ETV Bharat / sports

ಭಾರತ-ದ.ಆಫ್ರಿಕಾ ಕ್ರಿಕೆಟ್ ಸರಣಿ ಡಿ. 17ರಿಂದ ಆರಂಭ... ಹರಿಣಗಳ ನಾಡಿಗೆ ಟೀಂ ಇಂಡಿಯಾ ಪ್ರವಾಸ

author img

By

Published : Sep 9, 2021, 9:45 PM IST

ಭಾರತ-ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಕ್ರಿಕೆಟ್ ಪಂದ್ಯಗಳ ಸರಣಿಯ ವೇಳಾಪಟ್ಟಿ ಇಂದು ರಿಲೀಸ್ ಆಗಿದ್ದು, ಡಿಸೆಂಬರ್​ 17ರಿಂದ ಪಂದ್ಯಾವಳಿಗಳು ಆರಂಭಗೊಳ್ಳಲಿವೆ.

India tour of South Africa
India tour of South Africa

ಜೋಹಾನ್ಸ್​​ಬರ್ಗ್​(ದಕ್ಷಿಣ ಆಫ್ರಿಕಾ): ಟೀಂ ಇಂಡಿಯಾ ಸದ್ಯ ಇಂಗ್ಲೆಂಡ್​ ಪ್ರವಾಸದಲ್ಲಿದ್ದು, ಇದು ಮುಕ್ತಾಯಗೊಳ್ಳುತ್ತಿದ್ದಂತೆ ಇಂಡಿಯನ್​ ಪ್ರೀಮಿಯರ್ ಲೀಗ್​ ತದನಂತರ ಬಹುನಿರೀಕ್ಷಿತ ಟಿ-20 ವಿಶ್ವಕಪ್​ ಟೂರ್ನಾಮೆಂಟ್​​ನಲ್ಲಿ ಭಾಗಿಯಾಗಲಿದೆ. ಇದಾದ ಬಳಿಕ ಕೂಡ ಟೀಂ ಇಂಡಿಯಾ ವಿಶ್ರಾಂತಿ ಪಡೆದುಕೊಳ್ಳುವ ಬದಲು ಮತ್ತೊಂದು ದೇಶದ ಪ್ರವಾಸ ಕೈಗೊಳ್ಳಲಿದೆ.

ಡಿಸೆಂಬರ್​ 17ರಿಂದ ಭಾರತ-ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಕ್ರಿಕೆಟ್​ ಸರಣಿ ಆಯೋಜನೆಗೊಂಡಿರುವ ಕಾರಣ ಅಲ್ಲಿಗೆ ಪ್ರವಾಸ ಕೈಗೊಳ್ಳಲಿದೆ. ಮೂರು ಟೆಸ್ಟ್​​ ಪಂದ್ಯ, ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳಲ್ಲಿ ಟೀಂ ಇಂಡಿಯಾ ಭಾಗಿಯಾಗಲಿದ್ದು, ಅದರ ವೇಳಾಪಟ್ಟಿ ದಕ್ಷಿಣ ಆಫ್ರಿಕಾ ಇಂದು ರಿಲೀಸ್​ ಮಾಡಿದೆ.

ಡಿಸೆಂಬರ್​ 17ರಿಂದ ಟೆಸ್ಟ್​ ಸರಣಿ ಆರಂಭಗೊಳ್ಳಲಿದ್ದು, ಇದಾದ ಬಳಿಕ ಜನವರಿ 11ರಿಂದ ಏಕದಿನ ಸರಣಿ ತದನಂತರ ಜನವರಿ 19ರಿಂದ ಜನವರಿ 23ರವರೆಗೆ ಟಿ-20 ಕ್ರಿಕೆಟ್ ಪಂದ್ಯಗಳು ನಡೆಯಲಿವೆ ಎಂದು ಕ್ರಿಕೆಟ್​ ಸೌತ್​ ಆಫ್ರಿಕಾ ತಿಳಿಸಿದೆ.

ಇದನ್ನೂ ಓದಿರಿ: ಭಾರತ-ಇಂಗ್ಲೆಂಡ್​ ನಡುವೆ 5ನೇ ಟೆಸ್ಟ್​​​​ ಪಂದ್ಯ ನಡೆಯುತ್ತೋ, ಇಲ್ವೋ ಗೊತ್ತಿಲ್ಲ: ಗಂಗೂಲಿ

ಸಂಪೂರ್ಣ ವೇಳಾಪಟ್ಟಿ ಇಂತಿದೆ

  • ಮೊದಲ ಟೆಸ್ಟ್​ ಪಂದ್ಯ: ಡಿಸೆಂಬರ್ 17-21, ಜೋಹಾನ್ಸ್​ಬರ್ಗ್​
  • 2ನೇ ಟೆಸ್ಟ್​​ ಪಂದ್ಯ: ಡಿಸೆಂಬರ್​​ 26-30, ಸೆಂಚುರಿಯನ್​
  • 3ನೇ ಟೆಸ್ಟ್​ ಪಂದ್ಯ: ಜನವರಿ 3-7,ಜೋಹಾನ್ಸ್​ಬರ್ಗ್​​

ಏಕದಿನ ಪಂದ್ಯಗಳ ಸರಣಿ

  • ಮೊದಲ ಏಕದಿನ ಪಂದ್ಯ: ಪಾರ್ಲಿ, ಜನವರಿ 11
  • ಎರಡನೇ ಏಕದಿನ ಪಂದ್ಯ: ಕೇಪ್​ಟೌನ್,​​​ ಜನವರಿ 14
  • ಮೂರನೇ ಏಕದಿನ ಪಂದ್ಯ: ಕೇಪ್​ಟೌನ್,​​ ಜನವರಿ 16

ಟಿ-20 ಕ್ರಿಕೆಟ್ ಪಂದ್ಯಗಳು

  • ಮೊದಲ ಟಿ-20 ಪಂದ್ಯ, ಕೇಪ್​ಟೌನ್​​, ಜನವರಿ 19
  • ಎರಡನೇ ಟಿ-20 ಪಂದ್ಯ,ಕೇಪ್​ಟೌನ್​, ಜನವರಿ 21
  • ಮೂರನೇ ಟಿ-20 ಪಂದ್ಯ, ಪರ್ಲಿ, ಜನವರಿ 23

ಯುಎಇನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ಗಾಗಿ ದಕ್ಷಿಣ ಆಫ್ರಿಕಾ 15 ಸದಸ್ಯರನ್ನೊಳಗೊಂಡ ತಂಡವನ್ನ ಇಂದು ಪ್ರಕಟ ಮಾಡಿದ್ದು, ಇದು ಮುಕ್ತಾಯಗೊಳ್ಳುತ್ತಿದ್ದಂತೆ ಟೀಂ ಇಂಡಿಯಾ ಜೊತೆ ಸೆಣಸಾಟ ನಡೆಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.