ETV Bharat / sports

Under 19 World Cup: ಬಾಂಗ್ಲಾದೇಶ ಮಣಿಸಿ ಸೆಮೀಸ್​ ತಲುಪಿದ ಯಶ್​ ಪಡೆ

author img

By

Published : Jan 30, 2022, 1:03 AM IST

Updated : Jan 30, 2022, 2:34 AM IST

ಯಶ್​ ದುಲ್​ ನೇತೃತ್ವದ ಭಾರತ ತಂಡವು ಅಂಡರ್​-19 ವಿಶ್ವಕಪ್​​ ಟೂರ್ನಿಯ ಸೆಮಿಫೈನಲ್​ ತಲುಪಿದೆ.

Under 19 World Cup
ಬಾಂಗ್ಲಾದೇಶ ಮಣಿಸಿ ಸೆಮೀಸ್​ ತಲುಪಿದ ಭಾರತ

ಆ್ಯಂಟಿಗುವಾ(ವೆಸ್ಟ್​ ಇಂಡೀಸ್​): ಭಾರತದ ಬೌಲರ್​ಗಳ ಮಾರಕ ದಾಳಿಗೆ ತತ್ತರಿಸಿದ ಹಾಲಿ ಚಾಂಪಿಯನ್ಸ್​ ಬಾಂಗ್ಲಾದೇಶವು ಐಸಿಸಿ U19 ವಿಶ್ವಕಪ್‌ನ ಸೂಪರ್ ಲೀಗ್ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಅನುಭವಿಸಿದೆ. 5 ವಿಕೆಟ್​ಗಳ ಅಂತರದ ಜಯಭೇರಿ ಬಾರಿಸಿದ ಯಶ್​ ದುಲ್​ ಪಡೆಯು ಸೆಮಿಫೈನಲ್ ಪ್ರವೇಶಿಸಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಬಾಂಗ್ಲಾ ಕೇವಲ 37.1 ಓವರ್​ಗಳಲ್ಲಿ 111 ರನ್​ಗಳಿಗೆ ಆಲೌಟ್​ ಆಯಿತು. ಆರಂಭದಿಂದಲೂ ರನ್​ ಗಳಿಸಲು ಪರದಾಡಿದ ಬಾಂಗ್ಲಾ ದಾಂಡಿಗರಲ್ಲಿ ಮೂವರು ಮಾತ್ರ ಎರಡಂಕಿ ಮೊತ್ತ ತಲುಪಿದರು. ಏಚ್​ ಮೊಲ್ಹಾ 17, ಮೆಹೆರೊಬ್​ 30 ಹಾಗೂ ಅಶಿಕುರ್​ ಝಮಾನ್​ 16 ರನ್​ ಗಳಿಸಿ ಕೊಂಚ ಹೋರಾಟ ನಡೆಸಿದರು. ಭಾರತದ ಪರ ಮಾರಕ ಬೌಲಿಂಗ್​ ಪ್ರದರ್ಶಿಸಿದ ರವಿಕುಮಾರ್​ 14ಕ್ಕೆ 3, ವಿಕಿ ಒಸ್ತ್ವಾಲ್​ 25ಕ್ಕೆ 2 ವಿಕೆಟ್​ ಕಬಳಿಸಿ ಗಮನ ಸೆಳೆದರು.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಬಳಿಕ 112 ರನ್​ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕ ಆಟಗಾರ ರಘುವಂಶಿ 44 ರನ್​ ಬಾರಿಸಿ ನೆರವಾದರು. ಬಳಿಕ ಶೇಕ್​ ರಶೀದ್​ 26, ನಾಯಕ ಯಶ್​ ದುಲ್ ಅಜೇಯ​ 20 ಹಾಗೂ ಕೌಶಲ್​ ತಾಂಬೆ 11* ರನ್​ ಗಳಿಸಿ 30.1 ಓವರ್​ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಈ ಗೆಲುವಿನೊಂದಿಗೆ ಭಾರತವು ಫೆಬ್ರವರಿ 2ರಂದು ಸೂಪರ್ ಲೀಗ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ: 'ನಮ್ಮ ಕಾಲದಲ್ಲಿ ಈ ನಿಯಮ ಜಾರಿಯಲ್ಲಿದ್ದಿದ್ದರೆ ಸಚಿನ್​ ಲಕ್ಷ ರನ್​ ಸಿಡಿಸುತ್ತಿದ್ರು': ಅಖ್ತರ್​!

Last Updated : Jan 30, 2022, 2:34 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.