ETV Bharat / sports

ಬಿಸಿಸಿಐ ಮುಂದೆ ಐಸಿಸಿ ಏನೂ ಮಾಡಲಾಗದು: ಶಾಹಿದ್ ಅಫ್ರಿದಿ

author img

By

Published : Feb 16, 2023, 5:02 PM IST

ಬಿಸಿಸಿಐ ಎದುರು ಐಸಿಸಿ ಕೂಡ ಏನೂ ಮಾಡಲಾಗದು ಎಂದು ಪಾಕಿಸ್ತಾನ ಕ್ರಿಕೆಟರ್ ಶಾಹಿದ್ ಅಫ್ರಿದಿ ಹೇಳಿದ್ದಾರೆ. ಏಷ್ಯಾ ಕಪ್ ಯಾವ ದೇಶದಲ್ಲಿ ನಡೆಯಬೇಕೆಂಬ ವಿಚಾರದ ಬಗ್ಗೆ ಅವರು ಮಾತನಾಡಿದ್ದಾರೆ.

Even ICC won't be able to do anything in front of BCCI: Afridi on Asia Cup
ICC won't be able to do anything

ನವದೆಹಲಿ: 2023ರ ಏಷ್ಯಾ ಕಪ್ ಟೂರ್ನಮೆಂಟ್ ಯಾವ ದೇಶದಲ್ಲಿ ಆಯೋಜನೆ ಮಾಡಬೇಕೆಂಬ ವಿಚಾರದ ಕುರಿತು ಮಾತನಾಡಿರುವ ಮಾಜಿ ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿ, ಬಿಸಿಸಿಐ ಮುಂದೆ ಐಸಿಸಿ ಕೂಡ ಏನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ಮಧ್ಯದ ರಾಜಕೀಯ ಉದ್ವಿಗ್ನತೆಯಿಂದಾಗಿ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಬಿಸಿಸಿಐ ನಿರಾಕರಿಸಿರುವುದರಿಂದ ಈ ವರ್ಷದ ಕೊನೆಯಲ್ಲಿ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಪಂದ್ಯಾವಳಿಯ ಬಗ್ಗೆ ಅನುಮಾನ ಮೂಡಿದೆ. ಭಾರತ ಆತಿಥ್ಯ ವಹಿಸುತ್ತಿರುವ ಏಕದಿನ ವಿಶ್ವಕಪ್‌ ಪಂದ್ಯಾವಳಿಗೂ ಸ್ವಲ್ಪ ಮೊದಲು ನಿಗದಿಯಾಗಿರುವ ಏಷ್ಯಾಕಪ್ ಟೂರ್ನಿ ಮಹತ್ವದ್ದಾಗಿದೆ. ಆದರೆ 'ಸೇಡಿನ ಕ್ರಮ'ವಾಗಿ ವಿಶ್ವಕಪ್ ಪಂದ್ಯಾವಳಿಗೆ ಬಹಿಷ್ಕಾರ ಹಾಕುವುದಾಗಿ ಪಾಕಿಸ್ತಾನ ಬೆದರಿಕೆ ಹಾಕಿದೆ.

ಭಾರತವು ಏಷ್ಯಾ ಕಪ್‌ನಲ್ಲಿ ಆಡಲು ಪಾಕಿಸ್ತಾನಕ್ಕೆ ಭೇಟಿ ನೀಡಲಿದೆಯಾ ಎಂಬ ಬಗ್ಗೆ ನನಗೆ ಏನೂ ತಿಳಿದಿಲ್ಲ. ನಾವು ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಅನ್ನು ಬಹಿಷ್ಕರಿಸುತ್ತೇವೆಯೇ? ಏನೇ ಆದರೂ ನಾವು ಈ ಬಗ್ಗೆ ಒಂದು ಹಂತದಲ್ಲಿ ಒಂದು ನಿಲುವು ತೆಗೆದುಕೊಳ್ಳಬೇಕಾಗಿದೆ ಎಂದು ಅಫ್ರಿದಿ ದೃಶ್ಯ ಮಾಧ್ಯಮಕ್ಕೆ ತಿಳಿಸಿದರು. ಇಂಥ ಸಂದರ್ಭದಲ್ಲಿ ಐಸಿಸಿ ಪಾತ್ರ ನಿರ್ಣಾಯಕವಾಗುತ್ತದೆ. ಅವರು ಕ್ರಮಕ್ಕೆ ಮುಂದಾಗಬೇಕು. ಆದರೆ ಐಸಿಸಿ ಕೂಡ ಬಿಸಿಸಿಐ ಮುಂದೆ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.

ತನ್ನ ಕಾಲದ ಶ್ರೇಷ್ಠ ಕ್ರಿಕೆಟರ್ ಆಗಿದ್ದ ಅಫ್ರಿದಿ, ಬಿಸಿಸಿಐ ತನ್ನನ್ನು ತಾನು ಸಾಕಷ್ಟು ಬಲಿಷ್ಠ ಮಾಡಿಕೊಂಡಿರುವುದರಿಂದ ಅದು ತನ್ನ ಬಲವನ್ನು ತೋರಿಸುತ್ತಿದೆ ಎಂದರು. ತಮ್ಮ ಸ್ವಂತ ಬಲವನ್ನು ನೆಚ್ಚಿಕೊಳ್ಳದೆ ಇರುವ ಯಾರೂ ಇಂಥ ನಿರ್ಧಾರಗಳನ್ನು ಮಾಡಲು ಸಾಧ್ಯವಿಲ್ಲ ಮತ್ತು ಅಂಥ ದಿಟ್ಟ ನಿರ್ಧಾರ ತಾಳುವುದು ಸುಲಭವಲ್ಲ. ಅವರು ಸಾಕಷ್ಟು ವಿಷಯಗಳನ್ನು ಮೊದಲೇ ತಿಳಿದುಕೊಂಡಿರುತ್ತಾರೆ. ಭಾರತ ಅಗರ್ ಆಂಖೆ ದಿಖಾ ರಹಾ ಹೈಂ ತೊ (ಭಾರತ ನಮ್ಮನ್ನು ಬೆದರಿಸುತ್ತಿದೆ) ಅಥವಾ ಅಂಥ ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂದಾದರೆ ಅವರು ಅಷ್ಟರ ಮಟ್ಟಿಗೆ ಬಲಶಾಲಿಯಾಗಿದ್ದಾರೆ ಎಂದು ಅಫ್ರಿದಿ ಹೇಳಿದರು.

ಅವರು ಈ ರೀತಿ ಮಾತನಾಡಲು ಸಮರ್ಥರಾಗಿದ್ದಾರೆ. ಹಾಗಾಗಿಯೇ ಅವರು ಮಾತನಾಡುತ್ತಿದ್ದಾರೆ. ಮೊದಲಿಗೆ ತಾನು ಬಲಿಷ್ಠನಾಗುವುದು ಹಾಗೂ ತನಗೆ ಬೇಕಾದ ಹಾಗೆ ನಿರ್ಧಾರ ಮಾಡುವುದು ಮಾತ್ರ ಕೊನೆಯಲ್ಲಿ ಪರಿಗಣಿಸಲ್ಪಡುತ್ತದೆ ಎಂದರು. ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಹೇಳಿಕೆಯ ನಂತರ ಅಫ್ರಿದಿ ಈ ಮಾತುಗಳನ್ನು ಹೇಳಿದ್ದಾರೆ.

ಏಷ್ಯಾ ಕಪ್ ಪಾಕಿಸ್ತಾನದಲ್ಲಿ ನಡೆಯಬೇಕಿತ್ತು. ಆದರೆ ಅದು ಪಾಕಿಸ್ತಾನದಲ್ಲಿ ನಡೆದರೆ ನಾವು ಭಾಗವಹಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದೇವೆ. ನಾವು ಆ ಪಂದ್ಯಾವಳಿಯಲ್ಲಿ ಭಾಗವಹಿಸಬೇಕೆಂದು ನೀವು ಬಯಸಿದರೆ ಸ್ಥಳವನ್ನು ಬದಲಾಯಿಸಿ. ಹೀಗೆ ಮಾಡುವುದು ಹೊಸದೇನಲ್ಲ. ನಾವು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದಾಗ ಅವರು ಭಾರತಕ್ಕೆ ಬರುವುದಿಲ್ಲ ಎನ್ನುತ್ತಾರೆ. ಅದೇ ರೀತಿಯಲ್ಲಿ ವಿಶ್ವಕಪ್‌ ನಲ್ಲಿ ಆಡಲು ಬರುವುದಿಲ್ಲ ಎಂದು ಪಾಕಿಸ್ತಾನ ಹೇಳಿದೆ. ಆದರೆ ಪಾಕಿಸ್ತಾನಕ್ಕೆ ಹಾಗೆ ಮಾಡಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡ ವಿಡಿಯೊದಲ್ಲಿ ಹೇಳಿದ್ದಾರೆ.

ಏಷ್ಯಾ ಕಪ್ ಅನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವುದು ಕೊನೆಯ ಆಯ್ಕೆಯಾಗಬಹುದು. ಇದು 50 ಓವರ್ ಮಾದರಿಯ ವಿಶ್ವಕಪ್‌ಗೆ ಪ್ರಮುಖ ಮುನ್ನಡೆಯಾಗಿದೆ. ದುಬೈನಲ್ಲಿ ಅನೇಕ ಪಂದ್ಯಾವಳಿಗಳು ನಡೆದಿವೆ. ಶ್ರೀಲಂಕಾಗೆ ಅದನ್ನು ಸ್ಥಳಾಂತರಿಸಿದರೆ ಸಂತೋಷವಾಗುತ್ತದೆ ಎಂದು ಅಶ್ವಿನ್ ಹೇಳಿದ್ದಾರೆ. ಏಷ್ಯಾಕಪ್ ಯಾವ ಸ್ಥಳದಲ್ಲಿ ನಡೆಯಬೇಕೆಂಬ ವಿಚಾರದಲ್ಲಿ ಬಿಸಿಸಿಐ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಡುವೆ ಜಟಾಪಟಿ ನಡೆದಿದೆ.

ಇದನ್ನೂ ಓದಿ: ವಿಶ್ವಕಪ್​ನಲ್ಲಿ ವನಿತೆಯರಿಗೆ ಎರಡನೇ ಗೆಲುವು: ವೆಸ್ಟ್​ ಇಂಡೀಸ್​ ವಿರುದ್ಧ 6 ವಿಕೆಟ್​ಗಳ ಜಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.