ETV Bharat / sports

ಟೆಸ್ಟ್‌: ಭಾರತಕ್ಕೆ ಆಸರೆಯಾದ ಪಂತ್​-ಜಡೇಜಾ ಜೊತೆಯಾಟ

author img

By

Published : Jul 1, 2022, 10:59 PM IST

ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದ್ದ ಭಾರತ ತಂಡಕ್ಕೆ ಪಂತ್​-ಜಡೇಜಾ ಉತ್ತಮ ಜೊತೆಯಾಟ ತಂಡವನ್ನು ಉತ್ತಮ ಸ್ಥಿತಿಗೆ ತಂದು ನಿಲ್ಲಿಸಿತು. ಈ ಮೂಲಕ ಭಾರತ ಮೊದಲ ದಿನದ ಗೌರವಕ್ಕೆ ಪಾತ್ರವಾಗಿದೆ.

Rishabh pant,jadeja
Rishabh pant,jadeja

ಬರ್ಮಿಂಗ್​​ಹ್ಯಾಮ್(ಎಡ್ಜ್​ಬಾಸ್ಟನ್​): ಆತಿಥೇಯ ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಆರಂಭಿಕ ಆಘಾತದ ಹೊರತಾಗಿಯೂ, ಉಪನಾಯಕ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ ಉತ್ತಮ ರನ್​​ಗಳಿಕೆ ಮಾಡಿದೆ. 67 ಓವರ್​​ಗಳಲ್ಲಿ 6 ವಿಕೆಟ್​ನಷ್ಟಕ್ಕೆ 320ರನ್​​ಗಳಿಕೆ ಮಾಡಿದೆ. ತಂಡದ ಪರ ಪಂತ್ 146 ರನ್ ಗಳಿಸಿ ವಿಕೆಟ್‌ ಒಪ್ಪಿಸಿದರು. ಜಡೇಜಾ 67ರನ್​​ಗಳಿಸಿ ಆಟವಾಡ್ತಿದ್ದಾರೆ.

Rishabh pant
ಶತಕ ಸಿಡಿಸಿ ಮಿಂಚಿದ ಪಂತ್​

ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಭಾರತ 20.3 ಓವರ್​​​ಗಳಲ್ಲಿ 57ರನ್​ಗಳಿಕೆ ಮಾಡುವಷ್ಟರಲ್ಲಿ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿತು. ಆರಂಭಿಕ ಬ್ಯಾಟರ್​​ಗಳಾದ ಶುಬ್ಮನ್ ಗಿಲ್​(17), ಪೂಜಾರಾ(13)ರನ್​ಗಳಿಸಿ ಔಟಾದರು. ಎರಡು ವಿಕೆಟ್ ಪಡೆದುಕೊಳ್ಳುವಲ್ಲಿ ಆ್ಯಂಡರ್ಸನ್​ ಯಶಸ್ವಿಯಾದರು. ಭಾರತ 2 ವಿಕೆಟ್​ನಷ್ಟಕ್ಕೆ 57ರನ್​​ಗಳಿಕೆ ಮಾಡಿದ್ದ ವೇಳೆ ಮಳೆಯಾಟ ಶುರುವಾಗಿದ್ದರಿಂದ ಆಟಕ್ಕೆ ಸ್ವಲ್ಪ ಅಡಚಣೆಯಾಯಿತು.

ಇದಾದ ಬಳಿಕ ಮಧ್ಯಮ ಕ್ರಮಾಂಕದಲ್ಲೂ ಭಾರತದ ಬ್ಯಾಟರ್​ಗಳು ವೈಫಲ್ಯ ಅನುಭವಿಸಿದರು. ಹೀಗಾಗಿ, ತಂಡ 98 ರನ್​ಗಳಿಸುವಷ್ಟರಲ್ಲಿ 5 ವಿಕೆಟ್​​ ಕಳೆದುಕೊಂಡು ಮತ್ತಷ್ಟು ಸಂಕಷ್ಟಕ್ಕೊಳಗಾಯಿತು. ಹನುಮ ವಿಹಾರಿ(20), ವಿರಾಟ್​ ಕೊಹ್ಲಿ(11), ಶ್ರೇಯಸ್​ ಅಯ್ಯರ್​​(15)ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ವಿರಾಟ್​ ಮತ್ತೊಮ್ಮೆ ವೈಫಲ್ಯ: ಇಂಗ್ಲೆಂಡ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. 19 ಎಸೆತಗಳಲ್ಲಿ 11ರನ್​​ಗಳಿಕೆ ಮಾಡಿದ್ದ ವೇಳೆ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಸೇರಿಕೊಂಡರು. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಸತತ ವೈಫಲ್ಯ ಮುಂದುವರೆಸಿದರು. ವಿರಾಟ್​ ಕೊಹ್ಲಿ 2019ರಲ್ಲಿ ಕೊನೆಯದಾಗಿ ಶತಕ ಸಿಡಿಸಿದ್ದಾರೆ.

ಇದನ್ನೂ ಓದಿ: ENG vs IND Test: ಆಪತ್ಭಾಂದವನಾದ ಪಂತ್! 89 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ ಉಪನಾಯಕ

ಇಂಗ್ಲೆಂಡ್ ಪರ ಆ್ಯಂಡರ್ಸನ್​​ 3 ವಿಕೆಟ್, ಮ್ಯಾಟಿ ಪಾಟ್ಸ್​ 2 ವಿಕೆಟ್ ಪಡೆದುಕೊಂಡರೆ, ಬಾರ್ಡ್​ 1 ವಿಕೆಟ್ ಕಿತ್ತರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.