ETV Bharat / sports

ವಿರಾಟ್ ಕೊಹ್ಲಿ ಸಂಕಷ್ಟದ ಸಂದರ್ಭದಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದಾರೆ: ರೋಹಿತ್ ಶರ್ಮಾ

author img

By ETV Bharat Karnataka Team

Published : Nov 6, 2023, 11:44 AM IST

Rohit Sharma comments on Team India performance: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿನ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ICC Cricket World Cup 2023  rohit sharma comments on team india  team india won against south africa  Eden Gardens Kolkata  ಇಂತಹ ಸಂದರ್ಭಗಳಲ್ಲಿ ಕೊಹ್ಲಿಯ ಇನ್ನಿಂಗ್ಸ್ ಬಹಳ ಪ್ರಮುಖ  ನಾಯಕ ರೋಹಿತ್ ಶರ್ಮಾ  ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವಿನ ಬಗ್ಗೆ ಸಂತೋಷ ವ್ಯಕ್ತ  ಪ್ರತಿಯೊಬ್ಬ ಆಟಗಾರರು ಉತ್ತಮ ಫಾರ್ಮ್‌  ಗೆಲ್ಲುವಲ್ಲಿ ಬೌಲರ್‌ಗಳು ಪ್ರಮುಖ ಪಾತ್ರ  ಪರಿಸ್ಥಿತಿಗೆ ಅನುಗುಣವಾಗಿ ಸಾಧನೆ  ಕಳೆದ ಮೂರು ಪಂದ್ಯಗಳಲ್ಲಿ ಆಡಿದ ರೀತಿ ಇದಕ್ಕೆ ನಿದರ್ಶನ  ಪರಿಸ್ಥಿತಿಗೆ ತಕ್ಕಂತೆ ನಾವು ಹೇಗೆ ಸುಧಾರಿಸಿದ್ದೇವೆ
ನಾಯಕ ರೋಹಿತ್ ಶರ್ಮಾ

ಕೋಲ್ಕತ್ತಾ(ಪಶ್ಚಿಮ ಬಂಗಾಳ): ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವಿನಲ್ಲಿ ಬೌಲರ್‌ಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಪರಿಸ್ಥಿತಿಗೆ ಅನುಗುಣವಾಗಿ ಇಂಥ ಸಾಧನೆ ಮಾಡವುದು ಎಲ್ಲರಿಗೂ ಸಂತೋಷ ನೀಡುತ್ತದೆ. ಕಳೆದ ಮೂರು ಪಂದ್ಯಗಳಲ್ಲಿ ನಾವು ಆಡಿದ ರೀತಿ ಇದಕ್ಕೆ ನಿದರ್ಶನ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದರು. ದಕ್ಷಿಣ ಆಫ್ರಿಕಾ ವಿರುದ್ಧ 243 ರನ್‌ಗಳಿಂದ ಭರ್ಜರಿ ಜಯ ಸಾಧಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಕಳೆದ ಮೂರು ಪಂದ್ಯಗಳನ್ನು ನೋಡಿದರೆ ಪರಿಸ್ಥಿತಿಗೆ ತಕ್ಕಂತೆ ನಾವು ಹೇಗೆ ಸುಧಾರಿಸಿದ್ದೇವೆ ಎಂಬುದು ಗೊತ್ತಾಗುತ್ತದೆ. ಇಂಗ್ಲೆಂಡ್ ವಿರುದ್ಧ ಸಾಕಷ್ಟು ಒತ್ತಡ ಎದುರಿಸಿ ಗೆದ್ದೆವು. ಸಾಧಾರಣ ಸ್ಕೋರ್ ಗಳಿಸಿದರೂ ನಮ್ಮ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡಿದರು. ಆ ಬಳಿಕ ಶ್ರೀಲಂಕಾ ವಿರುದ್ಧವೂ ಮೊದಲ ಓವರ್‌ನಲ್ಲಿಯೇ ವಿಕೆಟ್ ಕಳೆದುಕೊಂಡೆವು. ಆದರೆ, ನಾವು ಬೃಹತ್ ರನ್ ಗಳಿಸಿ ಲಂಕಾವನ್ನು 55 ರನ್‌ಗಳಿಗೆ ಔಟ್ ಮಾಡಿದೆವು.

ನಾವು ಕೆಲವು ಪಂದ್ಯಗಳಲ್ಲಿ ಕಡಿಮೆ ಅವಧಿಯಲ್ಲಿ ವಿಕೆಟ್ ಕಳೆದುಕೊಂಡಿದ್ದೇವೆ. ಆದರೆ, ವಿರಾಟ್ ಕೊಹ್ಲಿ ಅಂತಹ ಸಂಕಷ್ಟದ ಸಂದರ್ಭಗಳಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದಾರೆ. ಅವರಿಂದ ನಮಗೆ ಇನ್ನಷ್ಟು ಇನ್ನಿಂಗ್ಸ್ ಬೇಕು. ಹಾರ್ಡ್ ಹಿಟ್ಟರ್‌ಗಳಿರುವ ದಕ್ಷಿಣ ಆಫ್ರಿಕಾದಂತಹ ತಂಡವನ್ನು ಸೋಲಿಸುವುದು ಸುಲಭವಲ್ಲ. ನಮ್ಮ ಬೌಲರ್‌ಗಳು ಲೈನ್ ಮತ್ತು ಲೆಂಗ್ತ್‌ಗೆ ಅಂಟಿಕೊಂಡು ಬೌಲಿಂಗ್ ಮಾಡಿದ್ದಾರೆ ಎಂದು ರೋಹಿತ್​ ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದರು.

ತಂಡದ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಶ್ರೇಯಸ್ ಅಯ್ಯರ್ ತಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು ಬರುತ್ತಿದ್ದಾರೆ. ನೀವು ಆಟಗಾರರನ್ನು ನಂಬಬೇಕು. ಆದ್ರೆ, ಪ್ರತಿ ಬಾರಿಯೂ ಆಟಗಾರ ಉತ್ತಮವಾಗಿ ಆಡುವುದು ಕಷ್ಟ. ಶಮಿ ಪುನರಾಗಮ ಸಂತೋಷ ನೀಡುತ್ತಿದೆ. ಗಿಲ್ ಜೊತೆ ಸೇರಿ ಅನೇಕ ಪಂದ್ಯಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದೇನೆ. ಜಡ್ಡು ತನ್ನ ಚಮತ್ಕಾರವನ್ನು ಮುಂದುವರೆಸಿದ್ದಾರೆ. ಅವರು ಪ್ರತಿಯೊಂದು ಸ್ವರೂಪದಲ್ಲೂ ಮಿಂಚುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದರು. ನಮಗೆ ಮುಂಬರುವ ಪಂದ್ಯಗಳು ಬಹಳ ಮುಖ್ಯ. ಹಾಗಾಗಿ ಯಾವುದೇ ಬದಲಾವಣೆ ಮಾಡಲು ಬಯಸುವುದಿಲ್ಲ ಎಂದು ರೋಹಿತ್ ಹೇಳಿದರು.

"ಬೃಹತ್ ಗುರಿ ಮುರಿಯುವುದು ಸವಾಲಿನ ಸಂಗತಿ ಎಂಬುದು ನಮಗೆ ಗೊತ್ತು. ಆದರೆ, ಈ ವಿಷಯದಲ್ಲಿ ನಾವು ತೀರಾ ಹಿಂದುಳಿದಿದ್ದೇವೆ. ಈ ವಿಷಯದ ಕುರಿತು ಗಂಭೀರ ಚರ್ಚೆಯ ಅಗತ್ಯವಿದೆ. ಮೊದಲ 10 ಓವರ್‌ಗಳಲ್ಲಿ ಭಾರತದ ಬ್ಯಾಟರ್‌ಗಳು 90 ರನ್ ಗಳಿಸಿದರು. ಆದರೆ, ಆ ಬಳಿಕ ನಮ್ಮ ಬೌಲರ್‌ಗಳು ಎಸೆತಗಳನ್ನು ಸಮರ್ಥವಾಗಿಯೇ ಎದುರಿಸುತ್ತಲೇ ಮುಂದೆ ಸಾಗಿದರು. ಕೊಹ್ಲಿ-ಅಯ್ಯರ್ ಜೊತೆಯಾಟ ದೊಡ್ಡ ಪ್ರಭಾವ ಬೀರಿತು. ಈ ಪಿಚ್ ಬ್ಯಾಟಿಂಗ್‌ಗೆ ಸೂಕ್ತ ಎಂದು ಭಾವಿಸಿದ್ದೆವು. ಆದರೆ ಪರಿಸ್ಥಿತಿಗೆ ಅನುಗುಣವಾಗಿ ಆಡಲು ಸಾಧ್ಯವಾಗಲಿಲ್ಲ. ಅದೇ ಸ್ಥಳದಲ್ಲಿ ಸೆಮೀಸ್ ಪಂದ್ಯಗಳನ್ನು ಆಡಬೇಕಾಗುತ್ತದೆ. ನಾವು ಖಂಡಿತವಾಗಿಯೂ ಚೇತರಿಸಿಕೊಳ್ಳುತ್ತೇವೆ" ಎಂದು ದಕ್ಷಿಣ ಆಫ್ರಿಕಾದ ನಾಯಕ ಬವುಮಾ ಹೇಳಿದ್ದಾರೆ.

ಇದನ್ನೂ ಓದಿ: 'ವಿರಾಟ್​' ಸಾಧನೆಗೆ ಭರಪೂರ ಬಹುಪರಾಕ್: ಯಾರು, ಏನಂದ್ರು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.