ETV Bharat / sports

Ind vs SA test:ಮೊಹಮ್ಮದ್ ಶಮಿ 5 ವಿಕೆಟ್,​ 197ಕ್ಕೆ ಸರ್ವಪತನ ಕಂಡ ದಕ್ಷಿಣ ಆಫ್ರಿಕಾ

author img

By

Published : Dec 28, 2021, 9:31 PM IST

103 ಎಸೆಗಳಲ್ಲಿ 10 ಬೌಂಡರಿ ಸಹಿತ 52 ರನ್​​ಗಳಿಸಿದ ಬವೂಮ ತಂಡದ ಗರಿಷ್ಠ ಸ್ಕೋರರ್​ ಆದರು. ವಿಯಾನ್ ಮಲ್ಡರ್​(12), ಜಾನ್ಸನ್​(19), ರಬಾಡ(25) ಮತ್ತು ಮಹಾರಾಜ್​(12) ರನ್​ಗಳಿಸಿ ಔಟಾದರು. ಒಟ್ಟಾರೆ ದಕ್ಷಿಣ ಆಫ್ರಿಕಾ 62.3 ಓವರ್​ಗಳಲ್ಲಿ 197ಕ್ಕೆ ಆಲೌಟ್​ ಆಗಿ 130 ರನ್​ಗಳ ಹಿನ್ನಡೆಗೊಳಗಾಯಿತು.

ಭಾರತ vs ದಕ್ಷಿಣ ಆಫ್ರಿಕಾ ಟೆಸ್ಟ್
ಭಾರತ vs ದಕ್ಷಿಣ ಆಫ್ರಿಕಾ ಟೆಸ್ಟ್

ಸೆಂಚುರಿಯನ್​: ಶಮಿ ಸೇರಿದಂತೆ ವೇಗಿಗಳ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಪ್ರವಾಸಿ ಭಾರತ ತಂಡ ಅತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಕೇವಲ 197ಕ್ಕೆ ಆಲೌಟ್​ ಮಾಡುವಲ್ಲಿ ಯಶಸ್ವಿಯಾಗಿದ್ದು, 130 ರನ್​ಗಳ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿದೆ.

ಮೊದಲ ದಿನ ಭಾರತ ತಂಡ 272 ರನ್​ಗಳಿಸಿದರೆ, 2ನೇ ದಿನದಾಟ ಮಳೆಗೆ ಸಂಪೂರ್ಣ ಆಹುತಿಯಾದರೆ 3ನೇ ದಿನ ಭಾರತ ಹಿಂದಿನ ಮೊತ್ತಕ್ಕೆ ಕೇವಲ 55 ರನ್​ ಸೇರಿಸಿ ಆಲೌಟ್ ಆಗಿತ್ತು. ಕೆ ಎಲ್ ರಾಹುಲ್​ 123, ಮಯಾಂಕ್ ಅಗರ್ವಾಲ್​ 60 ಮತ್ತು ರಹಾಣೆ 48 ರನ್​ಗಳಿಸಿದ್ದರು.

ದಕ್ಷಿಣ ಆಫ್ರಿಕಾ ಪರ ಲುಂಗಿ ಎಂಗಿಡಿ 71ಕ್ಕೆ 6 ಮತ್ತು ಕಗಿಸೊ ರಬಾಡ 72ಕ್ಕೆ 3 ವಿಕೆಟ್ ಹಾಗೂ ಮ್ಯಾಕ್ರೋ ಜಾನ್ಸನ್​ 69ಕ್ಕೆ 1 ವಿಕೆಟ್ ಪಡೆದಿದ್ದರು.

ಇತ್ತ ಭಾರತದ 327 ರನ್​ಗಳನ್ನು ಹಿಂಬಾಲಿಸಿದ ಅತಿಥೇಯ ತಂಡ ಆರಂಭದಿಂದಲೇ ಭಾರತದ ವೇಗಿಗಳ ದಾಳಿಗೆ ತತ್ತರಿಸಿ ಹೋಯಿತು. ಮೊದಲ ಓವರ್​ನಲ್ಲೇ ಭಾರತದ ನಂಬರ್ 1 ವೇಗಿ ಜಸ್ಪ್ರೀತ್​ ಬುಮ್ರಾ ಆರಂಭಿಕ ಡೀನ್ ಎಲ್ಗರ್(1)​ ವಿಕೆಟ್ ಉಡಾಯಿಸಿದರು.

ನಂತರ ಶಮಿ 5 ರನ್​ಗಳ ಅಂತರದಲ್ಲಿ ಕೀಗನ್ ಪೀಟರ್ಸನ್​(13) ಮತ್ತು ಐಡೆನ್ ಮಾರ್ಕ್ರಮ್​(15) ವಿಕೆಟ್ ಪಡೆದು ಹರಿಣಗಳಿಗೆ ಭಾರಿ ಆಘಾತವನ್ನುಂಟು ಮಾಡಿದರು. ಮೊಹಮ್ಮದ್ ಸಿರಾಜ್​ ತಮ್ಮ ಮೊದಲ ಸ್ಪೆಲ್​ನಲ್ಲೇ ಹರಿಣಗಳ ಆಪತ್ಪಾಂಧವನಾಗಿದ್ದ ರಾಸಿ ವ್ಯಾನ್ ಡರ್​ ಡಾಸೆನ್​(3)ವಿಕೆಟ್ ಪಡೆದರು.

32 ರನ್​ಗಳಿಸುವಷ್ಟರಲ್ಲಿ ತಂಡದ ಪ್ರಮುಖ 4 ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ 100ರೊಳಗೆ ಕುಸಿಯುವ ಭೀತಿಗೆ ಎದುರಾಗಿತ್ತು. ಆದರೆ 5ನೇ ವಿಕೆಟ್​ಗೆ ಟೆಂಬ ಬವೂಮ(52) ಮತ್ತು ಕ್ವಿಂಟನ್ ಡಿಕಾಕ್(34) 72 ರನ್​ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು.

ಅಪಾಯಕಾರಿಯಾಗಿ ಬೆಳೆಯುತ್ತಿದ್ದ ಈ ಜೋಡಿಯನ್ನು ಶಾರ್ದೂಲ್​ ಠಾಕೂರ್ ಬ್ರೇಕ್ ಮಾಡಿದರು. 63 ಎಸೆತಗಳಲ್ಲಿ 34 ರನ್​ಗಳಿಸಿದ್ದ ಡಿಕಾಕ್​ರನ್ನು ಕ್ಲೀನ್ ಬೌಲ್ಡ್​ ಮಾಡಿದರು. ಡಿಕಾಕ್ ನಂತರ ಬಂದ ಬ್ಯಾಟರ್​ಗಳು ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು.

103 ಎಸೆಗಳಲ್ಲಿ 10 ಬೌಂಡರಿ ಸಹಿತ 52 ರನ್​​ಗಳಿಸಿದ ಬವೂಮ ತಂಡದ ಗರಿಷ್ಠ ಸ್ಕೋರರ್​ ಆದರು. ವಿಯಾನ್ ಮಲ್ಡರ್​(12), ಜಾನ್ಸನ್​(19), ರಬಾಡ(25) ಮತ್ತು ಮಹಾರಾಜ್​(12) ರನ್​ಗಳಿಸಿ ಔಟಾದರು. ಒಟ್ಟಾರೆ ದಕ್ಷಿಣ ಆಫ್ರಿಕಾ 62.3 ಓವರ್​ಗಳಲ್ಲಿ 197ಕ್ಕೆ ಆಲೌಟ್​ ಆಗಿ 130 ರನ್​ಗಳ ಹಿನ್ನಡೆಗೊಳಗಾಯಿತು.

ಭಾರತದ ಪರ ಮೊಹಮ್ಮದ್ ಶಮಿ 44ಕ್ಕೆ 5, ಬುಮ್ರಾ 16ಕ್ಕೆ 2, ಠಾಕೂರ್​ 51ಕ್ಕೆ 2 ಮತ್ತು ಸಿರಾಜ್​ 45ಕ್ಕೆ 1 ವಿಕೆಟ್ ಪಡೆದರು.

ಇದನ್ನೂ ಓದಿ:ಟೆಸ್ಟ್​ ಕ್ರಿಕೆಟ್​ನಲ್ಲಿ ವೇಗವಾಗಿ 100 ವಿಕೆಟ್​ ಪಡೆದು ಧೋನಿ ದಾಖಲೆ ಉಡೀಸ್ ಮಾಡಿದ ಪಂತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.