ETV Bharat / sports

Ind vs Aus 1st Test: 400 ರನ್​ಗೆ ಭಾರತ ಆಲೌಟ್​, ಆಸೀಸ್​ನ ಟಾಡ್​ ಮೊರ್ಪಿಗೆ 7 ವಿಕೆಟ್​

author img

By

Published : Feb 11, 2023, 12:37 PM IST

ಆಸೀಸ್​ ಸ್ಪಿನ್ನರ್​ ಟಾಡ್​ ಮೊರ್ಪಿ ದಾಳಿ- ಮೊದಲ ಇನಿಂಗ್ಸ್​ನಲ್ಲಿ ಭಾರತ 400 ರನ್​- 7 ವಿಕೆಟ್​ ಗಳಿಸಿದ ಮೊರ್ಪಿ- 2ನೇ ಇನಿಂಗ್ಸ್​​ ಆರಂಭಿಸಿದ ಆಸ್ಟ್ರೇಲಿಯಾ- ಭಾರತ ಆಸ್ಟ್ರೇಲಿಯಾ ಟೆಸ್ಟ್​

Ind vs Aus 1st Test
ಭಾರತ ಆಲೌಟ್​

ನಾಗ್ಪುರ(ಮಹಾರಾಷ್ಟ್ರ): ಮೊದಲ ಟೆಸ್ಟ್​ನ ಮೂರನೇ ದಿನದಾಟದಲ್ಲಿ ದೊಡ್ಡ ಮೊತ್ತ ಪೇರಿಸುವ ಗುರಿಯೊಂದಿಗೆ ಬ್ಯಾಟಿಂಗ್​ ಆರಂಭಿಸಿದ ಭಾರತವನ್ನು ಆಸ್ಟ್ರೇಲಿಯಾದ ಯುವ ಸ್ಪಿನ್ನರ್​ ಟಾಡ್​​ ಮೊರ್ಪಿ ಮತ್ತೆ ಕಾಡಿದರು. ಇದರಿಂದ ಭಾರತ 139.3 ಓವರ್​ಗಳಲ್ಲಿ 400 ರನ್​ ಗಳಿಸಿ ಮೊದಲ ಇನಿಂಗ್ಸ್​ ಮುಗಿಸಿತು. ಶತಕದ ಸನಿಹದಲ್ಲಿದ್ದ ಆಲ್​ರೌಂಡರ್​ ಅಕ್ಷರ್​ ಪಟೇಲ್​ ಔಟಾಗಿ ನಿರಾಸೆ ಅನುಭವಿಸಿದರು.

ನಿನ್ನೆ ಕ್ರೀಸ್​ ಕಾಯ್ದುಕೊಂಡಿದ್ದ ಆಲ್​ರೌಂಡರ್​ಗಳಾದ ರವೀಂದ್ರ ಜಡೇಜಾ ಮತ್ತು ಅಕ್ಷರ್​ ಪಟೇಲ್​ ದೊಡ್ಡ ಮೊತ್ತ ಗಳಿಸುವ ಗುರಿಯೊಂದಿಗೆ ಮೂರನೇ ದಿನದಾಟ ಆರಂಭಿಸಿದರು. ಆದರೆ, ಆಸೀಸ್​ ಮೊರ್ಪಿ ಆರಂಭದಲ್ಲೇ ಆಘಾತ ನೀಡಿದರು. 66 ರನ್​ ಗಳಿಸಿದ್ದ ಜಡೇಜಾ ಇನ್ನೆರಡು ರನ್​ ಸೇರಿಸುವಷ್ಟರಲ್ಲಿ ವಿಕೆಟ್​ ನೀಡಿದರು.

ಉಳಿದ ಇಬ್ಬರು ಬೌಲರ್​ಗಳನ್ನು ಕಟ್ಟಿಹಾಕಿ ಇನಿಂಗ್ಸ್​ಗೆ ಬೇಗನೆ ಅಂತ್ಯವಾಡಬೇಕೆಂದುಕೊಂಡಿದ್ದ ಆಸೀಸ್​ಗೆ ಬೌಲರ್​ ಮೊಹಮದ್​ ಶಮಿ ಸವಾಲಾದರು. ಅಬ್ಬರಿಸಿದ ಶಮಿ 47 ಎಸೆತಗಳಲ್ಲಿ 2 ಬೌಂಡರಿ 3 ಸಿಕ್ಸರ್​ ಸಮೇತ 37 ರನ್​ ಮಾಡಿದರು. ಇನ್ನೊಂದು ತುದಿಯಲ್ಲಿ ಅಕ್ಷರ್​ ಪಟೇಲ್​ ಗಟ್ಟಿಯಾಗಿ ನಿಂತಿದ್ದರು.

ಟಾಡ್​ ಮೊರ್ಪಿ ಬೌಲಿಂಗ್​ನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಶಮಿ ವಿಕೆಟ್​ ಕೀಪರ್​ ಅಲೆಕ್ಸ್​ ಕ್ಯಾರಿ ವಿಕೆಟ್​ ನೀಡಿದರು. ಇದರ ಬಳಿಕ ರನ್​ ಪೇರಿಸುವ ಹೊಣೆ ಹೊತ್ತ ಅಕ್ಷರ್​ ಪಟೇಲ್​ ಕೊನೆಯಲ್ಲಿ ಬಿರುಸಿನ ಬ್ಯಾಟಿಂಗ್​ ಮೊರೆ ಹೋದರು. 84 ರನ್ ಗಳಿಸಿದ್ದ ವೇಳೆ ಆಸೀಸ್​ ನಾಯಕ ಪ್ಯಾಟ್​ ಕಮಿನ್ಸ್ ಎಸೆತದಲ್ಲಿ ಬೌಲ್ಡ್​ ಆದರು. ಈ ಮೂಲಕ ಭಾರತದ ಇನಿಂಗ್ಸ್​ಗೆ ತೆರೆ ಬಿತ್ತು.

ಆಸೀಸ್​ ಪರವಾಗಿ ಭಾರತದ ಬ್ಯಾಟರ್​ಗಳ ಕಾಡಿದ ಟಾಡ್​ ಮೊರ್ಪಿ 7 ವಿಕೆಟ್ ಕಿತ್ತರು. ಪ್ಯಾಟ್​​ ಕಮಿನ್ಸ್ ​2, ನಾಥನ್​ ಲಿಯಾನ್​ 1 ವಿಕೆಟ್​ ಪಡೆದರು. ಎರಡನೇ ಇನಿಂಗ್ಸ್​ ಆರಂಭಿಸಿರುವ ಆಸ್ಟ್ರೇಲಿಯಾ ಆರಂಭಿಕ ಆಘಾತ ಅನುಭವಿಸಿತು. ಅಶ್ವಿನ್​ ಎಸೆದ 2 ನೇ ಓವರ್​ನಲ್ಲಿ ಹೊರಹೋಗುತ್ತಿದ್ದ ಬೌಲನ್ನು ದಂಡಿದಲು ಮುಂದಾದ ಉಸ್ಮಾನ್​ ಖವಾಜಾ ಸ್ಲಿಪ್​ನಲ್ಲಿ ವಿರಾಟ್​ ಕೊಹ್ಲಿಗೆ ಕ್ಯಾಚ್​ ನೀಡಿ ನಿರ್ಗಮಿಸಿದರು.

ಓದಿ: ನಡೆದಾಡಲು ಶುರು ಮಾಡಿದ ರಿಷಬ್​ ಪಂತ್; ಫೋಟೋ ಹಂಚಿಕೊಂಡ ಕ್ರಿಕೆಟಿಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.