ETV Bharat / sports

ಭಾರತ-ಆಸ್ಟ್ರೇಲಿಯಾ ಕ್ಲೈಮ್ಯಾಕ್ಸ್ ಮ್ಯಾಚ್... ಚಿನ್ನಸ್ವಾಮಿಯಲ್ಲಿ ಯಾರಿಗೆ ಲಕ್!

author img

By

Published : Jan 19, 2020, 6:00 AM IST

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3ನೇ ಹಾಗೂ ಅಂತಿಮ ಪಂದ್ಯ ನಡೆಯಲಿದೆ. ಕ್ರೀಡಾಂಗಣದ ಸುತ್ತಮುತ್ತ ಬಿಗಿ ಪೊಲೀಸ್​ ಬಂದೋಬಸ್ತ್​ ಕೈಗೊಳ್ಳಲಾಗಿದೆ.

India vs Australia, 3rd ODI  Series at stake, India and Australia ready for showdown
India vs Australia, 3rd ODI Series at stake, India and Australia ready for showdown

ಬೆಂಗಳೂರು: ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ತಲಾ ಒಂದೊಂದು ಪಂದ್ಯ ಗೆದ್ದು ಸಮಬಲ ಸಾಧಿಸಿರುವ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಇಂದು ಬೆಂಗಳೂರಿನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಪ್ರಶಸ್ತಿಗಾಗಿ ಸೆಣಸಾಡಲಿವೆ.

ಚಿನ್ನಸ್ವಾಮಿ ಮೈದಾನದಲ್ಲಿ ಉಭಯ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದು, ಯಾವ ತಂಡಕ್ಕೆ ವಿಜಯಲಕ್ಷ್ಮೀ ಒಲಿಯುತ್ತಾಳೆ ಎಂಬ ಕುತೂಹಲ ಕ್ರೀಡಾಭಿಮಾನಿಗಳಲ್ಲಿ ಮನೆ ಮಾಡಿದೆ.

ಜನವರಿ 14ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೌಲರ್​ಗಳ ಅಬ್ಬರಕ್ಕೆ ಭಾರತದ ಆಟಗಾರರಲ್ಲಿ ಶಿಖರ್​​ ಧವನ್​ ಹೊರತುಪಡಿಸಿ ಉಳಿದವರು ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದರು. ಬೌಲಿಂಗ್​ ವಿಭಾಗದೊಂದಿಗೆ ಬ್ಯಾಟಿಂಗ್​​ನಲ್ಲೂ ಆಸ್ಟ್ರೇಲಿಯಾ ಉತ್ತಮ ನಿರ್ವಹಣೆ ತೋರಿತ್ತು. ಆದ್ರೆ ಆಸ್ಟ್ರೇಲಿಯಾ ಒಂದೂ ವಿಕೆಟ್ ಕಳೆದುಕೊಳ್ಳದೆ ಡೇವಿಡ್​​ ವಾರ್ನರ್​ ಹಾಗೂ ಆ್ಯರೋನ್​ ಫಿಂಚ್​ ಬಾರಿಸಿದ ಶತಕಗಳ ನೆರವಿನಿಂದ ಭಾರತ ನೀಡಿದ್ದ 255 ರನ್​​​ಗಳ ಗುರಿಯನ್ನು ಸುಲಭವಾಗಿ ಮುಟ್ಟಿತ್ತು.

ಇದನ್ನೂ ಓದಿ...ಕೇವಲ 4 ರನ್​ಗಳಿಸಿದರೆ ಸಚಿನ್​, ಗಂಗೂಲಿ, ಲಾರಾ ದಾಖಲೆ ಮುರಿಯಲಿದ್ದಾರೆ ಹಿಟ್​ಮ್ಯಾನ್​...

ಜನವರಿ 17ರಂದು ರಾಜ್​ಕೋಟ್​ನಲ್ಲಿ ನಡೆದ 2ನೇ ಪಂದ್ಯದಲ್ಲಿ ಭಾರತದ ಬ್ಯಾಟ್ಸ್​ಮನ್​​ಗಳು ದಿಟ್ಟತನ ಪ್ರದರ್ಶಿಸಿದ್ದರು. ಈ ಪಂದ್ಯದಲ್ಲಿ ಧವನ್ ಮತ್ತೆ​ ಮಿಂಚಿದರು. ಜೊತೆಗೆ ನಾಯಕ ವಿರಾಟ್​​ ಕೊಹ್ಲಿ, ಕೆ.ಎಲ್​.ರಾಹುಲ್​​ ಕೂಡ ಅರ್ಧಶತಕ ಬಾರಿಸಿ ಬೃಹತ್​ ಮೊತ್ತ ಕಲೆ ಹಾಕಿದ್ದರು. ಈ ಪಂದ್ಯದಲ್ಲಿ ಭಾರತ 36ರನ್​​ಗಳ ಗೆಲುವು ದಾಖಲಿಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿತು. ಈ ಮೂಲಕ ಸರಣಿ 1-1 ಅಂತರದಲ್ಲಿ ಸಮಬಲಗೊಂಡಿದೆ.

ಚೇಸಿಂಗ್​​ ಫೇವರೀಟ್​?

ಇದೀಗ ಸರಣಿಗಾಗಿ ಅಂತಿಮ ಪಂದ್ಯದಲ್ಲಿ ಕಾದಾಟ ನಡೆಸಲು ಎರಡೂ ತಂಡಗಳು ಸಜ್ಜುಗೊಂಡಿವೆ​. ಬ್ಯಾಟ್ಸ್​​ಮನ್​ಗಳಿಗೆ ಹೆಚ್ಚು ಅನುಕೂಲವಾಗುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್​ ಹೊಳೆಯೇ ಹರಿಯುವ ಸಾಧ್ಯತೆ ಇದೆ. ಅಲ್ಲದೆ, ಇಲ್ಲಿ ಚೇಸಿಂಗ್​ ಮಾಡಿರುವ ತಂಡಗಳೇ ಹೆಚ್ಚು ಗೆದ್ದಿರುವುದು ವಿಶೇಷ. ಚೇಸಿಂಗ್ ಮಾಡುವ ತಂಡವೇ ಗೆಲ್ಲುವ ಸಾಧ್ಯತೆಯಿದೆ. ಆದ ಕಾರಣ ಟಾಸ್ ಗೆದ್ದ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಕೊಂಚ ಮೋಡ ಮುಚ್ಚಿದ ವಾತಾವರಣವಿದೆ.

ಇದನ್ನೂ ಓದಿ....ಕೊಹ್ಲಿ ಇಂದು ಒಂದು ಶತಕ ಬಾರಿಸಿದ್ರೆ... ಸಚಿನ್, ಪಾಂಟಿಂಗ್ ದಾಖಲೆಗಳು ಪುಡಿಪುಡಿ!

ಗೆದ್ದರೆ ಪ್ರತೀಕಾರ?

ಭಾರತ ತಂಡ ಈ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಂಡರೆ ಕಳೆದ ವರ್ಷದ ಸೋಲಿನ ಪ್ರತೀಕಾರವನ್ನು ತೀರಿಸಿಕೊಳ್ಳಲಿದೆ. ಕಳೆದ ವರ್ಷ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 3-2 ಅಂತರದಲ್ಲಿ ಆಸ್ಟ್ರೇಲಿಯಾ ಸರಣಿ ಗೆದ್ದು ಬೀಗಿತ್ತು. ಸರಣಿ ಸೋಲುವ ಮೂಲಕ ಭಾರತ ತವರಿನಲ್ಲಿ ಮುಖಭಂಗ ಅನುಭವಿಸಿತ್ತು.

ಭಾರತವೇ ಮೇಲುಗೈ?

ಚಿನ್ನಸ್ವಾಮಿಯಲ್ಲಿ ಎರಡೂ ತಂಡಗಳು 7 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಭಾರತ 4, ಆಸ್ಟ್ರೇಲಿಯಾ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಒಂದು ಪಂದ್ಯ ರದ್ದುಗೊಂಡಿತ್ತು. ಇಲ್ಲಿ ಆಡಿರುವ ಕೊನೆಯ ಪಂದ್ಯದಲ್ಲಿ (2017ರಲ್ಲಿ) ಆಸ್ಟ್ರೇಲಿಯಾ 21ರನ್​​​ಗಳ ಅಂತರದಿಂದ ಗೆದ್ದಿತ್ತು.

ಪಂದ್ಯದ ಸಮಯ: 1.30

ಇದನ್ನೂ ಓದಿ...ಭಾರತ-ಆಸ್ಟ್ರೇಲಿಯಾ ಹೈವೋಲ್ಟೇಜ್ ಪಂದ್ಯ: ಇಲ್ಲೆಲ್ಲೂ ಕಾರ್​ ನಿಲ್ಲಿಸುವಂತಿಲ್ಲ, ಮೆಟ್ರೋ ಬಳಕೆ ಸೂಕ್ತ!

Intro:Body:

cricket


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.