ETV Bharat / sports

ಬಾರ್ಡರ್​ ಗವಾಸ್ಕರ್​ ಟ್ರೋಫಿ: ಭಾರತಕ್ಕೆ ಲಕ್ಕಿ ಈ ಹೋಳ್ಕರ್​ ಸ್ಟೇಡಿಯಂ, ದಾಖಲೆಯ ಗೆಲುವಿನ ಇತಿಹಾಸ ಇಲ್ಲಿದೆ..

author img

By

Published : Feb 18, 2023, 2:07 PM IST

ದಾಖಲೆ ಗೆಲುವುಗಳನ್ನು ಬರೆದ ಹೋಳ್ಕರ್​ ಕ್ರಿಡಾಂಗಣದಲ್ಲಿ ಭಾರತ - ಆಸಿಸ್​ ಮೂರನೇ ಪಂದ್ಯ - ವಿರಾಟ್​ ದ್ವಿಶತಕ ದಾಖಲೆಯ ಸ್ಟೇಡಿಯಂ - ಬೃಹತ್​ ಅಂತರದಲ್ಲಿ ಕಿವೀಸ್​ ಕ್ಲೀನ್​ ಸ್ವೀಪ್​ ಮಾಡಿದ್ದ ಭಾರತ - ಹೋಳ್ಕರ್​ ಟೆಸ್ಟ್​ ಇತಿಹಾಸದ ನೆನಪು

ind-vs-aus-3rd-test-match
ಹೋಳ್ಕರ್​ ಸ್ಟೇಡಿಯಂ

ಇಂದೋರ್(ಮಹಾರಾಷ್ಟ್ರ): ಬಾರ್ಡರ್ ಗವಾಸ್ಕರ್ ಟ್ರೋಫಿ 2023 ಟೂರ್ನಿಯ ಎರಡನೇ ಟೆಸ್ಟ್ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿದೆ. ಈ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯ ಮೂರನೇ ಪಂದ್ಯ ಇಂದೋರ್‌ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಿಂದ ಮೂರನೇ ಟೆಸ್ಟ್​ ಪಂದ್ಯ ಇಂದೋರ್​ಗೆ ಶಿಪ್ಟ್​ ಆಗಿದೆ.

ಇಂದೋರ್‌ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಾರ್ಚ್ 1ರಿಂದ ಮೂರನೇ ಟೆಸ್ಟ್​ ಪಂದ್ಯ ಆರಂಭವಾಗಲಿದೆ. ಮಹಾರಾಷ್ಟ್ರದ ವಿದರ್ಭದಲ್ಲಿ ಭಾರತ ಮೊದಲ ಪಂದ್ಯ ಜಯಸಿದೆ. ಹೋಳ್ಕರ್ ಮೈದಾನದಲ್ಲಿ ಟೀಂ ಇಂಡಿಯಾ ಮೂರೂ ಮಾದರಿಯ ಕ್ರಿಕೆಟ್ ಆಡುತ್ತಾ ಬಂದಿದೆ. ಈ ಪಂದ್ಯದ ಬಗ್ಗೆ ಅಭಿಮಾನಿಗಳಲ್ಲಿ ಕ್ರೇಸ್​ ಹೆಚ್ಚಾಗಿದೆ. ಹೋಳ್ಕರ್ ಪಿಚ್‌ನಲ್ಲಿ ಭಾರತದ ಪ್ರದರ್ಶನ ಅದ್ಭುತವಾಗಿದೆ. ಈ ಮೈದಾನದಲ್ಲಿ ಭಾರತ ತಂಡ ಇದುವರೆಗೆ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಸೋತಿಲ್ಲ.

ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ 2022 ಅಕ್ಟೋಬರ್​ನಲ್ಲಿ ಮೊದಲ ಟಿ20 ಪಂದ್ಯವನ್ನು ಆಡಲಾಯಿತು. ನಂತರ ODI ಕ್ರಿಕೆಟ್ ಅನ್ನು ಜನವರಿ 2023 ರಲ್ಲಿ ಏಕದಿನ ಪಂದ್ಯವನ್ನು ಆಯೋಜಿಸಲಾಗಿತ್ತು. ಇದುವರೆಗೆ ಹೋಳ್ಕರ್ ಮೈದಾನದಲ್ಲಿ ಟೆಸ್ಟ್ ಮಾದರಿಯ ಎರಡು ಪಂದ್ಯ ಆಯೋಜನೆ ಆಗಿದ್ದು, ಎರಡರಲ್ಲೂ ಭಾರತ ಜಯಿಸಿದೆ.

2016ರಲ್ಲಿ ಅಕ್ಟೋಬರ್ 8 ರಿಂದ 11ರವರೆಗೆ ನ್ಯೂಜಿಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್​ ಸಹಿತ 86 ರನ್​ಗಳಿಂದ ಜಯಿಸಿತ್ತು. ನವೆಂಬರ್ 2019 ರಲ್ಲಿ, ಭಾರತ ಮತ್ತು ಬಾಂಗ್ಲಾದೇಶ ನಡುವೆ ಎರಡು ಟೆಸ್ಟ್ ಸರಣಿಯನ್ನು ಆಯೋಜಿಸಲಾಗಿದ್ದು ಇದರಲ್ಲಿ, ಬಾಂಗ್ಲಾದೇಶದ ವಿರುದ್ಧ 130 ರನ್‌ಗಳ ಗೆಲುವು ಸಾಧಿಸಿತ್ತು.

ಅಜಿಕ್ಯಾ ರೆಹಾನೆ ಟಾಪ್​ ರೆಕಾರ್ಡ್​: ಭಾರತದ ಮಾಜಿ ಉಪನಾಯಕ ಅಜಿಂಕ್ಯ ರಹಾನೆ ಹೋಲ್ಕರ್ ಕ್ರೀಡಾಂಗಣದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಬಲಗೈ ಬ್ಯಾಟ್ಸ್‌ಮನ್ ರಹಾನೆ ಆ ಅವಧಿಯಲ್ಲಿ ಎರಡು ಟೆಸ್ಟ್‌ಗಳಲ್ಲಿ 148.50 ಸರಾಸರಿಯಲ್ಲಿ 297 ರನ್ ಗಳಿಸಿದ್ದಾರೆ. 2016 ರಲ್ಲಿ ನ್ಯೂಜಿಲ್ಯಾಂಡ್​​​ ವಿರುದ್ಧ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆದ ಉದ್ಘಾಟನಾ ಟೆಸ್ಟ್ ಪಂದ್ಯದಲ್ಲಿ ರೆಹಾನೆ 188 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ರಹಾನೆ 365 ರನ್‌ಗಳ ಜೊತೆಯಾಟ ಆಡಿದರು. ಮಾಜಿ ನಾಯಕ ವಿರಾಟ್ ಕೊಹ್ಲಿ ಇದೇ ಸ್ಟೇಡಿಯಂನಲ್ಲಿ ದ್ವಿಶತಕ ಸಿಡಿಸಿದ್ದರು.

ವಿರಾಟ್​ ದ್ವಿಶತಕ: ನ್ಯೂಜಿಲ್ಯಾಂಡ್​​ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಕೊಹ್ಲಿ 366 ಎಸೆತಗಳಲ್ಲಿ 211 ರನ್ ಗಳಿಸುವ ಮೂಲಕ ಭಾರತ ಬೃಹತ್​ ಮೊತ್ತ ಕಲೆ ಹಾಕುವಲ್ಲಿ ಸಹಕರಿಸಿದರು. 2019 ರಲ್ಲಿ ಆಡಿದ ಟೆಸ್ಟ್ ಪಂದ್ಯದಲ್ಲಿ, ಅಜಿಂಕ್ಯ ರಹಾನೆ ಬಾಂಗ್ಲಾದೇಶ ವಿರುದ್ಧ ಅರ್ಧಶತಕ ಮತ್ತು ಮಯಾಂಕ್ ಅಗರ್ವಾಲ್ 243 ರನ್​ಗಳ ಗಳಿಸಿದ್ದರು.

ಅತೀ ಹೆಚ್ಚು ಅಂತರದ ದಾಖಲೆಯ ಗೆಲುವು: 2016 ರಲ್ಲಿ ಹೋಲ್ಕರ್ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವೆ ಮೂರು ಟೆಸ್ಟ್​ನ ಕೊನೆಯ ಪಂದ್ಯ ಇಲ್ಲಿ ಆಯೋಜನೆ ಗೊಂಡಿದ್ದು, ಅತೀ ಹೆಚ್ಚು ವಿಕೆಟ್​ಗಳು ಉರುಳಿದ್ದವು. ವಿರಾಟ್​ ನಾಯಕತ್ವದಲ್ಲಿ ಭಾರತ 321 ರನ್​ ಅಂತರದಲ್ಲಿ ಕಿವೀಸ್​ ವಿರುದ್ಧ ಅತೀ ಹೆಚ್ಚು ಲೀಡ್​​ನಿಂದ ಗೆಲುವು ಸಾಧಿಸಿತ್ತು. ಈ ಮೂಲಕ ಭಾರತ ಕಿವೀಸ್​ನ್ನು 3-0 ಯಿಂದ ಕ್ಲೀನ್​ ಸ್ವೀಪ್​ ಮಾಡಿತ್ತು.

ಇದನ್ನೂ ಓದಿ: ಸಿಕ್ಸರ್​​​​ನಲ್ಲಿ ಮೆಕಲಮ್​ ದಾಖಲೆ ಮುರಿದ ಸ್ಟೋಕ್ಸ್​ : 1002 ವಿಕೆಟ್​ ಪಡೆದ ಆಂಡರ್ಸನ್ ಮತ್ತು ಬ್ರಾಡ್ ಜೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.