ETV Bharat / sports

ವಿಶ್ವಕಪ್​ ಕ್ರಿಕೆಟ್​: ವಿಶ್ವಕಪ್​ನಿಂದ ಪಾಕಿಸ್ತಾನ​ ಔಟ್​.. ಚಾಂಪಿಯನ್ಸ್​ ಟ್ರೋಫಿಗೆ ಇಂಗ್ಲೆಂಡ್​ ಇನ್​

author img

By ETV Bharat Karnataka Team

Published : Nov 11, 2023, 9:51 PM IST

Updated : Nov 11, 2023, 11:01 PM IST

ಕೋಲ್ಕತ್ತಾದ ಈಡನ್​ ಗಾರ್ಡನ್ಸ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಪಾಕಿಸ್ತಾನ ಸೋಲು ಕಂಡಿದ್ದಲ್ಲದೇ 2023ರ ವಿಶ್ವಕಪ್​ನಿಂದ ಲೀಗ್​ ಹಂತದಲ್ಲೇ ಹೊರ ಬಿದ್ದಿದೆ.

ICC Cricket World Cup 2023
ICC Cricket World Cup 2023

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಇಂಗ್ಲೆಂಡ್​ ನೀಡಿದ್ದ 338 ರನ್​ಗಳ ಬೃಹತ್​ ಗುರಿ ನೀಡಿದಾಗಲೇ ಪಾಕಿಸ್ತಾನ ತಂಡ ವಿಶ್ವಕಪ್​ನ ಸೆಮೀಸ್​ ರೇಸ್​ನಿಂದ ಹೊರ ಬಿದ್ದಿತ್ತು. ಮೊದಲ ಎರಡು ವಿಕೆಟ್​ ಪತನದ ನಂತರ ಐಸಿಸಿ ಅಧಿಕೃತವಾಗಿ ಬಾಬರ್​ ಪಡೆ ವಿಶ್ವಕಪ್​ ಸೆಮೀಸ್​ ರೇಸ್​ನಿಂದ ಹೊರಬಿದ್ದಿದೆ ಎಂದು ಪ್ರಕಟಿಸಿತು. ಪಾಕಿಸ್ತಾನ ವಿರುದ್ಧ ಗೆದ್ದ ಇಂಗ್ಲೆಂಡ್ ಅಂಕ ಪಟ್ಟಿಯಲ್ಲಿ 7ನೇ ಸ್ಥಾನವನ್ನು ಭದ್ರ ಪಡಿಸಿಕೊಂಡು, 2025ರ ಚಾಂಪಿಯನ್ಸ್​ ಟ್ರೋಫಿಗೆ ತನ್ನ ಸ್ಥಾನವನ್ನು ಖಾತರಿ ಪಡಿಸಿಕೊಂಡಿತು.

ವಿಶ್ವಕಪ್​ ಸೆಮೀಸ್​ ಪ್ರವೇಶಕ್ಕೆ ಅಚ್ಚರಿಯ ಗೆಲುವನ್ನು ಎದುರು ನೋಡುತ್ತಿದ್ದ ಪಾಕಿಸ್ತಾನ ಟಾಸ್​ ಸೋತಿತ್ತು. ಇಂಗ್ಲೆಂಡ್​ ಮೊದಲು ಬ್ಯಾಟಿಂಗ್​ ಮಾಡಿ ಜಾನಿ ಬೈರ್‌ಸ್ಟೋವ್ (59), ಜೋ ರೂಟ್ (60) ಮತ್ತು ಬೆನ್ ಸ್ಟೋಕ್ಸ್ (84) ಆಟದ ನೆರವಿನಿಂದ 50 ಓವರ್​ಗಳ ಅಂತ್ಯಕ್ಕೆ 9 ವಿಕೆಟ್​ ಕಳೆದುಕೊಂಡು 337 ರನ್​ ಗಳಿಸಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ 43.3 ಓವರ್​​ಗೆ 244 ರನ್​ ಗಳಿಸಿ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡಿತು. ಇದರಿಂದ ಇಂಗ್ಲೆಂಡ್​ 93 ರನ್​ಗಳ ಗೆಲುವು ದಾಖಲಿಸಿತು.

ಬಾಬರ್​ ನಿರೀಕ್ಷೆ ಹುಸಿಗೊಳಿಸಿದ ಫಖರ್: ರನ್​ರೇಟ್​ ಒತ್ತಡದಲ್ಲಿ ಬೃಹತ್​ ಮೊತ್ತವನ್ನು ಬೇಗ ಭೇದಿಸುವ ಬರದಲ್ಲಿದ್ದ ಪಾಕಿಸ್ತಾನ ಆರಂಭಿಕ ವಿಕೆಟ್​ಗಳನ್ನು ಕಳೆದುಕೊಂಡಿತು. ನಾಯಕ ಫಾಖರ್​ ಜಮಾನ್ ಮೇಲೆ ನಂಬಿಕೆ ಇಟ್ಟಿದ್ದರು. ಆದರೆ, ಫಾಖರ್​ ಜಮಾನ್ 9 ಬಾಲ್ ಆಡಿ 1 ರನ್​ಗೆ ವಿಕೆಟ್​ ಕೊಟ್ಟು ಪೆವಿಲಿಯನ್​ ಹಾದಿ ಹಿಡಿದರು. ಇದಕ್ಕೂ ಮುನ್ನ ಅಬ್ದುಲ್ಲಾ ಶಫೀಕ್​ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. ಈ ಹಂತದಲ್ಲಿ ಪಾಕಿಸ್ತಾನ ವಿಶ್ವಕಪ್​ನಿಂದ ಅಧಿಕೃತವಾಗಿ ಹೊರಬಿತ್ತು.

ವಿಶ್ವಕಪ್​ನಲ್ಲಿ ಪಾಕ್​ ನಾಯಕ ಫ್ಲಾಫ್​: ಪಾಕಿಸ್ತಾನ ನಾಯಕ ಬಾಬರ್ ಅಜಮ್​ ತವರು ಮೈದಾನದಲ್ಲಿ ಸಣ್ಣ ಪುಟ್ಟ ತಂಡಗಳ ವಿರುದ್ಧ ಶತಕ ಗಳಿಸಿದ್ದರು. ಆದರೆ ಏಷ್ಯಾಕಪ್​ ಮತ್ತು ವಿಶ್ವಕಪ್​ನಲ್ಲಿ ದೊಡ್ಡ ತಂಡಗಳ ಮುಂದೆ ರನ್​ ಮಾಡುವಲ್ಲಿ ಎಡವಿದರು. ಇಂದು ಜವಾಬ್ದಾರಿಯುತವಾಗಿ ಆಡಬೇಕಿದ್ದ ಬಾಬರ್​ 38ಕ್ಕೆ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ದಾರಿ ಹಿಡಿದರು. ನಂತರ ಅವರ ಬೆನ್ನಲ್ಲೇ ಮೊಹಮ್ಮದ್ ರಿಜ್ವಾನ್ (36) ಮತ್ತು ಸೌದ್ ಶಕೀಲ್ (29) ಸಹ ಔಟ್​ ಆದರು.

  • " class="align-text-top noRightClick twitterSection" data="">

ಅಘಾ ಸಲ್ಮಾನ್ ಗೆಲುವಿನ ಪ್ರಯತ್ನ: ಮಧ್ಯಮ ಕ್ರಮಾಂಕದಲ್ಲಿ ಅಘಾ ಸಲ್ಮಾನ್ (51) ತಂಡ ಸೆಮೀಸ್​ಗೆ ಪ್ರವೇಶಿಸದಿದ್ದರೂ ಗೆಲ್ಲಲಿ ಎಂದು ಹೋರಾಡಿದರು. ಆದರೆ ಅವರ ಹೋರಾಟ​ ಅರ್ಧಶತಕಕ್ಕೆ ನಿಂತಿತು. ಕೊನೆಯಲ್ಲಿ ಗೆಲುವಿಗಾಗಿ ಇಫ್ತಿಕರ್ ಅಹ್ಮದ್ (3), ಶಾದಾಬ್ ಖಾನ್ (4), ಶಾಹೀನ್ ಅಫ್ರಿದಿ (25) ಮತ್ತು ಹ್ಯಾರಿಸ್ ರೌಫ್ (35) ಗೆಲುವಿನ ಹುಡುಕಾಟ ಮಾಡಿದರಾದರೂ ಆಂಗ್ಲ ಬೌಲರ್​ಗಳ ಮುಂದೆ ನಡೆಯಲಿಲ್ಲ.

ಆಂಗ್ಲರ ಪರ 3 ವಿಕೆಟ್​ ಪಡೆದ ಡೇವಿಡ್ ವಿಲ್ಲಿ ಪಂದ್ಯ ಶ್ರೇಷ್ಠ ಪ್ರಸ್ತಿಗೆ ಭಾಜನರಾದರು. ಉಳಿದಂತೆ ಇಂಗ್ಲೆಂಡ್​ ಪರ ಆದಿಲ್ ರಶೀದ್, ಗುಸ್ ಅಟ್ಕಿನ್ಸನ್, ಮೊಯಿನ್ ಅಲಿ ತಲಾ ಎರಡು ವಿಕೆಟ್​ ಪಡೆದು ಮಿಂಚಿದರು.

ಇದನ್ನೂ ಓದಿ: ತಂಡದಲ್ಲಿ ಯಾರಿಗೂ ವಿಶ್ರಾಂತಿ ಇಲ್ಲ, ಅದೇ ತಂಡ ಮುಂದುವರೆಯಲಿದೆ: ಕೋಚ್​ ದ್ರಾವಿಡ್​

Last Updated : Nov 11, 2023, 11:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.