ETV Bharat / sports

World Cup 2023: ವಿಶ್ವಕಪ್​ಗೆ ಇನ್ನು ಮೂರೇ ತಿಂಗಳು.. ಇದೇ 27ಕ್ಕೆ ವೇಳಾಪಟ್ಟಿ ಪ್ರಕಟ

author img

By

Published : Jun 24, 2023, 7:40 PM IST

ಐಸಿಸಿ ಇದೇ 27 ರಂದು ಮುಂಬೈನಲ್ಲಿ ಹೋಟೆಲ್​ವೊಂದರಲ್ಲಿ ಮಾಧ್ಯಮಗೋಷ್ಟಿ ಕರೆದಿದ್ದು, ಅಂದೇ ವಿಶ್ವಕಪ್​ ವೇಳಾಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಹೆಚ್ಚಿದೆ.

icc odi world cup 2023 schedule expected to be announced on june 27
Etv Bharatವಿಶ್ವಕಪ್

ಏಕದಿನ ವಿಶ್ವಕಪ್​ಗೆ ಕೇವಲ ಮೂರು ಮಾತ್ರ ಬಾಕಿ ಇದೆ, ಇನ್ನೂ ಐಸಿಸಿ ಪಂದ್ಯಗಳ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ವಾರ್ಷಿಕ ಕ್ಯಾಲೆಂಡರ್​ ಪ್ರಕಾರ ಭಾರತದಲ್ಲಿ ಈ ವರ್ಷದ ಕೊನೆಯ ತಿಂಗಳುಗಳಾದ ಅಕ್ಟೋಬರ್​ ಮತ್ತು ನವೆಂಬರ್​ನಲ್ಲಿ ಐಸಿಸಿ ಏಕದಿನ ವಿಶ್ವಕಪ್​ ನಡೆಯಲಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ವೇಳೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ -BCCI) ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ (ಐಸಿಸಿ-ICC)ಗೆ ಕರಡು ವೇಳಾ ಪಟ್ಟಿಯನ್ನು ಸಲ್ಲಿಸಿತ್ತು. ಇದನ್ನು ಐಸಿಸಿ ಸ್ಪರ್ಧಿಸುವ ರಾಷ್ಟ್ರಗಳಿಗೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸುವಂತೆ ತಿಳಿಸಿ ಆಯಾ ಕ್ರಿಕೆಟ್​ ಮಂಡಳಿಗೆ ಕಳುಹಿಸಿಕೊಟ್ಟಿದೆ ಎಂದು ವರದಿಗಳಾಗಿವೆ.

ವಿಶ್ವಕಪ್ ಸನಿಹವಾಗುತ್ತಿದ್ದು, ಇದೇ 27 ರಂದು ಐಸಿಸಿ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ ಮುಂದಿನ ವಾರ ಮುಂಬೈನಲ್ಲಿ ಏಕದಿನ ವಿಶ್ವಕಪ್​ನ ಪ್ರಮುಖ ಘೋಷಣೆಯ ಬಗ್ಗೆ ಕಾರ್ಯಕ್ರಮವನ್ನು ಆಯೋಜಿಸಿದೆ. 2023ರ ಏಕದಿನ ವಿಶ್ವಕಪ್‌ನ ವೇಳಾಪಟ್ಟಿಯನ್ನು ಇದೇ ಕಾರ್ಯಕ್ರಮದಲ್ಲಿ ಐಸಿಸಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಮಂಗಳವಾರ ಬೆಳಗ್ಗೆ 11:30 ರಿಂದ ಮುಂಬೈನ ಸೇಂಟ್ ರೆಜಿಸ್ ಹೋಟೆಲ್‌ನ ಆಸ್ಟರ್ ಬಾಲ್‌ರೂಮ್‌ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

icc odi world cup 2023 schedule expected to be announced on june 27
ಐಸಿಸಿ ಪತ್ರಿಕಾಗೋಷ್ಠಿ

ಪಾಕಿಸ್ತಾನ ತಂಡ ಕರಡು ವೇಳಾಪಟ್ಟಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಪಾಕಿಸ್ತಾನ ತಂಡ ಚೆನ್ನೈ ಮತ್ತು ಬೆಂಗಳೂರು ಕ್ರೀಡಾಂಗಣದಲ್ಲಿ ಆಡುವುದಿಲ್ಲ ಎಂದು ಹೇಳಿತ್ತು. ಚೆನ್ನೈನ ಚೆಪಾಕ್​ ಕ್ರೀಡಾಂಗಣ ಸ್ಪಿನ್​ ಗೆ ಸಹಕಾರಿಯಾಗಿದ್ದು, ಅಫ್ಘಾನಿಸ್ತಾನದಲ್ಲಿ ಪ್ರಬಲ ಸ್ಪಿನ್​ ಬೌಲರ್​ಗಳಿರುವುದರಿಂದ ಅಲ್ಲಿ ಆಡುವುದಿಲ್ಲ ಎಂದು ಹೇಳಿತ್ತು. ಆದರೆ ಆಸ್ಟ್ರೇಲಿಯಾದ ವಿರುದ್ಧ ಏಕೆ ಬೆಂಗಳೂರು ಮೈದಾನದಲ್ಲಿ ಆಡಲ್ಲ ಎಂಬುದಕ್ಕೆ ಕಾರಣ ತಿಳಿಸಿಲ್ಲ.

ಆದರೆ ಇದಕ್ಕೆ ಭಾರತ ಪ್ರತಿಕ್ರಿಯಿಸಿದ್ದು, ಟೀಮ್​ ಸ್ನೇಹಿ ಪಿಚ್​ಗಳನ್ನು ಆಯ್ಕೆ ಮಾಡಿ ತಂಡಗಳಿಗೆ ಆಡಲು ಅವಕಾಶ ಮಾಡಿಕೊಡಲಾಗುವುದಿಲ್ಲ. ಬೇರೆ ಪ್ರಬಲ ಕಾರಣಗಳನ್ನು ನೀಡಿದರೆ ಮಾತ್ರ ಬದಲಾವಣೆ ಸಾಧ್ಯ. ಐಸಿಸಿ ನಿಯಮದಂತೆ ಸುರಕ್ಷತೆಯ ಕೊರತೆಯಂತಹ ಸಮಸ್ಯೆಗಳಿದ್ದಲ್ಲಿ ಮಾತ್ರ ಬದಲಾವಣೆ ಸಾಧ್ಯ ಎಂದು ಹೇಳಿದೆ.

ಆತಿಥೇಯರಾಗಿ, ಭಾರತ ಈಗಾಗಲೇ ಪಂದ್ಯಾವಳಿಗೆ ಅರ್ಹತೆ ಪಡೆದಿದ್ದರೆ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ಬಾಂಗ್ಲಾದೇಶ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಕೂಡ 2020-2023 ಐಸಿಸಿ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ ಮೂಲಕ ನೇರವಾಗಿ ಅರ್ಹತೆ ಪಡೆದಿವೆ. ಜಿಂಬಾಬ್ವೆಯಲ್ಲಿ ಪ್ರಸ್ತುತ ವಿಶ್ವಕಪ್ ಅರ್ಹತಾ ಪಂದ್ಯಗಳು ನಡೆಯುತ್ತಿದ್ದು, 10 ತಂಡಗಳು ಆಡುತ್ತಿವೆ. ಇದರಲ್ಲಿ ಫೈನಲ್​ನಲ್ಲಿ ಗೆದ್ದ ಮತ್ತು ಸೋತ ತಂಡಗಳು ವಿಶ್ವಕಪ್‌ ಪಂದ್ಯಗಳಲ್ಲಿ ಭಾಗವಹಿಸಲಿವೆ.

ವರದಿಗಳ ಪ್ರಕಾರ, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ಪಂದ್ಯ ಮತ್ತು ಫೈನಲ್ ಪಂದ್ಯ ನಡೆಯಲಿದೆ. ಸೆಮಿಫೈನಲ್‌ಗಳಲ್ಲಿ ಕನಿಷ್ಠ ಒಂದಕ್ಕಾದರೂ ಮುಂಬೈನ ವಾಂಖೆಡೆ ಸ್ಟೇಡಿಯಂ ಆತಿಥ್ಯ ವಹಿಸಬಹುದು ಎನ್ನಲಾಗಿದೆ.

ಇದನ್ನೂ ಓದಿ: West Indies tour: ಐವರು ವೇಗಿಗಳಿಗೆ ಸ್ಥಾನ: ಸೈನಿ, ಮುಕೇಶ್​, ಜಯದೇವ್​​ರಲ್ಲಿ ಪ್ಲೇಯಿಂಗ್​ 11 ಸೇರೋರ್ಯಾರು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.