ETV Bharat / sports

ಒಲಿಂಪಿಕ್ಸ್​ನಲ್ಲಿ 'ಗೋಲ್ಡ್​' ಸಿಗದಿದ್ದರೂ, ಕೊಹ್ಲಿ 'ಗೋಲ್ಡನ್​ ಡಕ್​' ಪಡೆದಿದ್ದಾರೆ: ನೆಟ್ಟಿಗರಿಂದ ಟ್ರೋಲ್​

author img

By

Published : Aug 6, 2021, 4:30 AM IST

Updated : Aug 6, 2021, 4:58 AM IST

ವಿರಾಟ್​ ಕೊಹ್ಲಿ 'ಗೋಲ್ಡನ್​ ಡಕ್​'ಗೆ ಇಂಗ್ಲೆಂಡ್​ ಮಾಜಿ ಆಟಗಾರರಾದ ಮೈಕಲ್​ ವಾನ್​ ಹಾಗೂ ಇಯಾನ್​ ಬೆಲ್​​ ಪ್ರತಿಕ್ರಿಯಿಸಿದ್ದು, 'ಓಹ್​ ಜಿಮ್ಮಿ ಜಿಮ್ಮಿ' ಎಂದು ಟ್ವೀಟ್​ ಮಾಡಿದ್ದಾರೆ.

fans-and-former-cricketers-react-to-virat-kohli-first-ball-duck
ನೆಟ್ಟಿಗರಿಂದ ಕೊಹ್ಲಿ ಟ್ರೋಲ್​'

ನಾಟಿಂಗ್​ಹ್ಯಾಮ್: ಟ್ರೆಂಟ್​ಬ್ರಿಡ್ಜ್​​ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಡಕ್​ ಔಟ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. 'ಗೋಲ್ಡನ್​ ಡಕ್​'ಗೆ ನೆಟ್ಟಿಗರು ತಹರೇವಾರಿ ಪೋಸ್ಟ್​ ಮೂಲಕ ವಿರಾಟ್​ ಕಾಲೆಳೆದಿದ್ದಾರೆ.

ಭಾರತ ತಂಡವು ಪೂಜಾರ ವಿಕೆಟ್​ ಕಳೆದುಕೊಳ್ಳುತ್ತಿದ್ದಂತೆ, ಕ್ರೀಸ್​ ಬಂದ ಕೊಹ್ಲಿ ಆ್ಯಂಡರ್ಸನ್​ ಎಸೆದ ಹೊರ ಹೋಗುತ್ತಿದ್ದ ಬೌಲ್​ ಆಡುವ ಪ್ರಯತ್ನದಲ್ಲಿ ವಿಕೆಟ್​ ಕೀಪರ್​​ಗೆ ಕ್ಯಾಚ್​ ನೀಡಿ 'ಗೋಲ್ಡನ್​ ಡಕ್​'ಗೆ ಪೆವಿಲಿಯನ್​ಗೆ ಮರಳಿದ್ದರು. ವಿರಾಟ್​ ಮೇಲೆ ಭಾರಿ ನಿರೀಕ್ಷೆ ಹೊಂದಿದ್ದ ಅಭಿಮಾನಿಗಳಿಗೆ ಇದು ಬೇಸರ ತರಿಸಿದೆ.

  • Oh Jimmy Jimmy 😜😜

    — Michael Vaughan (@MichaelVaughan) August 5, 2021 " class="align-text-top noRightClick twitterSection" data=" ">

ಬಳಿಕ ಕೊಹ್ಲಿಯ ಗೋಲ್ಡನ್ ಡಕ್​ ಔಟ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ಗೆ ಗುರಿಯಾಗಿದೆ. 'ಕೊನೆಗೂ ಭಾರತಕ್ಕೆ ಗೋಲ್ಡ್​ ಸಿಕ್ಕಿದೆ. ಟೋಕಿಯೊ ಒಲಿಂಪಿಕ್ಸ್​ನಲ್ಲಿ ಗೋಲ್ಡ್ ಪದಕ ಸಿಗದಿದ್ದರೂ, ಕೊಹ್ಲಿ ಅದನ್ನು ಪಡೆದಿದ್ದಾರೆ' ಎಂದು ಟೀಕಿಸಿದ್ದಾರೆ. ಅಲ್ಲದೆ, ಗೋಲ್ಡನ್ ಅಂದರೇನು ಅಂತ ಗೊತ್ತಿರಲಿಲ್ಲ, ತಿಳಿಸಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್' ಎಂದು ಕೂಡ ಟ್ವೀಟ್​ ಮಾಡಿದ್ದಾರೆ.

ಇಂಗ್ಲೆಂಡ್​ ಮಾಜಿ ಆಟಗಾರರಾದ ಮೈಕಲ್​ ವಾನ್​ ಹಾಗೂ ಇಯಾನ್​ ಬೆಲ್​ ಕೂಡ, ಪ್ರತಿಕ್ರಿಯಿಸಿದ್ದು, 'ಓಹ್​ ಜಿಮ್ಮಿ ಜಿಮ್ಮಿ' ಎಂದು ಟ್ವೀಟ್​ ಮಾಡಿದ್ದಾರೆ.

  • Oh Jimmy Jimmy 😜😜

    — Michael Vaughan (@MichaelVaughan) August 5, 2021 " class="align-text-top noRightClick twitterSection" data=" ">

'ಇಂಗ್ಲೆಂಡ್​ನ ವಿಂಟೇಜ್​ ಕೊಹ್ಲಿ ಮತ್ತೆ ಬಂದಿದ್ದಾರೆ' ಎಂದು ಈ ಹಿಂದಿನ 2014ರ ಇಂಗ್ಲೆಂಡ್​ ಪ್ರವಾಸದಲ್ಲಿನ ಕೊಹ್ಲಿ ವೈಫಲ್ಯತೆಯನ್ನು ಅಭಿಮಾನಿಗಳು ಮರಳಿ ನೆನಪಿಸಿದ್ದಾರೆ.

  • Vintage Kohli of England is back...#IndvsEng

    — Vinay Kumar Dokania (@VinayDokania) August 5, 2021 " class="align-text-top noRightClick twitterSection" data=" ">

2014ರ ಇಂಗ್ಲೆಂಡ್​ ಸರಣಿಯಲ್ಲಿ ಭಾರಿ ವೈಫಲ್ಯ ಕಂಡಿದ್ದ ವಿರಾಟ್ ಆ್ಯಂಡರ್ಸನ್​ ಎದುರು ತಿಣಕಾಡಿದ್ದರು. ಬಳಿಕ 2018ರ ಟೂರ್​ನಲ್ಲಿ 2 ಶತಕ ಸೇರಿದಂತೆ 593 ರನ್​ ಗಳಿಸಿದ್ದ ವಿರಾಟ್ ಆ್ಯಂಡರ್ಸನ್​ ಸೇರಿದಂತೆ ಇಂಗ್ಲೆಂಡ್​ ಬೌಲರ್​ಗಳ ಬೆವರಿಳಿಸಿದ್ದರು.

ಇದನ್ನೂ ಓದಿ: ಧೋನಿ ಹಿಂದಿಕ್ಕಿ ಟೆಸ್ಟ್​ ಕ್ರಿಕೆಟ್​ನಲ್ಲಿ ಕೆಟ್ಟ ದಾಖಲೆಗೆ ಪಾತ್ರರಾದ ವಿರಾಟ್​ ಕೊಹ್ಲಿ

Last Updated : Aug 6, 2021, 4:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.