ETV Bharat / sports

ಏಕದಿನ ವಿಶ್ವಕಪ್​ನಲ್ಲಿ ಗರಿಷ್ಠ ಸಂಖ್ಯೆಯ ಬೌಲರ್​ಗಳ ಬಳಕೆ.. ಹಲವು ದಾಖಲೆ ನಿರ್ಮಿಸಿದ ಟೀಂ ಇಂಡಿಯಾ

author img

By ETV Bharat Karnataka Team

Published : Nov 13, 2023, 6:22 PM IST

31 ವರ್ಷಗಳ ಬಳಿಕ ಏಕದಿನ ವಿಶ್ವಕಪ್​ನಲ್ಲಿ ಗರಿಷ್ಠ ಸಂಖ್ಯೆಯ ಬೌಲರ್​ಗಳನ್ನು ಬಳಸಿದ್ದು ಇದೇ ಮೊದಲು. ಪಂದ್ಯದಲ್ಲಿ 9 ಬೌಲರ್‌ಗಳ ಬಳಸಿರುವ ರೋಹಿತ್ ಸೇನೆ ಈ ಪಂದ್ಯದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದಿದೆ.

ICC Cricket World Cup 2023  most bowlers used in an odi  odi world cup innings  ICC Cricket World Cup 2023  Chinnaswamy Stadium Bengaluru  India vs Netherlands 45th Match  ಏಕದಿನ ವಿಶ್ವಕಪ್​ನಲ್ಲಿ ಗರಿಷ್ಠ ಸಂಖ್ಯೆಯ ಬೌಲರ್​ಗಳ ಬಳಕೆ  ಹಲವು ದಾಖಲೆ ನಿರ್ಮಿಸಿದ ಟೀಂ ಇಂಡಿಯಾ  ಏಕದಿನ ವಿಶ್ವಕಪ್​ನಲ್ಲಿ ಗರಿಷ್ಠ ಸಂಖ್ಯೆಯ ಬೌಲರ್  ಪಂದ್ಯದಲ್ಲಿ 9 ಬೌಲರ್‌ಗಳ ಬಳಸಿರುವ ರೋಹಿತ್  ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಗೆಲುವಿನ ಓಟ  ಒಂಬತ್ತು ಪಂದ್ಯಗಳಲ್ಲಿ ಒಂಬತ್ತನ್ನು ಗೆದ್ದು ಅಗ್ರ ಸ್ಥಾನ  ಅಗ್ರ ಸ್ಥಾನದೊಂದಿಗೆ ಸೆಮಿಸ್‌ಗೆ ಮುನ್ನಡೆ
ಏಕದಿನ ವಿಶ್ವಕಪ್​ನಲ್ಲಿ ಗರಿಷ್ಠ ಸಂಖ್ಯೆಯ ಬೌಲರ್​ಗಳ ಬಳಕೆ

ಬೆಂಗಳೂರು: ಟೀಂ ಇಂಡಿಯಾ ಏಕದಿನ ವಿಶ್ವಕಪ್ ಲೀಗ್ ಹಂತವನ್ನು ಅಜೇಯವಾಗಿ ಮುಗಿಸಿದೆ. ಇಲ್ಲಿಯವರೆಗೆ ಆಡಿದ 9 ಪಂದ್ಯಗಳಲ್ಲಿ ಗೆದ್ದು ಸೆಮಿಸ್‌ಗೆ ಸಜ್ಜಾಗಿದೆ. ನೆದರ್ಲ್ಯಾಂಡ್ಸ್ ಜೊತೆಗಿನ ಪಂದ್ಯವು ಸೆಮಿಸ್ ಮೊದಲು ಟೀಮ್ ಇಂಡಿಯಾಗೆ ಅಭ್ಯಾಸ ಪಂದ್ಯವಾಗಿ ಕಾರ್ಯನಿರ್ವಹಿಸಿತು. ಎದುರಾಳಿ ನೆದರ್ಲ್ಯಾಂಡ್ಸ್​ಗೆ 411 ರನ್ ಗಳ ಬೃಹತ್ ಗುರಿ ನೀಡುತ್ತಿದ್ದಂತೆ ರೋಹಿತ್ ಬೌಲಿಂಗ್​ನಲ್ಲಿ ಹೊಸ ಪ್ರಯೋಗ ಮಾಡಿದ್ದು, ಒಟ್ಟು 9 ಬೌಲರ್‌ಗಳನ್ನು ಬಳಸಿಕೊಂಡರು.

ಇನಿಂಗ್ಸ್‌ನ ಮಧ್ಯದಲ್ಲಿ ಕೊಹ್ಲಿ, ಗಿಲ್ ಮತ್ತು ಸೂರ್ಯ ಅವರೊಂದಿಗೆ ರೋಹಿತ್ ಸಹ ಬೌಲಿಂಗ್ ಮಾಡಿದರು. ವಿರಾಟ್ ಕೊಹ್ಲಿ ವಿಕೆಟ್ ಪಡೆದಾಗ ಸಂಭ್ರಮಾಚರಣೆ ವಿಭಿನ್ನವಾಗಿತ್ತು. 31 ವರ್ಷಗಳಲ್ಲಿ ವಿಶ್ವಕಪ್‌ನಲ್ಲಿ ಗರಿಷ್ಠ ಸಂಖ್ಯೆಯ ಬೌಲರ್‌ಗಳನ್ನು (9) ಬಳಸಿದ್ದು ಇದೇ ಮೊದಲು. ನ್ಯೂಜಿಲೆಂಡ್ 1992ರಲ್ಲಿ 9 ಬೌಲರ್‌ಗಳನ್ನು ಬಳಸಿತ್ತು. ಇದಕ್ಕೂ ಮೊದಲು ಇಂಗ್ಲೆಂಡ್ 1987ರ ವಿಶ್ವಕಪ್‌ನಲ್ಲಿ 9 ಬೌಲರ್‌ಗಳೊಂದಿಗೆ ಬೌಲಿಂಗ್ ಮಾಡಿತ್ತು.

ಈ ಪಂದ್ಯದಲ್ಲಿ ಇನ್ನೂ ಕೆಲವು ದಾಖಲೆಗಳು ದಾಖಲಾದವು..

  • ಒಂದು ಕ್ಯಾಲೆಂಡರ್ ವರ್ಷದಲ್ಲಿ ಭಾರತದಿಂದ ಅತಿ ಹೆಚ್ಚು ODI ಗೆಲುವುಗಳು: 24 (2023), 24 (1998), 22 (2013)
  • ಆಸ್ಟ್ರೇಲಿಯಾ ನಂತರ ಒಂದೇ ವಿಶ್ವಕಪ್‌ನಲ್ಲಿ ಸತತ ಅತಿ ಹೆಚ್ಚು ಗೆಲುವು ದಾಖಲಿಸಿದ ಮೂರನೇ ತಂಡ ಭಾರತ. 2003 ಮತ್ತು 2007ರಲ್ಲಿ ಆಸೀಸ್ ಸತತ 11 ಜಯ ದಾಖಲಿಸಿತ್ತು. ಈ ಮೆಗಾ ಟೂರ್ನಮೆಂಟ್‌ನಲ್ಲಿ ಭಾರತ 9 ಗೆಲುವು ದಾಖಲಿಸಿದೆ.
  • ರವೀಂದ್ರ ಜಡೇಜಾ ಈ ಟೂರ್ನಿಯಲ್ಲಿ ಇದುವರೆಗೆ ಒಟ್ಟು 16 ವಿಕೆಟ್ ಪಡೆದಿದ್ದಾರೆ. ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಸ್ಪಿನ್ನರ್ ಎಂಬ ದಾಖಲೆಯನ್ನು ಅನಿಲ್ ಕುಂಬ್ಳೆ (15) ಅವರನ್ನು ಹಿಂದಿಕ್ಕಿದ್ದಾರೆ.
  • ಭಾರತ (215) ಒಂದು ಕ್ಯಾಲೆಂಡರ್ ವರ್ಷದಲ್ಲಿ ODIಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಗಳಿಸಿದ ತಂಡವಾಗಿದೆ
  • ಕೆಎಲ್ ರಾಹುಲ್ ಏಕದಿನ ವಿಶ್ವಕಪ್‌ನಲ್ಲಿಯೇ ಭಾರತದ ಪರ ಅತ್ಯಂತ ವೇಗವಾಗಿ ಶತಕ (62 ಎಸೆತಗಳಲ್ಲಿ) ಗಳಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಹೊಂದಿದ್ದಾರೆ.

ಓದಿ: "ವಿಶ್ವಕಪ್​ ಅನುಭವದಲ್ಲಿ ತಂಡ ಮುನ್ನಡೆಸಬಲ್ಲೆ": ಬಾಂಗ್ಲಾ ನಾಯಕತ್ವದ ಕುರ್ಚಿಗೆ ಟವೆಲ್ ಹಾಕಿದ ಶಾಂಟೊ

ನೆದರ್ಲೆಂಡ್ಸ್​ ವಿರುದ್ಧ ಭರ್ಜರಿ ಜಯ: ನೆದರ್ಲೆಂಡ್ಸ್ ವಿರುದ್ಧದ ಭಾರತ ತಂಡ ಅಂತಿಮ ಲೀಗ್ ಪಂದ್ಯದಲ್ಲಿ 160 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 410 ರನ್ ಗಳಿಸಿತು. ಈ ಬೃಹತ್ ಗುರಿಯಲ್ಲಿ ನೆದರ್ಲೆಂಡ್ಸ್ 250 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಬೌಲರ್‌ಗಳಲ್ಲಿ ಬುಮ್ರಾ, ಸಿರಾಜ್, ಕುಲದೀಪ್ ಯಾದವ್ ಮತ್ತು ಜಡೇಜಾ ತಲಾ ಎರಡು ವಿಕೆಟ್ ಪಡೆದರೆ, ಕೊಹ್ಲಿ ಮತ್ತು ರೋಹಿತ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು. ಭಾರತ ತಂಡದಲ್ಲಿ ವಿಕೆಟ್ ಕೀಪರ್ ಕೆಎಲ್ ರಾಹುಲ್ ಮತ್ತು ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಹೊರತುಪಡಿಸಿ ಎಲ್ಲರೂ ಬೌಲಿಂಗ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.