ETV Bharat / sports

ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಮರ್ಲಾನ್ ಸ್ಯಾಮುಯೆಲ್ಸ್‌ಗೆ 6 ವರ್ಷ ನಿಷೇಧ ಶಿಕ್ಷೆ

author img

By ETV Bharat Karnataka Team

Published : Nov 24, 2023, 10:50 AM IST

ವೆಸ್ಟ್ ಇಂಡೀಸ್ ಕ್ರಿಕೆಟಿಗ ಮರ್ಲಾನ್ ಸ್ಯಾಮುಯೆಲ್ಸ್‌ ಅವರಿಗೆ ಐಸಿಸಿ 6 ವರ್ಷಗಳ ನಿಷೇಧ ಹೇರಿದೆ.

Former West Indies star  Marlon Samuels banned  all cricket for six years  ವೆಸ್ಟ್ ಇಂಡೀಸ್ ಕ್ರಿಕೆಟಿಗ ಮರ್ಲಾನ್ ಸ್ಯಾಮುಯೆಲ್ಸ್‌  ನಿವೃತ್ತಿ ಆದ್ರೂ ವೆಸ್ಟ್ ಇಂಡೀಸ್ ಕ್ರಿಕೆಟಿಗ  ಕ್ರಿಕೆಟಿಗನಿಗೆ 6 ವರ್ಷ ಶಿಕ್ಷೆ ನೀಡಿದ ಐಸಿಸಿ  ವೆಸ್ಟ್ ಇಂಡೀಸ್ ಕ್ರಿಕೆಟಿಗ ಮರ್ಲಾನ್ ಸ್ಯಾಮುಯೆಲ್ಸ್‌  ಸ್ಯಾಮ್ಯುಯೆಲ್ಸ್ ನಿವೃತ್ತಿ ಘೋಷಿಸಿ  ಎಮಿರೇಟ್ಸ್ ಕ್ರಿಕೆಟ್ ಮಂಡಳಿ  ಭ್ರಷ್ಟಾಚಾರ ನಿಗ್ರಹ ಸಂಹಿತೆ  ವೆಸ್ಟ್ ಇಂಡೀಸ್‌ನ ಮಾಜಿ ಆಟಗಾರ ಮರ್ಲಾನ್ ಸ್ಯಾಮುಯೆಲ್ಸ್
ನಿವೃತ್ತಿ ಆದ್ರೂ ವೆಸ್ಟ್ ಇಂಡೀಸ್ ಕ್ರಿಕೆಟಿಗನಿಗೆ 6 ವರ್ಷ ನಿಷೇಧ ನೀಡಿದ ಐಸಿಸಿ!

ದುಬೈ: ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಭ್ರಷ್ಟಾಚಾರ ನಿಗ್ರಹ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ವೆಸ್ಟ್ ಇಂಡೀಸ್‌ನ ಮಾಜಿ ಆಟಗಾರ ಮರ್ಲಾನ್ ಸ್ಯಾಮುಯೆಲ್ಸ್ ಅವರನ್ನು ಆರು ವರ್ಷಗಳ ಕಾಲ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿಷೇಧಿಸಲಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಗುರುವಾರ ಶಿಕ್ಷೆ ಪ್ರಕಟಿಸಿತು. ಅಬುಧಾಬಿ ಟಿ10 ಲೀಗ್‌ನಿಂದ ಪಡೆದ ಪ್ರಯೋಜನಗಳನ್ನು ಬಹಿರಂಗಪಡಿಸುವುದು ಮತ್ತು ಮಾಹಿತಿ ಸೋರಿಕೆ ಮಾಡಿರುವುದು ಹಾಗು ತನಿಖಾಧಿಕಾರಿಗೆ ಸಹಕರಿಸದೇ ಇದ್ದುದಕ್ಕಾಗಿ ಸ್ಯಾಮ್ಯುಯೆಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಸೆಪ್ಟೆಂಬರ್ 2021ರಲ್ಲಿ ಐಸಿಸಿ ಇಸಿಬಿ ಕೋಡ್ ಅಡಿಯಲ್ಲಿ ಗೊತ್ತುಪಡಿಸಿದ ಭ್ರಷ್ಟಾಚಾರ ವಿರೋಧಿ ಅಧಿಕಾರಿ ಸ್ಯಾಮುಯೆಲ್ಸ್ ವಿರುದ್ಧ ಆರೋಪ ಮಾಡಿದ್ದರು. ಸ್ಯಾಮುಯೆಲ್ಸ್, ಈ ವರ್ಷದ ಆಗಸ್ಟ್‌ನಲ್ಲಿ ನಾಲ್ಕು ಅಪರಾಧಗಳಲ್ಲಿ ತಪ್ಪಿತಸ್ಥರೆಂದು ಐಸಿಸಿ ಪ್ರಕಟಣೆ ತಿಳಿಸಿದೆ. ಸುಮಾರು ಎರಡು ದಶಕಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿರುವ ಸ್ಯಾಮುಯೆಲ್ಸ್ ಆ ಸಮಯದಲ್ಲಿ ಹಲವಾರು ಭ್ರಷ್ಟಾಚಾರ-ವಿರೋಧಿ ಸೆಷನ್‌ಗಳಲ್ಲಿ ಭಾಗವಹಿಸಿದ್ದರು. ಭ್ರಷ್ಟಾಚಾರ ನಿಗ್ರಹ ಸಂಹಿತೆಯ ಅಡಿಯಲ್ಲಿ ತನ್ನ ಜವಾಬ್ದಾರಿಗಳೇನು ಎಂಬುದು ಅವರಿಗೆ ತಿಳಿದಿತ್ತು ಎಂದು ಐಸಿಸಿ ಹೆಚ್‌ ಆರ್ ಮತ್ತು ಇಂಟೆಗ್ರಿಟಿ ಯೂನಿಟ್‌ನ ಮುಖ್ಯಸ್ಥರಾಗಿರುವ ಅಲೆಕ್ಸ್ ಮಾರ್ಷಲ್ ತಿಳಿಸಿದರು.

ಸ್ಯಾಮುಯೆಲ್ಸ್ ತನಿಖೆಯ ಸಮಯದಲ್ಲಿ ಭ್ರಷ್ಟಾಚಾರ-ವಿರೋಧಿ ಅಧಿಕಾರಿಯು ಉಡುಗೊರೆಗಳು, ಪಾವತಿಗಳು ಅಥವಾ ಇತರ ಪ್ರಯೋಜನಗಳ ಸ್ವೀಕೃತಿಯನ್ನು ಬಹಿರಂಗಪಡಿಸಲು ವಿಫಲರಾಗಿದ್ದಾರೆ ಎಂದು ಕಂಡುಬಂದಿದೆ. $750ಕ್ಕಿಂತ ಹೆಚ್ಚು ಮೌಲ್ಯದ ಉಡುಗೊರೆಗಳಿಗೆ ಅಧಿಕೃತ ರಸೀದಿಗಳನ್ನು ಬಹಿರಂಗಪಡಿಸಲು ಸ್ಯಾಮುಯೆಲ್ಸ್ ವಿಫಲರಾಗಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳದ ತನಿಖೆಗೆ ಸಹಕರಿಸುವಲ್ಲಿಯೂ ವಿಫಲರಾಗಿದ್ದಾರೆ ಎಂದು ಅಲೆಕ್ಸ್ ಮಾರ್ಷಲ್ ಹೇಳಿದ್ದಾರೆ.

2019ರ ಅಬುಧಾಬಿ ಟಿ10 ಲೀಗ್‌ನಲ್ಲಿ ಸ್ಯಾಮ್ಯುಯೆಲ್ಸ್ ವಿರುದ್ಧ ಈ ಆರೋಪಗಳನ್ನು ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿದ ನ್ಯಾಯಪೀಠ ಈ ವರ್ಷದ ಆಗಸ್ಟ್‌ನಲ್ಲಿ ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು. ಆರು ವರ್ಷಗಳ ನಿಷೇಧ ಇದೇ ತಿಂಗಳ 11ರಿಂದ ಜಾರಿಗೆ ಬಂದಿದೆ. ಸ್ಯಾಮ್ಯುಯೆಲ್ಸ್ ಈಗ ನಿವೃತ್ತರಾಗಿದ್ದರೂ, ಅಪರಾಧ ಎಸಗಿದಾಗ ತಂಡದ ಭಾಗವಾಗಿದ್ದರು ಎಂದು ಐಸಿಸಿ ತಿಳಿಸಿದೆ.

ಸ್ಯಾಮ್ಯುಯೆಲ್ಸ್ 18 ವರ್ಷಗಳ ಅವಧಿಯಲ್ಲಿ ವೆಸ್ಟ್ ಇಂಡೀಸ್‌ಗಾಗಿ 71 ಟೆಸ್ಟ್, 207 ಏಕದಿನ ಮತ್ತು 67 ಟಿ20 ಸೇರಿದಂತೆ 300ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 17 ಶತಕ ಮತ್ತು ಏಕದಿನದಲ್ಲಿ ನಾಯಕತ್ವ ನಿಭಾಯಿಸಿದ್ದಾರೆ. ಪುರುಷರ ಟಿ20 ವಿಶ್ವಕಪ್‌ನ 2012 ಮತ್ತು 2016 ರ ಎರಡೂ ಆವೃತ್ತಿಗಳ ಫೈನಲ್‌ಗಳಲ್ಲಿ ವೆಸ್ಟ್ ಇಂಡೀಸ್ ತಮ್ಮ ಇತ್ತೀಚಿನ ಎರಡು ಐಸಿಸಿ ಟ್ರೋಫಿ ಗೆದ್ದಿದ್ದರು.

ಇದನ್ನೂ ಓದಿ: ಸಿಕ್ಸರ್ ಸಿಡಿಸಿ​ ಪಂದ್ಯ ಗೆಲ್ಲಿಸಿದ ರಿಂಕು; ಸ್ಕೋರ್‌ ಬೋರ್ಡ್‌ನಲ್ಲಿ ದಾಖಲಾಗದ 6 ರನ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.