ETV Bharat / sports

ಕ್ಲೀನ್​ ಸ್ಪೀಪ್​ನಿಂದ ಬಚಾವ್​ : ಇಂಗ್ಲೆಂಡ್​ಗೆ 17ರನ್​ ಗೆಲುವು

author img

By

Published : Jul 10, 2022, 11:07 PM IST

ಇಂಗ್ಲೆಂಡ್​ ನೀಡಿದ್ದ ಬೃಹತ್​ ಮೊತ್ತ ಬೆನ್ನತ್ತಿದ್ದ ಭಾರತ 20 ಓವರ್​ಗಳಲ್ಲಿ 7 ವಿಕೆಟ್​ಗೆ 198 ರನ್​ ಗಳಿಸಲಷ್ಟೇ ಶಕ್ತವಾಯಿತು. ಇದರಿಂದ ಸರಣಿ ಸೋಲಿನಿಂದ ಇಂಗ್ಲೆಂಡ್​ ಪಾರಾಯಿತು.

ಕ್ಲೀನ್​ ಸ್ಪೀಪ್​ನಿಂದ ಬಚಾವ್​ : ಇಂಗ್ಲೆಂಡ್​ 17ರನ್​ಗೆ ಗೆಲುವು
ಕ್ಲೀನ್​ ಸ್ಪೀಪ್​ನಿಂದ ಬಚಾವ್​ : ಇಂಗ್ಲೆಂಡ್​ 17ರನ್​ಗೆ ಗೆಲುವು

ನಾಟಿಂಗ್‌ಹ್ಯಾಮ್‌ : ಇಂಗ್ಲೆಂಡ್ 17ರನ್​ಗಳಿಂದ ಗೆಲುವು ಸಾಧಿಸುವ ಮೂಲಕ ಕ್ಲೀನ್​ ಸ್ಪೀಪ್​ನಿಂದ ತಪ್ಪಿಸಿಕೊಂಡಿದೆ. ಇಂಗ್ಲೆಂಡ್​ ನೀಡಿದ್ದ ಬೃಹತ್​ ಮೊತ್ತ ಬೆನ್ನತ್ತಿದ್ದ ಭಾರತ 20 ಓವರ್​ಗಳಲ್ಲಿ 7 ವಿಕೆಟ್​ಗೆ 198 ರನ್​ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ಸೂರ್ಯಕುಮಾರ್​ ಯಾದವ್ 117ರನ್​​ ಉತ್ತಮ ಬ್ಯಾಟಿಂಗ್​ ಮಾಡಿದರು.

ಸೂರ್ಯ ಕುಮಾರ್​ ಯಾದವ್​ ಆರಂಭಿಕ ವೈಫಲ್ಯವನ್ನು ಮೆಟ್ಟಿನಿಂತು ಉತ್ತಮ ಬ್ಯಾಟಿಂಗ್​ ಮಾಡಿದರು. ಆರಂಭಿಕ ಆಟಗಾರ ಪಂತ್​ (1), ರೋಹಿತ್​ ಶರ್ಮಾ(11), ಕೊಹ್ಲಿ(11) ವಿಕೆಟ್​ಗಳು ಬೇಗ ಪತನವಾದವು. ಸೂರ್ಯನಿಗೆ ಅಯ್ಯರ್​(28) ಕೊಂಚ ಹೊತ್ತಿನ ಜೊತೆಯಾಟ ನೀಡಿದರು. ನಂತರ ಬಂದವರಾರು ಜೊತೆಯಾಟ ನೀಡಲಿಲ್ಲ. ಕಾರ್ತಿಕ್​ (6), ಜಡೇಜ (7), ಹರ್ಷಲ್(5),​ ಆವೇಶ್​ ಖಾನ್(1),​ ಬಿಷ್ಟೋಯ್​(2) ವಿಕೆಟ್​ ಒಪ್ಪಿಸಿದರು.

ಯಾದವ್​ ಭರ್ಜರಿ ಶತಕ: ಸೂರ್ಯಕುಮಾರ್​ ಭರ್ಜರಿ ಆಟ ಪ್ರದರ್ಶಿಸಿದರು. 55ಎಸೆತಗಳಲ್ಲಿ 14ಬೌಡರಿ ಮತ್ತು 6ಸಿಕ್ಸರ್​ನಿಂದ 117ರನ್​ ಗಳಿಸಿದರು.

ಇಂಗ್ಲೆಂಡ್​ ಪರ:ಮೊಯಿನ್ ಅಲಿ(1), ಡೇವಿಡ್ ವಿಲ್ಲಿ(2), ಕ್ರಿಸ್ ಜೋರ್ಡನ್(2), ರಿಚರ್ಡ್ ಗ್ಲೀಸನ್(1) ರೀಸ್ ಟೋಪ್ಲಿ(3) ವಿಕೆಟ್​ ಪಡೆದರು.

ಮೊದಲ ಇನ್ನಿಂಗ್ಸ್​: ಟಾಸ್​ ಗೆದ್ದು ಬ್ಯಾಟಿಂಗ್​ ಮಾಡಿದ ಇಂಗ್ಲೆಂಡ್​ ಬೃಹತ್​ ಮೊತ್ತದ ಗುರಿಯನ್ನು ಭಾರತಕ್ಕೆ ನೀಡಿದೆ. ಮಲಾನ್​ ಮತ್ತು ಲಿವಿಂಗ್​ ಸ್ಟೋನ್​ ಅವರ ಬಿರುಸಿನ ಆಟದಿಂದ 20 ಓವರ್​ಗಳಲ್ಲಿ 215 ಗಳಿಕೆ ಮಾಡಿದ್ದು, ಭಾರತಕ್ಕೆ 216ರನ್​ಗಳ ಗುರಿ ನೀಡಿದೆ.

ಆರಂಭಿಕ ಬ್ಯಾಟರ್​ಗಳಿಂದ ಉತ್ತಮ ಆರಂಭ ಇಂಗ್ಲಂಡ್​ಗೆ ದೊರೆಯಿತು. ಬಟ್ಲರ್ ಮತ್ತು ರಾಯ್​ 31ರನ್​ಗಳ ಬಿರುಸಿನ ಜೊತೆಯಾಟ ನೀಡಿದರು. ಜಾಸ್​ ಬಟ್ಲರ್ ​ (18) ​ ಆವೇಶ್​ ಖಾನ್​ಗೆ ವಿಕೆಟ್​ ಒಪ್ಪಿಸಿದರು. ನಂತರ ಬಂದ ಮಲಾನ್​ ರಾಯ್​ರನ್ನು ಜೊತೆ ಉತ್ತಮ ಆಟ ಆಡಿದರು. ತಂಡದ ಮೊತ್ತ 61 ಆಗಿದ್ದಾಗ ಉಮ್ರಾನ್ ಮಲಿಕ್​ಗೆ ರಾಯ್​(27) ವಿಕೆಟ್​ ಒಪ್ಪಿಸಿದರು. ನಂತರ ಬಂದ ಫಿಲಿಪ್ ಸಾಲ್ಟ್ (8) ಹೆಚ್ಚು ಹೊತ್ತು ಕ್ರಿಸ್​ನಲ್ಲಿ ಇರಲಿಲ್ಲ.

ಮಲಾನ್​ ಮತ್ತು ಲಿವಿಂಗ್ ಸ್ಟೋನ್​ ನಂತರ ತಂಡದ ಸ್ಕೋರ್​ಗೆ ವೇಗ ನೀಡಿದರು. ಬಿರುಸಿನ ಆಟ ಪ್ರದರ್ಶಿಸಿದ ಮಲಾನ್​ 39 ಎಸೆತದಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್​ ನೊಂದಿಗೆ 77 ರನ್​ ಕಲೆಹಾಕಿ ರವಿ ಬಿಷ್ಣೋಯ್​ಗೆ ವಿಕೆಟ್​ ಒಪ್ಪಿಸಿದರು. ನಂತರ ಬಂದವರು ಲಿವಿಂಗ್​ ಸ್ಟೋನ್​ಗೆ ಜೊತೆಯಾಗಲಿಲ್ಲ. ಮೊಯಿನ್​ ಅಲಿ(0), ಹ್ಯಾರಿ ಬ್ರೂಕ್ (19), ಕ್ರಿಸ್ ಜೋರ್ಡನ್ (11) ಗಳಿಸಿದರು. ಲಿವಿಂಗ್​ ಸ್ಟೋನ್ 29 ಎಸೆತದಲ್ಲಿ 4ಸಿಕ್ಸರ್​ನಿಂದ 42ರನ್​ಗಳಿಸಿ ಅಜೇಯರಾಗಿ ಉಳಿದರು.

ಭಾರತದ ಪರವಾಗಿ ರವಿ ಬಿಷ್ಣೋಯ್​ ಮತ್ತು ಹರ್ಷಲ್​ ಪಟೇಲ್​ ತಲಾ ಎರಡು, ಉಮ್ರಾನ್​ ಮಲಿಕ್​ ಮತ್ತು ಆವೇಶ್​ ಖಾನ್​ ಒಂದೊಂದು ವಿಕೆಟ್​ ಪಡೆದರು.

ಇದನ್ನೂ ಓದಿ: ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಇಂಗ್ಲೆಂಡ್ : ಭಾರತ ತಂಡದಲ್ಲಿ ನಾಲ್ಕು ಬದಲಾವಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.