ETV Bharat / sports

ಭಾರತ - ಶ್ರೀಲಂಕಾ ಸರಣಿ ವೇಳಾಪಟ್ಟಿಯಲ್ಲಿ ದಿಢೀರ್ ಬದಲಾವಣೆ.. ಬೆಂಗಳೂರಿಗೆ ಅಹರ್ನಿಶಿ ಟೆಸ್ಟ್​ ಭಾಗ್ಯ

author img

By

Published : Feb 15, 2022, 7:18 PM IST

ಫೆಬ್ರವರಿ 24ರಂದು ಲಖನೌದಲ್ಲಿ ಮೊದಲ ಟಿ-20, ಫೆ.26 ಮತ್ತು 27ರಂದು ಧರ್ಮಶಾಲಾದಲ್ಲಿ ಕೊನೆಯ ಎರಡು ಟಿ-20 ಪಂದ್ಯಗಳು ನಡೆಯಲಿವೆ. ನಂತರ 2021-23ರ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಭಾಗವಾಗಿ 2 ಪಂದ್ಯಗಳ ಟೆಸ್ಟ್​ ಸರಣಿ ನಡೆಯಲಿದೆ.

India-Sri Lanka T20I series
ಭಾರತ vs ಶ್ರೀಲಂಕಾ

ಮುಂಬೈ: ಇದೇ ತಿಂಗಳು ಶ್ರೀಲಂಕಾ ಭಾರತ ಪ್ರವಾಸ ಕೈಗೊಳ್ಳಲಿದ್ದು, ಬಿಸಿಸಿಐ ಪ್ರವಾಸದ ಪರಿಸ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಈ ಹಿಂದಿನ ವೇಳಾಪಟ್ಟಿ ಪ್ರಕಾರ ಮೊದಲು ಟೆಸ್ಟ್​ ಸರಣಿ ಮತ್ತು ನಂತರ ಟಿ-20 ಸರಣಿ ಆಯೋಜನೆಯಾಗಬೇಕಿತ್ತು. ಆದರೆ, ಪರಿಸ್ಕೃತ ವೇಳಾ ಪಟ್ಟಿಯಲ್ಲಿ ಮೊದಲು 3 ಪಂದ್ಯಗಳ ಟಿ-20 ಸರಣಿ ಮತ್ತು ನಂತರ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.

ಫೆಬ್ರವರಿ 24ರಂದು ಲಖನೌದಲ್ಲಿ ಮೊದಲ ಟಿ-20, ಫೆ.26 ಮತ್ತು 27ರಂದು ಧರ್ಮಶಾಲದಲ್ಲಿ ಕೊನೆಯ ಎರಡು ಟಿ-20 ಪಂದ್ಯಗಳು ನಡೆಯಲಿವೆ. ನಂತರ 2021-23ರ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಭಾಗವಾಗಿ 2 ಪಂದ್ಯಗಳ ಟೆಸ್ಟ್​ ಸರಣಿ ನಡೆಯಲಿದೆ.

ಮೊದಲ ಟೆಸ್ಟ್​ ಪಂದ್ಯ ಮಾರ್ಚ್​ 4ರಿಂದ 8ರವರೆಗೆ ಮೊಹಾಲಿಯಲ್ಲಿ ನಡೆಯಲಿದೆ. ಬೆಂಗಳೂರಿನಲ್ಲಿ 2ನೇ ಟೆಸ್ಟ್​ ಪಂದ್ಯ ಮಾರ್ಚ್​ 12ರಿಂದ 16ರವರೆಗೆ ನಡೆಯಲಿದ್ದು, ಇದು ಡೇ ಅಂಡ್ ನೈಟ್ ಟೆಸ್ಟ್​ ಪಂದ್ಯವಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂ ಭಾರತದಲ್ಲಿ ಅಹರ್ನಿಶಿ ಟೆಸ್ಟ್​ ಪಂದ್ಯವನ್ನು ಆಯೋಜಿಸಲಿರುವ 3ನೇ ಮೈದಾನ ಎಂಬ ಖ್ಯಾತಿಗೆ ಪಾತ್ರವಾಗಲಿದೆ.

ಇದನ್ನೂ ಓದಿ:ಟೆನಿಸ್​ ಬಾಲ್ ಕ್ರಿಕೆಟ್​ ಮೂಲಕವೇ ಕೆಕೆಆರ್​ ತಂಡದಲ್ಲಿ ಚಾನ್ಸ್​ ಗಿಟ್ಟಿಸಿಕೊಂಡ ಚಮ್ಮಾರನ ಮಗ.. ಇಲ್ಲಿದೆ​ ರೋಚಕ ಕ್ರಿಕೆಟ್ ಜರ್ನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.