ETV Bharat / sports

ಸಿಡ್ನಿ ಮೈದಾನದ ಗೇಟ್​ಗೆ ಸಚಿನ್​ ​ಹೆಸರು: ಕ್ರಿಕೆಟ್​ ಆಸ್ಟ್ರೇಲಿಯಾದಿಂದ ವಿಶೇಷ ಗೌರವ

author img

By

Published : Apr 24, 2023, 6:31 PM IST

50 ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಕ್ರಿಕೆಟ್​ ದೇವರು ಸಚಿನ್​ಗೆ ಕ್ರಿಕೆಟ್​ ಆಸ್ಟ್ರೇಲಿಯಾ ವಿಶೇಷವಾಗಿ ಬರ್ತ್​ಡೇ ವಿಶ್​ ಮಾಡಿದೆ. ಸಿಡ್ನಿ ಮೈದಾನಕ್ಕೆ ಸಚಿನ್​ ಮತ್ತು ಲಾರಾ ಹೆಸರಿಟ್ಟು ಗೌರವಿಸಿದೆ.

ಸಿಡ್ನಿ ಮೈದಾನದ ಗೇಟ್​ಗೆ ಸಚಿನ್​ ​ಹೆಸರು
ಸಿಡ್ನಿ ಮೈದಾನದ ಗೇಟ್​ಗೆ ಸಚಿನ್​ ​ಹೆಸರು

ಸಿಡ್ನಿ(ಆಸ್ಟ್ರೇಲಿಯಾ): ಕ್ರಿಕೆಟ್​ ದೇವರೆಂದೇ ಖ್ಯಾತಿಯಾದ ಸಚಿನ್​ ತೆಂಡುಲ್ಕರ್​ ಅವರಿಗೆ ಇಂದು 50 ನೇ ಜನ್ಮದಿನದ ಸಂಭ್ರಮ. ಮಾಸ್ಟರ್​ ಬ್ಲಾಸ್ಟರ್​ಗೆ ಇಡೀ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಜನ್ಮದಿನಕ್ಕೆ ಅಭಿಮಾನಿಗಳು ವಿಶೇಷವಾಗಿ ಶುಭಾಶಯ ಕೋರುತ್ತಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್​ ಕೂಡ ಸಚಿನ್​ರ ಬರ್ತ್​ಡೇಗೆ ವಿಶೇಷ ಗೌರವ ಸಲ್ಲಿಸಿದೆ.

ಸಿಡ್ನಿ ಕ್ರಿಕೆಟ್ ಮೈದಾನದ ಗೇಟ್​ ಒಂದಕ್ಕೆ ಭಾರತೀಯ ಮಾಜಿ ಕ್ರಿಕೆಟಿಗನ ಹೆಸರಿಟ್ಟಿದೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಅವರ 50ನೇ ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸಿದೆ. ಇದರ ಜೊತೆಗೆ ವೆಸ್ಟ್​ಇಂಡೀಸ್​ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಅವರ ಹೆಸರನ್ನೂ ಗೇಟ್​ಗೆ ನಾಮಕರಣ ಮಾಡಿ ಅನಾವರಣಗೊಳಿಸಿದೆ. ಇನ್ನು ಮುಂದೆ ಸಿಡ್ನಿ ಕ್ರೀಡಾಂಗಣದ ಗೇಟ್​ಗೆ ಲಾರಾ-ತೆಂಡೂಲ್ಕರ್ ಗೇಟ್ಸ್ ಎಂದು ಕರೆಯಲಾಗುತ್ತದೆ. ಹೊಸದಾಗಿ ಹೆಸರಿಸಲಾದ ಗೇಟ್​ ಮೂಲಕವೇ ಕ್ರೀಡಾಂಗಣ ಪ್ರವೇಶಿಸಬೇಕು ಎಂದು ಆಸ್ಟ್ರೇಲಿಯಾ ಕ್ರಿಕೆಟ್​ ಸಂಸ್ಥೆ ಹೇಳಿದೆ. ಇದಲ್ಲದೇ, ಲಾರಾ ಮತ್ತು ಸಚಿನ್​ರ ದಾಖಲೆಗಳುಳ್ಳ ಫಲಕವನ್ನು ಹಾಕಲಾಗಿದೆ.

ಅಲ್ಲದೇ, ಇನ್ನೊಂದು ಗೇಟ್​ಗೆ ಆಸ್ಟ್ರೇಲಿಯಾದ ದಂತಕಥೆ ಡಾನ್​ ಬ್ರಾಡ್ಮನ್​ ಅವರ ಹೆಸರಿಡಲಾಗಿದೆ. ಆಸೀಸ್​ನ ಸಿಡ್ನಿ ಮೈದಾನದಲ್ಲಿ ತೆಂಡೂಲ್ಕರ್ ಮೊದಲ ಟೆಸ್ಟ್ ಶತಕವನ್ನು ಬಾರಿಸಿದ್ದರು. ಮಾಜಿ ಕ್ರಿಕೆಟಿಗ ಈ ಮೈದಾನದಲ್ಲಿ ಆಡಿದ 5 ಟೆಸ್ಟ್ ಪಂದ್ಯಗಳಿಂದ 157 ಸರಾಸರಿಯಲ್ಲಿ ಬ್ಯಾಟ್​ ಬೀಸಿದ್ದಾರೆ. ಒಟ್ಟಾರೆ ಈ ಮೈದಾನದಲ್ಲಿ 13 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 100 ರ ಸರಾಸರಿಯಲ್ಲಿ 1,100 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕಗಳು ಮತ್ತು 4 ಅರ್ಧಶತಕಗಳು ಗಳಿಸಿದ್ದಾರೆ. ಔಟಾಗದೇ 241 ಅತ್ಯುತ್ತಮ ಸ್ಕೋರ್ ಆಗಿದೆ. ವೆಸ್ಟ್ ಇಂಡೀಸ್‌ನ ವಿವ್ ರಿಚರ್ಡ್ಸ್ (1,134 ರನ್) ಮತ್ತು ಡೆಸ್ಮಂಡ್ ಹೇನ್ಸ್ (1,181 ರನ್) ಅವರ ಬಳಿಕ ಸಚಿನ್​ ಈ ಮೈದಾನದಲ್ಲಿ ಅತಿ ಹೆಚ್ಚು ರನ್​ ಗಳಿಸಿದ ವಿದೇಶಿ ಆಟಗಾರರಾಗಿದ್ದಾರೆ.

ತೆಂಡೂಲ್ಕರ್ ಆಸ್ಟ್ರೇಲಿಯಾದ ಮೈದಾನದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಅವರಾಡಿದ 67 ಪಂದ್ಯಗಳಲ್ಲಿ 42.85 ರ ಸರಾಸರಿಯಲ್ಲಿ 3,300 ರನ್ ಗಳಿಸಿದ್ದಾರೆ. 7 ಶತಕ ಮತ್ತು 17 ಅರ್ಧ ಶತಕಗಳು ಇದರಲ್ಲಿವೆ. ವೆಸ್ಟ್​ ಇಂಡೀಸ್​ನ ಡೆಸ್ಮಂಡ್ ಹೇನ್ಸ್ (4,238 ರನ್) ಮತ್ತು ವಿವ್ ರಿಚರ್ಡ್ಸ್ (4,529 ರನ್), ವೆಸ್ಟ್​ ಇಂಡೀಸ್​ನ ಬ್ರಿಯಾನ್ ಲಾರಾ (3,370 ರನ್), ವಿರಾಟ್ ಕೊಹ್ಲಿ (3,426 ರನ್) ರನ್​ ಮಾಡಿದ್ದಾರೆ.

ನನ್ನ ಮತ್ತು ಬ್ರಿಯಾನ್​ ಲಾರಾ ಅವರ ಹೆಸರನ್ನು ಪ್ರವೇಶ ದ್ವಾರಕ್ಕೆ ಇಟ್ಟಿರುವುದು ದೊಡ್ಡ ಗೌರವವಾಗಿದೆ. ಇದರಿಂದ ಎಸ್​ಸಿಜಿ ಮತ್ತು ಕ್ರಿಕೆಟ್​ ಆಸ್ಟ್ರೇಲಿಯಾಕ್ಕೆ ಧನ್ಯವಾದ ಸಲ್ಲಿಸುವೆ. ಶೀಘ್ರವೇ ಮೈದಾನಕ್ಕೆ ಭೇಟಿ ನೀಡಲು ಎದುರು ನೋಡುತ್ತೇನೆ ಎಂದು ಸಚಿನ್​ ಹೇಳಿದ್ದಾರೆ.

1993 ರಲ್ಲಿ ಸಿಡ್ನಿ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧವೇ 277 ರನ್ ಗಳಿಸಿದ ಬ್ರಿಯಾನ್​ ಲಾರಾ ಇನಿಂಗ್ಸ್​ಗೆ 30 ವರ್ಷಗಳು ಸಂದಿದ ಹಿನ್ನೆಲೆಯಲ್ಲಿ ವಿಶೇಷ ಗೌರವ ಸಲ್ಲಿಸಲಾಯಿತು. "ಸಿಡ್ನಿ ಕ್ರಿಕೆಟ್ ಗ್ರೌಂಡ್‌ ನನಗೆ ವಿಶೇಷ ಗೌರವ ನೀಡಿದೆ. ಮೈದಾನವು ನನಗೆ ಮತ್ತು ನನ್ನ ಕುಟುಂಬಕ್ಕೆ ಹಲವು ವಿಶೇಷ ನೆನಪುಗಳನ್ನು ಕೊಟ್ಟಿದೆ. ಆಸ್ಟ್ರೇಲಿಯಾಕ್ಕೆ ಬಂದಾಗ ಭೇಟಿ ನೀಡುವುದನ್ನು ತಪ್ಪಿಸಲ್ಲ ಎಂದು ಎಂದು ಲಾರಾ ಹೇಳಿದ್ದಾರೆ.

ಓದಿ: ಡ್ಯಾನ್ಸ್ ಪೆ ಚಾನ್ಸ್: ವಿರಾಟ್​ ಫಿಟ್​​ನೆಸ್​ಗೆ ಅನುಷ್ಕಾ ನೃತ್ಯ ಸ್ಪರ್ಧೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.