ETV Bharat / sports

ಹಾರ್ದಿಕ್​ ಮಿಂಚು, ಪಂತ್​ ಭರ್ಜರಿ ಶತಕ : ಸರಣಿ ಗೆದ್ದ ಭಾರತ

author img

By

Published : Jul 17, 2022, 11:11 PM IST

ಇಂಗ್ಲೆಂಡ್ ನೀಡಿದ್ದ 260ರನ್​ಗಳ ಗುರಿ ಬೆನ್ನತ್ತಿದ ಭಾರತ 261 ರನ್​ ಗಳಿಸಿ, 2-1ರಿಂದ ಸರಣಿ ಜಯ ಸಾಧಿಸಿದೆ.

ಹಾರ್ದಿಕ್​ ಮಿಂಚು
ಹಾರ್ದಿಕ್​ ಮಿಂಚು

ಮ್ಯಾಂಚೆಸ್ಟರ್​​(ಇಂಗ್ಲೆಂಡ್​): ಆತಿಥೇಯ ಇಂಗ್ಲೆಂಡ್​ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ 5 ವಿಕೆಟ್​ಗಳ ಅಂತರದ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾ ಸರಣಿ ವಶಪಡಿಸಿಕೊಂಡಿದೆ. ಇಂಗ್ಲೆಂಡ್ ನೀಡಿದ್ದ 260ರನ್​ಗಳ ಗುರಿ ಬೆನ್ನತ್ತಿದ ಭಾರತ 42.1 ಓವರ್​​ಗಳಲ್ಲಿ 5 ವಿಕೆಟ್​ನಷ್ಟಕ್ಕೆ 261 ರನ್​ಗಳಿಕೆ ಮಾಡಿ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ರೋಹಿತ್ ಶರ್ಮಾ ಬಳಗ 2 ಪಂದ್ಯ ಗೆದ್ದು ಸರಣಿ ವಶಪಡಿಸಿಕೊಂಡಿತು.

ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಮಾಡಿದ್ದ ಇಂಗ್ಲೆಂಡ್​ಗೆ ಹಾರ್ದಿಕ್​ ಪಾಂಡ್ಯ ಮತ್ತು ಚಹಾಲ ದಾಳಿಗೆ 259ರನ್​ ಸಾಧಾರಣ ಮೊತ್ತವನ್ನು ನೀಡಿತ್ತು. ಈ ಗುರಿಯನ್ನು ಬೆನ್ನುತ್ತಿದ ಭಾರತಕ್ಕೆ ಟೋಪ್ಲೆ ಕಾಡಿದರು. ಭಾರತ ತಂಡ ಮೊದಲು ಮೂವರನ್ನು ಬೇಗ ಕಳೆದುಕೊಂಡಿತು. ಶಿಖರ್​ ಧವನ್​ 1ರನ್​ ಹಾಗೂ ರೋಹಿತ್​ ಶರ್ಮಾ 17ರನ್​ಗೆ ವಿಕೆಟ್​ ಚೆಲ್ಲಿದ್ದಾರೆ. ನಂತರ ಬಂದ ವಿರಾಟ್​ ಕೊಹ್ಲಿ(17) ಮತ್ತೆ ಬ್ಯಾಟಿಂಗ್​ನಲ್ಲಿ ವೈಫಲ್ಯ ಕಂಡಿದ್ದಾರೆ.

ಪಂತ್​ ಮತ್ತ ಹಾರ್ದಿಕ್​ ಆಸರೆ: ನಂತರ ಬಂದ ಸೂರ್ಯ ಕುಮಾರ್(16)​ ಯಾದವ್,​ ರಿಷಬ್​ ಪಂತ್​ ಜೊತೆಗೆ ಜಾಸ್ತಿ ಹೊತ್ತು ಆಡಲಿಲ್ಲ. ಉತ್ತಮ ಬೌಲಿಂಗ್​ ಪ್ರದರ್ಶಸಿದ್ದ ಹಾರ್ದಿಕ್​ ಮತ್ತೆ ಬ್ಯಾಟಿಂಗ್​ನಲ್ಲಿ ಗುಡುಗಿದರು. ಇಂಗ್ಲೆಂಡ್​ ಬೌಲರ್​ಗಳನ್ನು ರಿಷಬ್​ ಪಂತ್​ ಮತ್ತು ಹಾರ್ದಿಕ್​ ಪಾಂಡ್ಯ ಕಾಡಿದರು. ಹಾರ್ದಿಕ್​​ ಪಾಂಡ್ಯ 55 ಎಸೆತಗಳಲ್ಲಿ 10 ಬೌಡರಿಗಳೊಂದಿಗೆ 71 ರನ್​ನ ಬಿರುಸಿನ ಆಟ ಪ್ರದರ್ಶಿಸಿದರು.

ರಷಬ್​ ಶತಕ: ರಿಷಬ್​ ಪಂತ್​ ಅದ್ಭುತ ಆಟ ಪ್ರದರ್ಶಿಸಿದರು. 133 ಎಸೆತದಲ್ಲಿ 16 ಬೌಂಡರಿ ಮತ್ತು 2 ಸಿಕ್ಸರ್​ನಿಂದ 117 ರನ್​ಗಳಿಸಿದರು. ಹಾರ್ದಿಕ್​ ನಂತರ ಬಂದ ಜಡೇಜ 7* ರನ್​ಗಳಿಸಿ ಅಜೇಯರಾಗಿ ಉಳಿದರು.

ಇಂಗ್ಲೆಂಡ್​ ಪರ ಟೋಪ್ಲೆ 3, ಓವರ್‌ಟನ್ 1 ವಿಕೆಟ್​ ಪಡೆದರು.

ಇದನ್ನೂ ಓದಿ : 259ರನ್​ಗೆ ಇಂಗ್ಲೆಂಡ್​ ಆಲ್​ಔಟ್​ : ಭಾರತಕ್ಕೆ ಆರಂಭಿಕ ಆಘಾತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.