಪಿಚ್​ನಲ್ಲಿ ಆಸ್ಟ್ರೇಲಿಯಾವನ್ನು ಕಟ್ಟಿಹಾಕುವಲ್ಲಿ ವಿಫಲವಾದರು. ಇದರಿಂದ ಬೃಹತ್​ ಗುರಿ ಭಾರತ ಎದುರಿಸಬೇಕಾಯಿತು.

ವಿಶ್ವಕಪ್​ಗೂ ಮೊದಲು ನಡೆಯುತ್ತಿರುವ ಅಂತಾರಾಷ್ಟ್ರೀಯ ಕೊನೆಯ ಏಕದಿನ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಆಲ್​ರೌಂಡರ್​ ವಾಷಿಂಗ್ಟನ್ ಸುಂದರ್ ಅವರನ್ನು ಇಳಿಸಲಾಯಿತು. ನಾಯಕ ರೋಹಿತ್​ ಮತ್ತು ಸುಂದರ್​ ಬೃಹತ್​ ಗುರಿಯನ್ನು ಭೇದಿಸಲು ಸರಿಯಾದ ವೇಗದ ಆರಂಭವನ್ನು ಕೊಡಲಿಲ್ಲ. ಬದಲಾಗಿ ಮೊದಲ ಪವರ್​ ಪ್ಲೇಯಲ್ಲಿ ಇಬ್ಬರು ವಿಕೆಟ್​ ಕಾಯ್ದುಕೊಳ್ಳುವ ಕೆಲಸ ಮಾಡಿದರು. ವಾಷಿಂಗ್ಟನ್​ ಸುಂದರ್​ ಟೆಸ್ಟ್​ನ ನೈಟ್​ ವಾಚ್​ಮನ್​ ರೀತಿ ಬ್ಯಾಟಿಂಗ್​ ಮಾಡಿದರು. ಮೊದಲ ವಿಕೆಟ್​ಗೆ 74 ರನ್​ ಜೊತೆಯಾಟ ಬಂದರೂ ಅದರಲ್ಲಿ ರೋಹಿತ್​ ಪಾಲುದಾರಿಕೆ ಹೆಚ್ಚಿತ್ತು. ಮ್ಯಾಕ್ಸ್​ವೆಲ್​ ಬೌಲಿಂಗ್​ನಲ್ಲಿ 30 ಬಾಲ್​ ಎದುರಿಸಿ 18 ರನ್​ ಗಳಿಸಿ ಆಡುತ್ತಿದ್ದ ಸುಂದರ್​ ವಿಕೆಟ್​ ಒಪ್ಪಿಸಿದರು.

ವಾಷಿಂಗ್ಟನ್​ ನಂತರ ವಿರಾಟ್​ ಕೊಹ್ಲಿ ನಾಯಕ ರೋಹಿತ್​ ಶರ್ಮಾ ಜೊತೆಗೆ 50ಕ್ಕೂ ಹೆಚ್ಚು ರನ್​ನ ಪಾಲುದಾರಿಕೆ ಮಾಡಿದರಾದರೂ ರನ್​ನ ವೇಗವನ್ನು ಹೆಚ್ಚಿಸುವಲ್ಲಿ ವಿಫಲರಾದರು. ಇದರಿಂದ ರನ್​ರೇಟ್​ನ ಅಗತ್ಯತೆ ಹೆಚ್ಚಾಗುತ್ತಾ ಬಂತು. ನಾಯಕ ರೋಹಿತ್​ ಶರ್ಮಾ 19 ರನ್​ನಿಂದ ಶತಕ ವಂಚಿತರಾದರು. ಇನ್ನಿಂಗ್ಸ್​ನಲ್ಲಿ ಅವರು 57 ಬಾಲ್​ ಆಡಿ 5 ಬೌಂಡರಿ ಮತ್ತು 6 ಸಿಕ್ಸ್​​ನಿಂದ 81 ರನ್​ ಕಲೆಹಾಕಿ ಮ್ಯಾಕ್ಸ್​ವೆಲ್​ಗೆ ವಿಕೆಟ್​ ಕೊಟ್ಟರು.

  • Lots to like after that performance tonight! ❤️

    A 66-run win caps off our series against India and now we turn our attention to the ODI World Cup! #INDvAUS pic.twitter.com/nC1y5EFPfI

    — Cricket Australia (@CricketAus) September 27, 2023 " class="align-text-top noRightClick twitterSection" data=" ">

ವಿರಾಟ್​ ಕೊಹ್ಲಿ ಮತ್ತು ಶ್ರೇಯಸ್​ ಅಯ್ಯರ್​ ಕೊಂಚ ಜೊತೆಯಾಟವನ್ನು ಮಾಡಿದರಾದರೂ ಬಿರುಸಿನ ಬ್ಯಾಟಿಂಗ್​ ಕಂಡು ಬರಲಿಲ್ಲ. 61 ಬಾಲ್​ ಎದುರಿಸಿ 5 ಬೌಂಡರಿ ಮತ್ತು 1 ಸಿಕ್ಸ್​ನಿಂದ 56 ರನ್​ ಗಳಿಸಿ ವಿಕೆಟ್​ ಪೆವಿಲಿಯನ್​ ದಾರಿ ಹಿಡಿದರೆ, ಕಳೆದ ಪಂದ್ಯದಲ್ಲಿ ಅರ್ಧಶತಕ ಗಳಿಸಿ ನಾಯಕರಾಗಿ ಯಶಸ್ವಿಯಾಗಿದ್ದ ರಾಹುಲ್​ 26 ರನ್​ ಗಳಿಸಿ ವಿಕೆಟ್​ ಕೊಟ್ಟರು. ಅವರ ಬೆನ್ನಲ್ಲೇ ಸೂರ್ಯ ಕುಮಾರ್ ಯಾದವ್​ 8 ರನ್​ಗೆ ಪೆವಿನಿಯನ್​ಗೆ ಮರಳಿದರು. ಅಯ್ಯರ್​ ತಂಡವನ್ನು ಗೆಲುವಿಗೆ ಕೊಂಡೊಯ್ಯುತ್ತಾರೆ ಎಂಬ ಆಲೋಚನೆಗಳು ಬರುವ ಮುನ್ನವೇ ವಿಕೆಟ್​ ಕೊಟ್ಟು ಜವಾಬ್ದಾರಿ ಕಳೆದುಕೊಂಡರು.

ಕೊನೆಯಲ್ಲಿ ಆಲ್​ರೌಂಡರ್​ ಜಡೇಜ ಪಂದ್ಯವನ್ನು ಗೆಲ್ಲಿಸುವುದು ಕಷ್ಟ ಎಂದು ತಿಳಿದು ರನ್​ ಅಂತರ ಕಡಿಮೆ ಮಾಡಲು ಪ್ರಯತ್ನಿಸಿದರು. ಬಾಲಂಗೋಚಿಗಳಾದ ಕುಲ್ದೀಪ್​ ಯಾದವ್​(2), ಬುಮ್ರಾ (5), ಸಿರಾಜ್​ (1) ಜಡೇಜಗೆ ಸಾಥ್​ ನೀಡಲಿಲ್ಲ. 286 ರನ್​ ಗಳಿಸಿದ್ದ ಭಾರತ 49.4 ಓವರ್​ಗೆ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 66 ರನ್​ಗಳಿಂದ ಸೋಲನುಭವಿಸಿತು.

ಆಸ್ಟ್ರೇಲಿಯಾ ಪರ ಮ್ಯಾಕ್ಸ್​ವೆಲ್​ 10 ಓವರ್​ಗೆ 40 ರನ್​ ಕೊಟ್ಟು 4 ವಿಕೆಟ್​ ಪಡೆದು ಮಿಂಚಿದರು. ಜೋಶ್ ಹ್ಯಾಜಲ್‌ವುಡ್ 2, ಮಿಚೆಲ್ ಸ್ಟಾರ್ಕ್, ತನ್ವೀರ್ ಸಂಘ, ಕ್ಯಾಮೆರಾನ್ ಗ್ರೀನ್ ಮತ್ತು ಪ್ಯಾಟ್ ಕಮಿನ್ಸ್ ತಲಾ ಒಂದು ವಿಕೆಟ್​ ಪಡೆದರು.

ಇದನ್ನೂ ಓದಿ: ಏಷ್ಯನ್ ಗೇಮ್ಸ್, ಮಹಿಳೆಯರ ಹಾಕಿ: 13-0 ಗೋಲುಗಳಿಂದ ಸಿಂಗಾಪುರ ಮಣಿಸಿದ ಭಾರತ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.