ETV Bharat / sports

ಫೀಲ್ಡಿಂಗ್ ಮಾಂತ್ರಿಕ ಜಡೇಜಾ ಕೈ ತಪ್ಪಿದ ಸರಳ ಕ್ಯಾಚ್!- ವಿಡಿಯೋ

author img

By ETV Bharat Karnataka Team

Published : Oct 22, 2023, 5:16 PM IST

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕಠಿಣ ಕ್ಯಾಚ್​ ಅನ್ನು ಅತ್ಯಂತ ಸುಲಭವಾಗಿ ಹಿಡಿದ ಜಡೇಜಾ ಇಂದು ನ್ಯೂಜಿಲೆಂಡ್​ ವಿರುದ್ಧ ಸರಳ ಕ್ಯಾಚ್ ಪಡೆಯುವಲ್ಲಿ ಎಡವಿದರು.

Etv Bharat
Etv Bharat

ಧರ್ಮಶಾಲಾ (ಹಿಮಾಚಲ ಪ್ರದೇಶ): ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಪಾಯಿಂಟ್‌ನಲ್ಲಿ ಫೀಲ್ಡಿಂಗ್​ ಮಾಡುತ್ತಿದ್ದಾಗ ಅದ್ಭುತ ಕ್ಯಾಚ್​ ಕಾರಣಕ್ಕೆ ಪಂದ್ಯದ ನಂತರ 'ಉತ್ತಮ ಫೀಲ್ಡರ್'​ ಪದಕವನ್ನು ಫಿಲ್ಡಿಂಗ್​ ಕೋಚ್​ ಅವರು ಜಡೇಜಾಗೆ ನೀಡಿ ಗೌರವಿಸಿದ್ದರು. ಆದರೆ ಭಾನುವಾರ ಸ್ಕ್ವೇರ್​ ಲೆಗ್​​ ಜಾಗದಲ್ಲಿ ನಿಂತಿದ್ದ ಜಡೇಜಾ, ನ್ಯೂಜಿಲೆಂಡ್​ ಬ್ಯಾಟರ್​ ರಚಿನ್​ ರವೀಂದ್ರ ಅವರ ಕ್ಯಾಚ್​ ಕೈ ಚೆಲ್ಲಿದರು. ಇದು ತಂಡಕ್ಕೆ ದುಬಾರಿ ಆಗುತ್ತಾ? ಎಂಬುದು ಫಲಿತಾಂಶದ ನಂತರ ತಿಳಿಯಲಿದೆ.

ಧರ್ಮಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿತು. ಆರಂಭದಲ್ಲಿ ತಂಡ ಉತ್ತಮ ಬೌಲಿಂಗ್​ ನಿರ್ವಹಣೆ ಮಾಡಿತು. ಪವರ್​ ಪ್ಲೇ ಅಂತ್ಯಕ್ಕೆ 34 ರನ್​ಗಳಿಗೆ ನ್ಯೂಜಿಲೆಂಡ್​ ಎರಡು ವಿಕೆಟ್​​ ಕಳೆದುಕೊಂಡಿತು. ಸಿರಾಜ್​ ಎಂದಿನಂತೆ ಪವರ್‌ಪ್ಲೇನಲ್ಲಿ ಪರಿಣಾಮಕಾರಿ ಬೌಲಿಂಗ್​ ಮಾಡಿ ವಿಕೆಟ್​ ಕಬಳಿಸಿದರು. ಈ ಪಂದ್ಯದಲ್ಲಿ ಅವಕಾಶ ಪಡೆದುಕೊಂಡ ಮೊಹಮ್ಮದ್​ ಶಮಿ ಸಹ ವಿಕೆಟ್​ ಉರುಳಿಸಿದ್ದಾರೆ.

ಕ್ಯಾಚ್​ ಕೈ ಚೆಲ್ಲಿದ ಜಡೇಜಾ: ಮೊಹಮ್ಮದ್​ ಶಮಿ ಅವರ 11ನೇ ಓವರ್​ನಲ್ಲಿ ಆಗ ತಾನೇ ಕ್ರೀಸ್​ಗೆ ಬಂದು ಇನ್ನೂ ಸೆಟ್ಲ್‌​ ಆಗಿರದ ರಚಿನ್​ ರವೀಂದ್ರ ಸ್ಕ್ವೇರ್​ ಲೆಗ್​​ ವಿಭಾಗದಲ್ಲಿ ಜಾಗ ಮಾಡಿಕೊಂಡು ಬೌಂಡರಿ ಗಳಿಸಲು ಪ್ರಯತ್ನಿಸಿದರು. ಆದರೆ ಚೆಂಡು​ ಗಾಳಿಯಲ್ಲಿ ಜಡೇಜಾ ನಿಂತಿದ್ದ ಜಾಗಕ್ಕೆ ಹೋಗಿತ್ತು. ಆದರೆ ಕೈಗೆ ಬಂದ ಚೆಂಡು ಹಿಡಿಯುವಲ್ಲಿ ಜಡ್ಡು ವಿಫಲರಾದರು. ಈ ಕ್ಯಾಚ್​ ಹಿಡಿದಿದ್ದಲ್ಲಿ 12 ರನ್​ ಗಳಿಸಿದ್ದ ರಚಿನ್​ ಪೆವಿಲಿಯನ್​ಗೆ ಮರಳುತ್ತಿದ್ದರು. ಆದರೆ, ಇದೇ ಜೀವದಾನ ಬಳಸಿಕೊಂಡ ಅವರು 87 ಎಸೆತಗಳಲ್ಲಿ​ 6 ಬೌಂಡರಿ ಮತ್ತು 1 ಸಿಕ್ಸ್​ನ ಸಹಾಯದಿಂದ 75 ರನ್​ ಕಲೆಹಾಕಿದರು.

ಪಂದ್ಯ ವೀಕ್ಷಣೆಗೆ ಬಂದಿದ್ದ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಪತಿ ಕ್ಯಾಚ್​ ಕೈಚೆಲ್ಲಿದ್ದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದರು.

ಅಯ್ಯರ್​ ಅದ್ಭುತ ಕ್ಯಾಚ್​​​: ಭಾರತದ ವೇಗಿಗಳ ಎಸೆತಕ್ಕೆ ನಿಧಾನಗತಿಯಲ್ಲಿ ಕಿವೀಸ್​ ಆರಂಭಿಕರು ಬ್ಯಾಟ್​ ಬೀಸುತ್ತಿದ್ದರು. ಸಿರಾಜ್​ ತಂಡದ ನಾಲ್ಕನೇ ಓವರ್​ ಮಾಡುವಾಗ ಕವರ್​ ಪಾಯಿಂಟ್‌ನಲ್ಲಿ ಬೌಂಡರಿಗೆ ಡೆವೋನ್​ ಕಾನ್ವೆ (0) ಹೊಡೆ ಶಾಟ್ ಅ​ನ್ನು, ಅಲ್ಲೇ ಫೀಲ್ಡಿಂಗ್​​ಗೆ ನಿಂತಿದ್ದ ಶ್ರೇಯಸ್​ ಅಯ್ಯರ್​ ಅದ್ಭುತ ಡೈವ್​ ಕ್ಯಾಚ್ ಮಾಡಿ ತಂಡಕ್ಕೆ ಮೊದಲ ವಿಕೆಟ್​ ತಂದುಕೊಟ್ಟರು. ಈ ಕ್ಯಾಚ್​ ನಂತರ ಅಯ್ಯರ್​ ಜಡೇಜಾ ಕಡೆ ತಿರುಗಿ ಈ ಬಾರಿ ಉತ್ತಮ ಫೀಲ್ಡಿಂಗ್​ಗೆ ಪದಕ ನನಗೇ ಎಂದು ಸನ್ನೆ ಮಾಡಿದ್ದು ವಿಶೇಷವಾಗಿತ್ತು!.

ಇದನ್ನೂ ಓದಿ: World Cup 2023: ನ್ಯೂಜಿಲೆಂಡ್​ ವಿರುದ್ಧ ಟಾಸ್​ ಗೆದ್ದ ಭಾರತ ಬೌಲಿಂಗ್​ ಆಯ್ಕೆ: ಶಮಿ, ಸೂರ್ಯಕುಮಾರ್ ಕಣಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.