ETV Bharat / sports

IND vs SA 3rd test​: ಭಾರತಕ್ಕೆ ಆರಂಭಿಕ ಆಘಾತ, ಭೋಜನ ವಿರಾಮಕ್ಕೆ 75ಕ್ಕೆ2

author img

By

Published : Jan 11, 2022, 4:43 PM IST

ಉತ್ತಮ ಲಯ ಕಂಡುಕೊಂಡಿರುವ ಪೂಜಾರ 49 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ ಅಜೇಯ 26 ಮತ್ತು ವಿರಾಟ್ ಕೊಹ್ಲಿ 50 ಎಸೆತಗಳಲ್ಲಿ 15 ರನ್​ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

India 75/2 at lunch on day one of 3rd Test against South Africa
ಭಾರತ ದಕ್ಷಿಣ ಆಫ್ರಿಕಾ ಟೆಸ್ಟ್

ಕೇಪ್​ಟೌನ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಸರಣಿ ಗೆಲುವನ್ನು ನಿರ್ಧರಿಸುವ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಕೊಹ್ಲಿ ಪಡೆ ಆರಂಭಿಕ ಆಘಾತ ಅನುಭವಿಸಿದೆ. ಮೊದಲ ದಿನ ಭೋಜನ ವಿರಾಮಕ್ಕೆ ಭಾರತ 2 ವಿಕೆಟ್ ಕಳೆದುಕೊಂಡು 75 ರನ್​ಗಳಿಸಿದೆ.

ಮಂಗಳವಾರ ಕೇಪ್​ಟೌನ್​ನ ನ್ಯೂಲ್ಯಾಂಡ್ಸ್​ ಸ್ಟೇಡಿಯಂನಲ್ಲಿ ಟಾಸ್​ ಗೆದ್ದ ವಿರಾಟ್​ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಭಾರತೀಯ ಆರಂಭಿಕರಾದ ಮಯಾಂಕ್​ ಅಗರ್ವಾಲ್​(15) ಮತ್ತು ಕೆಎಲ್ ರಾಹುಲ್​(12) ನಿರೀಕ್ಷಿತ ಪ್ರರರ್ಶನ ತೋರುವಲ್ಲಿ ವಿಫಲರಾದರು.

33ಕ್ಕೆ 2 ವಿಕೆಟ್​ ಕಳೆದುಕೊಂಡಿದ್ದ ವೇಳೆ ಒಂದಾದ ನಾಯಕ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ್ ಪೂಜಾರ 3ನೇ ವಿಕೆಟ್ ಜೊತೆಯಾಟದಲ್ಲಿ 42 ರನ್​ಗಳ ಜೊತೆಯಾಟ ನೀಡಿ ಆರಂಭಿಕ ಆಘಾತದಿಂದ ಪಾರು ಮಾಡಿದ್ದಾರೆ.

ಉತ್ತಮ ಲಯ ಕಂಡುಕೊಂಡಿರುವ ಪೂಜಾರ 49 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ ಅಜೇಯ 26 ಮತ್ತು ವಿರಾಟ್ ಕೊಹ್ಲಿ 50 ಎಸೆತಗಳಲ್ಲಿ 15 ರನ್​ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ 30ಕ್ಕೆ 1, ಡುವೇನ್ ಒಲಿವಿಯರ್ 14ಕ್ಕೆ1 ವಿಕೆಟ್​ ಪಡೆದಿದ್ದಾರೆ.

ಇದನ್ನೂ ಓದಿ:ವಿವೋ ಐಪಿಎಲ್ ಅಲ್ಲ, ಮುಂದಿನ ವರ್ಷ ಟಾಟಾ ಐಪಿಎಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.