ETV Bharat / sports

ಗುಜರಾತ್​ ವಿರುದ್ಧ ರಾರಾಜಿಸಿದ ರಬಾಡ... ಪಂಜಾಬ್​ಗೆ ಗೆಲ್ಲಲು 144 ರನ್​ಗಳ ಸಾಧಾರಣ ಗುರಿ ನೀಡಿದ ಟೈಟನ್ಸ್

author img

By

Published : May 3, 2022, 7:24 PM IST

Updated : May 3, 2022, 9:31 PM IST

ಸಾಯಿ ಸುದರ್ಶನ್​ ಅವರ ಏಕಾಂಗಿ ಹೋರಾಟದ ಅರ್ಧಶತಕದ ಹರತಾಗಿಯೂ ಗುಜರಾತ್​ ಟೈಟನ್ಸ್ ಎದುರಾಳಿ ಪಂಜಾಬ್​ ಕಿಂಗ್ಸ್​ಗೆ 144 ರನ್​ಗಳ ಸಾಧಾರಣ ಗುರಿ ನೀಡಿದೆ.

Gujarat Titans vs Punjab Kings
Gujarat Titans vs Punjab Kings

ಮುಂಬೈ:ಕಗಿಸೋ ರಬಾಡ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಗುಜರಾತ್ ಟೈಟನ್ಸ್ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 143 ರನ್​ಗಳಿಸಲಷ್ಟೇ ಶಕ್ತವಾಗಿದೆ.

ಟಾಸ್​ ಗೆದ್ದ ಗುಜರಾತ್ ಟೈಟನ್ಸ್ ಪ್ರಯೋಗ ಮಾಡುವ ಸಲುವಾಗಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಹಾರ್ದಿಕ್ ನಿರ್ಣಯ ಫಲಿಸಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದಿದ್ದ ಶುಬ್ಮನ್​ ಗಿಲ್​ ರನೌಟ್ ಆದರೆ, ನಂತರ ಸಹಾ ಬಿರುಸಿನ ಆಟಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದರು.

ನಂತರ ಬಂದ ಬ್ಯಾಟರ್​ಗಳಿ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ನಾಯಕ ಪಾಂಡ್ಯ ಕೇವಲ 1ರನ್​ಗಳಿಸಿ ರಿಷಿ ಧವನ್ ಬೌಲಿಂಗ್​ನಲ್ಲಿ ಔಟಾದರೆ, ಡೇವಿಡ್​ ಮಿಲ್ಲರ್​(11) ರನ್​ಗಳಿಸಿದ ಲಿವಿಂಗ್​ಸ್ಟೋನ್​ ಬೌಲಿಂಗ್​ನಲ್ಲಿ ಕೀಪರ್​ಗೆ ಕ್ಯಾಚ್​ ನೀಡಿ ಪೆವಿಲಿಯನ್​ ಸೇರಿಕೊಂಡರು.

ಅದ್ಭುತ ಫಾರ್ಮ್​ನಲ್ಲಿ ರಾಹುಲ್ ತೆವಾಟಿಯಾ(11) ಮತ್ತು ರಶೀದ್ ಖಾನ್​(0) ರನ್ನು ರಬಾಡ 17ನೇ ಓವರ್​ನಲ್ಲಿ ಪೆವಿಲಿಯನ್​ಗಟ್ಟಿದರು. ನಂತರ ಬಂದ ಪ್ರದೀಪ್ ಸಂಗ್ವಾನ್(2), ಫರ್ಗುಸನ್(5) ಕೂಡ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ.

ನಿರಂತರ ವಿಕೆಟ್​ ಕಳೆದುಕೊಳ್ಳುತ್ತಿದ್ದ ಟೈಟನ್ಸ್ ಒಂದು ಹಂತದಲ್ಲಿ 120-130 ರನ್ ಗಳಿಸುವುದು​ ಅಸಾಧ್ಯ ಎನ್ನುವ ಸ್ಥಿತಿಯಲ್ಲಿತ್ತು. ಆದರೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದ ಸಾಯಿ ಸುದರ್ಶನ್ ಕೊನೆಯವರೆಗೂ ಕ್ರೀಸ್​ನಲ್ಲಿ ನೆಲೆಯೂರಿ ​ 50 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ ಅಜೇಯ 64 ರನ್​ಗಳಿಸಿ ತಂಡದ ಮೊತ್ತವನ್ನು 143ಕ್ಕೆ ಕೊಂಡೊಯ್ದರು.

ಕಗಿಸೋ ರಬಾಡ 33 ರನ್​ ನೀಡಿ 4 ವಿಕೆಟ್ ಪಡೆದು ಮಿಂಚಿದರೆ, ಅರ್ಶದೀಪ್ ಸಿಂಗ್ , ರಿಷಿ ಧವನ್ ಮತ್ತು ಲಿಯಾಮ್ ಲಿವಿಂಗ್​ಸ್ಟನ್​ ತಲಾ ಒಂದು ವಿಕೆಟ್ ಪಡೆದರು.

ತಂಡಗಳ ಅಪ್​ಡೇಟ್​: ಎರಡೂ ತಂಡಗಳು ಯಾವುದೇ ಬದಲಾವಣೆಯಿಲ್ಲದೆ ಕಣಕ್ಕಿಳಿದಿವೆ. ಹಾರ್ದಿಕ್ ಪಡೆ ಟೂರ್ನಿಯಲ್ಲಿ ಆಡಿರುವ 9 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಸಾಧಿಸಿದೆ. ಇಂದಿನ ಪಂದ್ಯದಲ್ಲಿ ಗೆದ್ದರೆ ಪ್ಲೇ ಆಫ್​ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಳ್ಳಲಿದೆ. ಇತ್ತ 9 ಪಂದ್ಯಗಳಲ್ಲಿ 4 ಗೆಲುವು ಮತ್ತು 5 ಸೋಲು ಕಂಡಿರುವ ಪಂಜಾಬ್​ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.

ಇದೇ ಲೀಗ್​ನ ಮೊದಲ ಮುಖಾಮುಖಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ 190 ರನ್​ಗಳ ಗುರಿ ನೀಡಿತ್ತು. ರಾಹುಲ್​ ತೆವಾಟಿಯಾ ಕೊನೆಯ 2 ಎಸೆತಗಳಲ್ಲೂ ಸಿಕ್ಸರ್​ ಸಿಡಿಸಿ ಟೈಟನ್ಸ್​ಗೆ ಗೆಲುವು ತಂದುಕೊಟ್ಟಿದ್ದರು.

ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI): ಮಯಾಂಕ್ ಅಗರ್ವಾಲ್ (ನಾಯಕ), ಶಿಖರ್ ಧವನ್, ಜಾನಿ ಬೈರ್‌ಸ್ಟೋ, ಭಾನುಕಾ ರಾಜಪಕ್ಸೆ, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೀ), ರಿಷಿ ಧವನ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್, ಸಂದೀಪ್ ಶರ್ಮಾ

ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ವೃದ್ಧಿಮಾನ್ ಸಹಾ(ವಿಕೀ), ಶುಬ್ಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಪ್ರದೀಪ್ ಸಾಂಗ್ವಾನ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ

Last Updated : May 3, 2022, 9:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.