ETV Bharat / sports

ಟೆಸ್ಟ್​​ ಸೋಲಿನ ಬೆನ್ನಲ್ಲೇ ಬರೆ: ಭಾರತಕ್ಕೆ ಶೇ.40ರಷ್ಟು ದಂಡ; ಎರಡು ಪಾಯಿಂಟ್ ಕಡಿತ

author img

By

Published : Jul 5, 2022, 9:24 PM IST

ಬರ್ಮಿಂಗ್​ಹ್ಯಾಮ್​​ ಟೆಸ್ಟ್​ನಲ್ಲಿ ಸೋಲು ಕಂಡಿರುವ ಟೀಂ ಇಂಡಿಯಾ ಟೆಸ್ಟ್​ ತಂಡಕ್ಕೆ ಇದೀಗ ಮತ್ತೊಂದು ಬರೆ ಬಿದ್ದಿದ್ದು, ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕಾಗಿ ಪಂದ್ಯದ ಶೇ. 40ರಷ್ಟು ದಂಡ ವಿಧಿಸಲಾಗಿದೆ.

India docked two WTC points
India docked two WTC points

ಬರ್ಮಿಂಗ್​ಹ್ಯಾಮ್​(ಎಡ್ಜಬಾಸ್ಟನ್​): ಇಂಗ್ಲೆಂಡ್​ ವಿರುದ್ಧ ನಡೆದ ಐದನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ. ಇದರ ಬೆನ್ನಲ್ಲೇ ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕಾಗಿ ಪಂದ್ಯದ ಶೇ. 40ರಷ್ಟು ದಂಡ ವಿಧಿಸಲಾಗಿದ್ದು, ಇದರ ಜೊತೆಗೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​​ನ ಎರಡು ಪಾಯಿಂಟ್ ಕಡಿತಗೊಳಿಸಲಾಗಿದೆ.

ಇಂಗ್ಲೆಂಡ್​ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮರುನಿಗದಿಪಡಿಸಲಾದ ಕೊನೆಯ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್ ಏಳು ವಿಕೆಟ್​ಗಳ ಗೆಲುವು ದಾಖಲು ಮಾಡಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ನಿಧಾನವಾಗಿ ಬೌಲಿಂಗ್ ಮಾಡಿದ್ದಕ್ಕಾಗಿ WTC ಎರಡು ಅಂಕ ಕಡಿತಗೊಳಿಸಲಾಗಿದೆ. ಇದರ ಜೊತೆಗೆ ಪಂದ್ಯದ ಶುಲ್ಕದ ಶೇ. 40ರಷ್ಟು ದಂಡ ವಿಧಿಸಲಾಗಿದೆ.

ಮ್ಯಾಚ್ ರೆಫರಿ ಡೇವಿಡ್ ಬೂನ್ ಈ ಮಾಹಿತಿ ಹಂಚಿಕೊಂಡಿದ್ದು, ಟೀಂ ಇಂಡಿಯಾ ನಿಗದಿತ ಸಮಯಕ್ಕಿಂತಲೂ ಎರಡು ಓವರ್​ ಹಿಂದೆ ಇತ್ತು ಎಂದು ಹೇಳಿದ್ದಾರೆ. ಈ ಹಿಂದೆ ಸಹ ಭಾರತ ಇಂತಹ ಸಮಸ್ಯೆಗೊಳಗಾಗಿದೆ. ನ್ಯಾಟಿಂಗ್​ಹ್ಯಾಮ್​ನಲ್ಲಿ ಎರಡು ಪಾಯಿಂಟ್​ ಹಾಗೂ ಸೆಂಚುರಿಯನ್​​ನಲ್ಲಿ ಒಂದು ಪಾಯಿಂಟ್ ಕಳೆದುಕೊಂಡಿದೆ.

ಇದನ್ನೂ ಓದಿರಿ: ಕಳಪೆ ಬ್ಯಾಟಿಂಗ್​ನಿಂದ ಸೋಲು: ಬ್ಯಾಟರ್​ಗಳ ಮೇಲೆ ಹರಿಹಾಯ್ದ ಜಸ್ಪ್ರೀತ್ ಬುಮ್ರಾ

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿತ: ಇಂಗ್ಲೆಂಡ್​ ವಿರುದ್ಧ ನಡೆದ ಫೈನಲ್​ ಟೆಸ್ಟ್​ ಪಂದ್ಯದಲ್ಲಿ ಭಾರತ ಸೋಲು ಕಾಣುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿತಗೊಂಡಿದೆ. ಪಾಕ್ ತಂಡ ಮೂರನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ದು, ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.