ETV Bharat / sports

ಅಡಿಲೇಡ್​ ಟೆಸ್ಟ್​​ ತಪ್ಪಿಸಿಕೊಂಡಿದ್ದಕ್ಕಾಗಿ ನಿಜಕ್ಕೂ ಕೋಪ ಬಂದಿತ್ತು: ಪ್ಯಾಟ್​​ ಕಮ್ಮಿನ್ಸ್​

author img

By

Published : Dec 25, 2021, 3:56 PM IST

Australian captain Pat Cummins: ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಕೋವಿಡ್​ ಸೋಂಕಿತ ವ್ಯಕ್ತಿಯ ಸಂಪರ್ಕದಿಂದಾಗಿ ಆ್ಯಷಸ್​ ಟೆಸ್ಟ್​ ಸರಣಿಯ 2ನೇ ಪಂದ್ಯದಿಂದ ಹೊರಗುಳಿದಿದ್ದರು. ಇದೇ ವಿಚಾರವಾಗಿ ಅವರು ಇದೀಗ ಮಾತನಾಡಿದ್ದಾರೆ.

Cummins on Adelaide Test
Cummins on Adelaide Test

ಮೆಲ್ಬೋರ್ನ್​​: ಕೋವಿಡ್​ ಪಾಸಿಟಿವ್​ ಬಂದಿದ್ದ ವ್ಯಕ್ತಿ ಜೊತೆ ಸಂಪರ್ಕ ಹೊಂದಿದ್ದಕ್ಕಾಗಿ ಆಸ್ಟ್ರೇಲಿಯಾ ಟೆಸ್ಟ್​ ತಂಡದ ಕ್ಯಾಪ್ಟನ್​​ ಪ್ಯಾಟ್​ ಕಮ್ಮಿನ್ಸ್​​ ಇಂಗ್ಲೆಂಡ್​ ವಿರುದ್ಧದ ಎರಡನೇ ಟೆಸ್ಟ್​​ ಪಂದ್ಯದಿಂದ ಹೊರಗುಳಿಯಬೇಕಾಗಿತ್ತು. ಇದೇ ವಿಚಾರವಾಗಿ ಮಾತನಾಡಿರುವ ಅವರು, ಅಡಿಲೇಡ್​ ಟೆಸ್ಟ್​ ತಪ್ಪಿಸಿಕೊಂಡಿದ್ದಕ್ಕೆ ನಿಜಕ್ಕೂ ನನಗೆ ಕೋಪ ಬಂದಿತ್ತು ಎಂದಿದ್ದಾರೆ.

ಆ್ಯಷಸ್​ ಸರಣಿಯಲ್ಲಿ ಆಸ್ಟ್ರೇಲಿಯಾ - ಇಂಗ್ಲೆಂಡ್​ ತಂಡ ಈಗಾಗಲೇ ಎರಡು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಎರಡು ಪಂದ್ಯಗಳಲ್ಲಿ ಜಯ ಸಾಧಿಸಿರುವ ಕಾಂಗರೂ ಪಡೆ 2-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ.

ಆಸ್ಟ್ರೇಲಿಯಾ ಟೆಸ್ಟ್​ ತಂಡದ ಕ್ಯಾಪ್ಟನ್​ ಆಗಿದ್ದ ಟಿಮ್​ ಪೇನ್​ ದಿಢೀರ್​ ಆಗಿ ನಾಯಕತ್ವ ತ್ಯಜಿಸಿದ ಬಳಿಕ 28 ವರ್ಷದ ವೇಗದ ಬೌಲರ್​ ಪ್ಯಾಟ್​ ಕಮಿನ್ಸ್​​ ಅವರನ್ನ ನಾಯಕನನ್ನಾಗಿ ನೇಮಕ ಮಾಡಲಾಗಿತ್ತು. ಟೆಸ್ಟ್​ ತಂಡದ ಪೂರ್ಣ ಪ್ರಮಾಣದ ನಾಯಕನಾಗಿ ಮೊದಲ ಪಂದ್ಯವನ್ನೇ ಗೆದ್ದುಕೊಂಡಿದ್ದ ವೇಗಿ ಪ್ಯಾಟ್​ ಕಮಿನ್ಸ್​​​ ಎರಡನೇ ಪಂದ್ಯದಿಂದ ಹೊರಗುಳಿಯಬೇಕಾಯಿತು. ಟೆಸ್ಟ್​ ತಂಡದ ನಾಯಕ ಪ್ಯಾಟ್ ಕಮಿನ್ಸ್​ ಊಟಕ್ಕೆಂದು ಹೊರಗಡೆ ಹೋಗಿದ್ದರು.

ಈ ವೇಳೆ, ಅವರು ಕೋವಿಡ್​ ಸೋಂಕಿತನ ಸಂಪರ್ಕಕ್ಕೆ ಬಂದಿದ್ದು, 7 ದಿನ ಕ್ವಾರಂಟೈನ್​ಗೊಳಗಾಗಿದ್ದರು. ಹೀಗಾಗಿ ಇಂಗ್ಲೆಂಡ್​ ವಿರುದ್ಧದ 2 ನೇ ಪಂದ್ಯಕ್ಕೆ ಸ್ಟೀವನ್​ ಸ್ಮಿತ್​​ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿದ್ದರು.

ಇದನ್ನೂ ಓದಿರಿ: VIDEO.. ಕ್ಷಣಾರ್ಧದಲ್ಲಿ ಹಾರಿಹೋಯ್ತು ಪ್ರಾಣಪಕ್ಷಿ.. ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯಾವಳಿ!

ಈ ವಿಚಾರವಾಗಿ ಮಾತನಾಡಿರುವ ಕಮ್ಮಿನ್ಸ್​, ನನಗೆ ನಿಜಕ್ಕೂ ಕೋಪ ಬಂದಿತ್ತು. ನನ್ನ ಸಂಪರ್ಕಕ್ಕೆ ಬಂದ ವ್ಯಕ್ತಿ ಯಾರು ಎಂಬುದು ನನಗೆ ಗೊತ್ತಿಲ್ಲ. ಎಲ್ಲರನ್ನೂ ದೂರಲು ಸಾಧ್ಯವಿಲ್ಲ. ಆದರೆ, ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ ಎಂದರು. ಸುಮಾರು ಐದು ವರ್ಷಗಳ ನಂತರ ತವರಿನಲ್ಲಿ ನಡೆದ ಟೆಸ್ಟ್​​ ಪಂದ್ಯದಿಂದ ನಾನು ವಂಚಿತನಾಗಿರುವೆ. ಇದು ಸ್ವಲ್ಪ ಮಟ್ಟದ ಬೇಸರ ಮೂಡಿಸಿದೆ ಎಂದು ಕಮ್ಮಿನ್ಸ್​​ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.