ETV Bharat / sports

ಐಸಿಸಿ ಮಹಿಳಾ ಟಿ20 ವಿಶ್ವಕಪ್‌: ಇಂದು ಭಾರತ-ಪಾಕಿಸ್ತಾನ ಸೆಣಸಾಟ

author img

By

Published : Feb 12, 2023, 9:59 AM IST

ಐಸಿಸಿ ಮಹಿಳಾ ಟಿ20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ ಇಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

ICC Womens T20 World Cup
ಟೀಮ್ ಇಂಡಿಯಾ

ಕೇಪ್ ಟೌನ್ (ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾದಲ್ಲಿ ಐಸಿಸಿ ಮಹಿಳಾ ಟಿ20 ವಿಶ್ವಕಪ್​ ಪಂದ್ಯಗಳು ನಿನ್ನೆಯಿಂದ(ಶನಿವಾರ) ಪ್ರಾರಂಭವಾಗಿವೆ. ಕಳೆದ ಬಾರಿ ಫೈನಲ್​ನಲ್ಲಿ ಸೋಲುಂಡಿದ್ದ ಟೀಂ​ ಇಂಡಿಯಾ ಈ ಬಾರಿ ಕಪ್​ ಗೆಲ್ಲಲು ತವಕಿಸುತ್ತಿದೆ. ಈ ನಿಟ್ಟಿನಲ್ಲಿ ಇಂದು ತಮ್ಮ ಮೊದಲ ಪಂದ್ಯದಲ್ಲಿ ಹರ್ಮನ್​ ಪ್ರೀತ್​ ಕೌರ್​ ಸಾರಥ್ಯದ ಬಳಗ ಬದ್ಧವೈರಿ ಪಾಕಿಸ್ತಾನದ ಜತೆ ಸೆಣಸಾಡಲಿದೆ. ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾದಲ್ಲೇ ತ್ರಿಕೋನ ಸರಣಿ ನಡೆದಿದ್ದು ಭಾರತ ತಂಡ​​ ಭಾಗಿಯಾಗಿತ್ತು.

ಇಂದು ಸಂಜೆ ಕೇಫ್​ಟೌನ್​ನ ನ್ಯೂಲ್ಯಾಂಡ್​ ಸ್ಟೇಡಿಯಂನಲ್ಲಿ ಭಾರತ- ಪಾಕ್ ತಂಡ​ಗಳು ಮುಖಾಮುಖಿಯಾಗಲಿವೆ. ಇತ್ತಂಡಗಳಲ್ಲಿ ಬ್ಯಾಟಿಂಗ್, ಬೌಲಿಂಗ್‌ ಸಾಧನೆಗಳ ಅಂಕಿಅಂಶಗಳನ್ನು ಗಮನಿಸಿದರೆ ಭಾರತವೇ ಬಲಿಷ್ಠವಾಗಿದೆ. ಪಾಕ್‌ ಬ್ಯಾಟಿಂಗ್​ನಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸುತ್ತಿದೆ. ಹೀಗಿದ್ದರೂ ಸಂಪ್ರದಾಯಕ ವೈರಿಯನ್ನು ಮಣಿಸಲು 'ಭಾರತೀ'ಯರು ಸಾಕಷ್ಟು ಪೂರ್ವತಯಾರಿ ಮಾಡಿಕೊಂಡೇ ಕಣಕ್ಕಿಳಿಯುತ್ತಿದ್ದಾರೆ.

ಇದನ್ನೂ ಓದಿ: ಮಹಿಳಾ ಟಿ 20 ವಿಶ್ವಕಪ್​: ಆಸ್ಟ್ರೇಲಿಯಾ ತಂಡ ಪಾರಮ್ಯ, ಪ್ರಶಸ್ತಿ ಗೆಲ್ತಾರಾ ಭಾರತದ ವನಿತೆಯರು?

ಈವರೆಗಿನ ಎಲ್ಲ ಐಸಿಸಿ ಟೂರ್ನಿಗಳಲ್ಲೂ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದ ದಾಖಲೆ ಹೊಂದಿರುವ ಪಾಕ್​​ ಇಂದು ಮೊದಲ ಜಯದೊಂದಿಗೆ ಟೂರ್ನಿ ಆರಂಭಿಸುವ ಉತ್ಸುಕತೆಯಲ್ಲಿದೆ. ಇನ್ನು ಭಾರತದ ಪ್ರಮುಖ ಬ್ಯಾಟರ್, ಗಾಯಾಳುವಾಗಿರುವ ಸ್ಮೃತಿ ಮಂಧಾನ ಈ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಶಫಾಲಿ, ಜೆಮಿಮಾ, ದೀಪ್ತಿ ಹಾಗೂ ರೇಣುಕಾ ಸೇರಿದಂತೆ ಪ್ರಮುಖ ಆಟಗಾರರರು ತಂಡದಲ್ಲಿದ್ದಾರೆ. ಪಾಕಿಸ್ತಾನ ನಿದಾ ದಾರ್​ ಅವರನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ತಂಡವನ್ನು ಬಿಸ್ಮಾ ಮಹರೂಫ್​ ಮುನ್ನಡೆಸುತ್ತಿದ್ದಾರೆ.

ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಲಂಕಾ, ವೆಸ್ಟ್​​ ಇಂಡೀಸ್​​ ವಿರುದ್ಧ ಇಂಗ್ಲೆಂಡ್ ಗೆದ್ದು​​ ಶುಭಾರಂಭ ಮಾಡಿವೆ.

ಭಾರತ ಮಹಿಳಾ ತಂಡ ಹೀಗಿದೆ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ರಿಚಾ ಘೋಷ್, ಜೆಮಿಮಾ ರೋಡ್ರಿಗಸ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ದೇವಿಕಾ ವೈದ್ಯ, ರಾಧಾ ಯಾದವ್, ರೇಣುಕಾ ಸರವನ್, ರೇಣುಕಾ ಠಾಕೂರ್ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್ ಹಾಗು ಶಿಖಾ ಪಾಂಡೆ.

ಪಾಕಿಸ್ತಾನ ತಂಡ: ಬಿಸ್ಮಾ ಮಹರೂಫ್ (ನಾಯಕಿ), ಐಮನ್ ಅನ್ವರ್, ಆಲಿಯಾ ರಿಯಾಜ್, ಆಯೇಶಾ ನಸೀಮ್, ಸದಾಫ್ ಶಮಾಸ್, ಫಾತಿಮಾ ಸನಾ, ಜವೇರಿಯಾ ಖಾನ್, ಮುನೀಬಾ ಅಲಿ, ನಶ್ರಾ ಸಂಧು, ನಿದಾ ದಾರ್, ಒಮಿಮಾ ಸೊಹೈಲ್, ಸಾದಿಯಾ ಇಕ್ಬಾಲ್, ಸಿದ್ರಾ ಅಮೀನ್, ಸಿದ್ರಾ ನವಾಜ್ ಹಾಗು ತುಬಾ ಹಸನ್.

ಪಂದ್ಯ ಆರಂಭ: ಸಂಜೆ -6.30ಕ್ಕೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಡಿಸ್ನಿ+ ಹಾಟ್‌ಸ್ಟಾರ್‌.

ಇದನ್ನೂ ಓದಿ: ಮಹಿಳಾ ಟಿ20 ವಿಶ್ವಕಪ್​: ಆತಿಥೇಯ ದಕ್ಷಿಣ ಆಫ್ರಿಕಾಗೆ ಲಂಕನ್ನರ ಆಘಾತ

ಅಂಡರ್-19 ಚಾಂಪಿಯನ್ಸ್‌ ಪಟ್ಟ: ಜ.29ರಂದು ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಮಿಂಚಿದ ಟೀಂ ಇಂಡಿಯಾ, ಇಂಗ್ಲೆಂಡ್‌ ಎದುರು 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.