ETV Bharat / sports

ಭಾರತ -ಇಂಗ್ಲೆಂಡ್​ 2ನೇ ಏಕದಿನ ಪಂದ್ಯ: ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ರೋಹಿತ್ ಪಡೆ: ವಿರಾಟ್​​ ಕಣಕ್ಕೆ

author img

By

Published : Jul 14, 2022, 5:07 PM IST

Updated : Jul 14, 2022, 5:23 PM IST

ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಭಾರತ - ಇಂಗ್ಲೆಂಡ್ ನಡುವೆ ಎರಡನೇ ಏಕದಿನ ಪಂದ್ಯ ಆರಂಭಗೊಂಡಿದೆ. ಟಾಸ್​ ಗೆದ್ದಿರುವ ಟೀಂ ಇಂಡಿಯಾ ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿದೆ.

England vs India 2nd ODI
England vs India 2nd ODI

ಲಾರ್ಡ್ಸ್​​(ಇಂಗ್ಲೆಂಡ್​): ಕ್ರಿಕೆಟ್ ಕಾಶಿ ಲಾರ್ಡ್ಸ್​​ನಲ್ಲಿ ಭಾರತ - ಇಂಗ್ಲೆಂಡ್ ನಡುವೆ ಎರಡನೇ ಏಕದಿನ ಪಂದ್ಯ ನಡೆಯುತ್ತಿದ್ದು, ಟಾಸ್​ ಗೆದ್ದ ಟೀಂ ಇಂಡಿಯಾ ಬೌಲಿಂಗ್​ ಆಯ್ದುಕೊಂಡಿದೆ. ಈಗಾಗಲೇ ಟಿ20 ಸರಣಿ ಕೈವಶ ಮಾಡಿಕೊಂಡು ಮೊದಲ ಏಕದಿನ ಪಂದ್ಯದಲ್ಲಿ 10 ವಿಕೆಟ್​ಗಳ ಗೆಲುವು ದಾಖಲು ಮಾಡಿರುವ ರೋಹಿತ್ ಬಳಗ, ಇಂದಿನ ಪಂದ್ಯದಲ್ಲಿ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ. ಇದರ ಜೊತೆಗೆ ಸರಣಿ ಜಯಿಸುವ ಛಲದಲ್ಲಿದೆ. ಇಂದಿನ ಪಂದ್ಯಕ್ಕಾಗಿ ವಿರಾಟ್​ ಕೊಹ್ಲಿ ಕಮ್​​ಬ್ಯಾಕ್​ ಮಾಡಿದ್ದಾರೆ.

ಇಂಗ್ಲೆಂಡ್​​ ಆಡುವ 11ರ ಬಳಗ: ಜೇಸನ್ ರಾಯ್​, ಜಾನಿ ಬೈರ್​​ಸ್ಟೋ. ಜೋ ರೂಟ್, ಬೆನ್​ ಸ್ಟೋಕ್ಸ್​, ಜೋಸ್ ಬಟ್ಲರ್​​(ವಿ.ಕಿ,ಕ್ಯಾಪ್ಟನ್​), ಲಿವಿಗ್​​ಸ್ಟೋನ್​, ಮೊಯಿನ್​ ಅಲಿ, ಓವರ್​​ಟೊನ್​, ಡೇವಿಡ್ ವಿಲ್ಲಿ, ಕೇರ್ಸ್​, ಟೊಪ್ಲೆ

ಭಾರತ ಆಡುವ 11ರ ಬಳಗ: ರೋಹಿತ್ ಶರ್ಮಾ(ಕ್ಯಾಪ್ಟನ್), ಶಿಖರ್ ಧವನ್​, ವಿರಾಟ್​ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್​(ವಿ.ಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ,ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಯಜುವೇಂದ್ರ ಚಹಲ್​, ಪ್ರಸಿದ್ಧ್ ಕೃಷ್ಣ

ಇಂದಿನ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಕಣಕ್ಕಿಳಿಯಲಿದ್ದಾರೆ.ಹೀಗಾಗಿ, ಆಡುವ 11ರ ಬಳಗದಿಂದ ಶ್ರೇಯಸ್​ ಅಯ್ಯರ್​ಗೆ ಕೈಬಿಡಲಾಗಿದೆ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇನ್ನೂ ಇಂಗ್ಲೆಂಡ್ ಕೂಡ ಮೊದಲ ಪಂದ್ಯದಲ್ಲಿ ಕಣಕ್ಕಿಳಿಸಿದ್ದ ತಂಡದೊಂದಿಗೆ ಎರಡನೇ ಪಂದ್ಯ ಆಡಲಿದೆ. ಕ್ರಿಕೆಟ್ ಕಾಶಿ ಲಾರ್ಡ್ಸ್​ನಲ್ಲಿ ನಡೆಯುತ್ತಿರುವ ಈ ಪಂದ್ಯ ಇಂಗ್ಲೆಂಡ್​ ಬಳಗಕ್ಕೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಈ ಸರಣಿ ಬಟ್ಲರ್ ಪಾಲಿಗೆ ಮಾಡು ಇಲ್ಲವೆ ಮಡಿ ಆಗಿದೆ. ಒಂದು ವೇಳೆ ಇಂದಿನ ಪಂದ್ಯದಲ್ಲಿ ಸೋಲು ಕಂಡರೆ, ಸರಣಿ ಭಾರತದ ಕೈವಶವಾಗಲಿದೆ.

Last Updated : Jul 14, 2022, 5:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.