ETV Bharat / sports

Exclusive: ಆ್ಯಶಸ್​ನಲ್ಲಿ ಕಮಿನ್ಸ್​ಗಿಂತ ಜೇಮ್ಸ್ ಆ್ಯಂಡರ್ಸನ್ ಅತ್ಯುತ್ತಮ ಪ್ರದರ್ಶನ ತೋರಲಿದ್ದಾರೆ: ಶಿವರಾಮಕೃಷ್ಣನ್

author img

By

Published : Dec 2, 2021, 6:18 PM IST

ಕಮ್ಮಿನ್ಸ್​ 34 ಟೆಸ್ಟ್​ ಪಂದ್ಯಗಳಲ್ಲಿ 164 ವಿಕೆಟ್​ ಪಡೆದಿದ್ದರೆ, ಆ್ಯಂಡರ್ಸನ್​ 166 ಟೆಸ್ಟ್​ ಪಂದ್ಯಗಳಿಂದ 632 ವಿಕೆಟ್ ಪಡೆದು ವೇಗಿಗಳಲ್ಲಿ ಅಗ್ರ ಬೌಲರ್​ಗಳಾಗಿದ್ದಾರೆ. ಮುಂದಿನ ವಾರದಲ್ಲಿ ಆ್ಯಶಸ್​ ಟೆಸ್ಟ್​ ಸರಣಿಯ ಮೂಲಕ ಈ ಇಬ್ಬರು ಬೌಲರ್​ಗಳು ಎದುರಾಗುತ್ತಿರುವುದು ಕ್ರಿಕೆಟ್​ ಪ್ರಿಯರಿಗೆ ರಸದೌತಣ ಸಿಗಲಿದೆ.

James Anderson vs James Anderson
ಜೇಮ್​ ಆ್ಯಂಡರ್ಸನ್ vs ಪ್ಯಾಟ್ ಕಮಿನ್ಸ್

ಹೈದರಾಬಾದ್​: ಜೇಮ್ಸ್​ ಆಂಡರ್ಸನ್​ ಟೆಸ್ಟ್​ ಕ್ರಿಕೆಟ್​ನಲ್ಲಿ ಗರಿಷ್ಠ ವಿಕೆಟ್​ ಪಡೆದು 38ರ ಹರೆಯದಲ್ಲೂ ಯುವಕರನ್ನು ನಾಚಿಸುವಂತೆ ಬೌಲಿಂಗ್ ಮಾಡುವ ವೇಗದ ಬೌಲರ್​. ಇಂದಿಗೂ ಓಡುವಾಗ ಅವರ ಅವರ ಚಲನೆಯ ತೀವ್ರತೆ, ಬೌಲಿಂಗ್ ಮಾಡುವಾದ ಅವರ ಕೈಕಾಲುಗಳ ಹರಿವು ಅಮೋಘವಾಗಿದೆ. ಇವರು ಹೊಂದಿರುವ ಕಲೆಯನ್ನು ವಿಶ್ವದ ಯಾವುದೇ ಬೌಲರ್​ ಹೊಂದಿಲ್ಲ ಎನ್ನವುದು ಅತಿಶಯೋಕ್ತಿಯಲ್ಲ.

ಅದೇ ರೀತಿ ಆಸ್ಟ್ರೇಲಿಯಾದ ಪ್ಯಾಟ್​ ಕಮಿನ್ಸ್ ಪ್ರಸ್ತುತ ಟೆಸ್ಟ್​ ಕ್ರಿಕೆಟ್​ನಲ್ಲಿ ಟಾಪ್ ಬೌಲರ್​ ಆಗಿ ಮೆರೆಯುತ್ತಿದ್ದಾರೆ. ಅವರ ವೇಗ, ಬೌನ್ಸ್​ ಮತ್ತು ಸ್ವಿಂಗ್ ಎದುರಾಳಿ ಬ್ಯಾಟಿಂಗ್ ಪಡೆಯನ್ನು ಧ್ವಂಸ ಮಾಡಬಲ್ಲದು.

ಕಮ್ಮಿನ್ಸ್​ 34 ಟೆಸ್ಟ್​ ಪಂದ್ಯಗಳಲ್ಲಿ 164 ವಿಕೆಟ್​ ಪಡೆದಿದ್ದರೆ, ಆ್ಯಂಡರ್ಸನ್​ 166 ಟೆಸ್ಟ್​ ಪಂದ್ಯಗಳಿಂದ 632 ವಿಕೆಟ್ ಪಡೆದು ವೇಗಿಗಳಲ್ಲಿ ಅಗ್ರ ಬೌಲರ್​ಗಳಾಗಿದ್ದಾರೆ. ಮುಂದಿನ ವಾರದಲ್ಲಿ ಆ್ಯಶಸ್​ ಟೆಸ್ಟ್​ ಸರಣಿಯ ಮೂಲಕ ಈ ಇಬ್ಬರು ಬೌಲರ್​ಗಳು ಎದುರಾಗುತ್ತಿರುವುದು ಕ್ರಿಕೆಟ್​ ಪ್ರಿಯರಿಗೆ ರಸದೌತಣ ಸಿಗಲಿದೆ.

ಡಿಸೆಂಬರ್​ 8ರಿಂದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಮೊದಲ ಆ್ಯಶಸ್​ನ ಟೆಸ್ಟ್​ ನಡೆಯಲಿದ್ದು, ಈ ಇಬ್ಬರು ಲೆಜೆಂಡ್ ಬೌಲರ್​ಗಳು ತಮ್ಮ ತಂಡವನ್ನು ಗೆಲ್ಲಿಸಲು ತಮ್ಮ ಕೈಲಾದ ಎಲ್ಲವನ್ನು ನೀಡಲು ಬಯಸಿದ್ದಾರೆ.

ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿರುವ ಭಾರತದ ಮಾಜಿ ಸ್ಪಿನ್​ ಬೌಲರ್ ಮತ್ತು ಕಾಮೆಂಟೇಟರ್​ ಲಕ್ಷ್ಮಣ ಶಿವರಾಮಕೃಷ್ಣನ್​ ಆ್ಯಶಸ್​ ಟೆಸ್ಟ್​ ಸರಣಿಯಲ್ಲಿ ಅತಿಥೇಯ ತಂಡದ ಪ್ಯಾಟ್​ ಕಮಿನ್ಸ್​ಗಿಂತಲೂ ಜೇಮ್ಸ್ ಆ್ಯಂಡರ್ಸನ್​ ಪರಿಣಾಮಕಾರಿ ಬೌಲರ್ ಆಗಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ಒಂದೆರಡು ದಿನಗಳಲ್ಲಿ ಕೊಹ್ಲಿಯ ODI ನಾಯಕತ್ವದ ಭವಿಷ್ಯ ನಿರ್ಧಾರ

" ಇಬ್ಬರ ನಡುವೆ ಅತ್ಯುತ್ತಮ ಸ್ಪರ್ಧೆ ನಡೆಯಲಿದೆ. ನನ್ನ ಪ್ರಕಾರ ಜಿಮ್ಮಿ ಆ್ಯಂಡರ್ಸನ್​ ಅತ್ಯುತ್ತಮ ಉಪಯುಕ್ತ ಬೌಲರ್​ ಏಕೆಂದರೆ, ಇತ್ತೀಚಿನ ಪ್ರದರ್ಶನ ನೋಡಿದರೆ ಆಸ್ಟ್ರೇಲಿಯಾ ಉತ್ತಮ ಟಾಪ್​ ಆರ್ಡರ್​ ಹೊಂದಿಲ್ಲ. ಒಂದು ವೇಳೆ ಆ್ಯಂಡರ್ಸನ್​ ಆರಂಭದಲ್ಲೇ ವಿಕೆಟ್ ಪಡೆದರೆ, ಅವರು ಕಮಿನ್ಸ್​ಗಿಂತಲೂ ಉತ್ತಮ ಪ್ರದರ್ಶನ ತೋರಲಿದ್ದಾರೆ. ಇನ್ನೂ ಕಮಿನ್ಸ್ ಬೌಲರ್​ ಜೊತೆಗೆ​ ನಾಯಕನಾಗಿರುವುದರಿಂದ ಅವರ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಾಗಲಿದೆ. ಇದು ಅವರ ಪ್ರದರ್ಶನದ ಮೇಲೂ ಒತ್ತಡ ತರಲಿದೆ. ಆದ್ದರಿಂದ ನಾನು ಜೇಮ್ಸ್ ಆ್ಯಂಡರ್ಸನ್​ ಸರಣಿಯಲ್ಲಿ ಕಮಿನ್ಸ್​ಗಿಂತಲೂ ಹೆಚ್ಚು ವಿಕೆಟ್ ಪಡೆಯಬಲ್ಲ ಬೌಲರ್ ಎಂದು ಅವರು ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಬ್ಯಾಟರ್​ಗಳ ವಿರುದ್ಧ ಮೇಲುಗೈ ಸಾಧಿಸಲು ಜೇಮ್ಸ್​ ಆ್ಯಂಡರ್ಸನ್​ ಅವರಿಗೆ ಅನುಭವ ಕೂಡ ನೆರವಾಗಲಿದೆ ಎಂದು ಶಿವರಾಮಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಭಾರತದ ರಿಷಭ್ ಪಂತ್ ಮತ್ತು ಶುಬ್ಮನ್ ಗಿಲ್ ಗಬ್ಬಾದಲ್ಲಿ ಆಸ್ಟ್ರೇಲಿಯನ್ ಬೌಲರ್​ಗಳನ್ನು ಧೂಳಿಪಟ ಮಾಡಿದ್ದರು.

ಆ್ಯಂಡರ್ಸನ್​ ಹೆಚ್ಚು ಡ್ಯೂಕ್ ಚೆಂಡಿನಲ್ಲಿ ಬೌಲಿಂಗ್ ಮಾಡಿದ್ದಾರೆ. ಆದರೆ, ಆಸ್ಟ್ರೇಲಿಯಾದಲ್ಲಿ ಕುಕಂಬುರಾದಲ್ಲಿ ಬೌಲಿಂಗ್ ಮಾಡಬೇಕಾಗಿರುವುದರಿಂದ ಏನಾದರೂ ಬದಲಾವಣೆಯಾಗಬಲ್ಲದೇ ಎಂದು ಕೇಳಿದ್ದಕ್ಕೆ ಭಾರತದ ಪರ 16 ಏಕದಿನ ಮತ್ತು 9 ಟೆಸ್ಟ್​ ಪಂದ್ಯಗಳನ್ನಾಡಿರುವ ಬೌಲರ್, " ಆ್ಯಂಡರ್ಸನ್​ ಡ್ಯೂಕ್​ ಬಾಲ್​ನಲ್ಲಿ ಸಾಕಷ್ಟು ಬೌಲಿಂಗ್ ಮಾಡಿದ್ದಾರೆ. ಆಸ್ಟ್ರೇಲಿಯಾಕ್ಕೆ ಬಂದಾಗ ಅವರು ಕುಕಂಬುರಾ ಚೆಂಡಿನಲ್ಲೂ ಬೌಲಿಂಗ್ ಮಾಡಿದ್ದಾರೆ. ಅವರಿಗೆ 39 ವರ್ಷಗಳಾಗಿದ್ದು, ದೀರ್ಘಸಮಯದಿಂದ ಇಲ್ಲಿ ಆಡಿದ್ದಾರೆ. ನನೆಗೆ ನೆನಪಿರುವ ಹಾಗೆ ಅವರು ಕಳೆದ ಭಾರತದ ಪ್ರವಾಸದಲ್ಲಿ ಚೆನ್ನೈ ನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದರು. ಜಿಮ್ಮಿ ಯಾವುದೇ ಪರಿಸ್ಥಿತಿಗೆ ಹೊಂದಿಕೊಳ್ಳುವ ಬೌಲರ್​, ಹಾಗೆಯೇ ಪ್ಯಾಟ್ ಕಮಿನ್ಸ್​ ಒಬ್ಬ ಸ್ಟ್ರೈಕ್ ಬೌಲರ್​ ಎಂದು ಹೇಳಿದ್ದಾರೆ.

ಶಿವರಾಮಕೃಷ್ಣನ್​ ಮುಂಬರುವ ಆ್ಯಶಸ್​ ಟೆಸ್ಟ್​ ಸರಣಿಯ ವೇಳೆ ಸೋನಿ ಟೆನ್ 4​ರಲ್ಲಿ ತಮಿಳು ಕಾಮೆಂಟರಿ ಮಾಡಲಿದ್ದಾರೆ. ಡಿಸೆಂಬರ್​ 8ರಿಂದ ಜನವರಿ 18ರವರೆಗೆ ಪ್ರತಿಷ್ಠಿತ ಸರಣಿ ನಡೆಯಲಿದೆ.

ಇದನ್ನೂ ಓದಿ:ರಿಟೈನ್​ನಲ್ಲಿ ಕೋಟ್ಯಧಿಪತಿಗಳಾದ ಟಾಪ್ 5 ಕ್ರಿಕೆಟಿಗರು ಇವರೇ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.