ETV Bharat / sports

'ಅಶ್ವಿನ್​ ಜೊತೆ ಮಿನಿ ಸಮರ'ಕ್ಕೆ ಸಿದ್ಧ ಎಂದ ಜೋ ರೂಟ್​

author img

By

Published : Feb 4, 2021, 7:58 PM IST

ಇಂಗ್ಲೆಂಡ್​ ಆಟಗಾರರಲ್ಲಿ​ ಮಾಜಿ ನಾಯಕ ಗ್ರಹಾಂ ಗೂಚ್​​​​ ಅವರ ನಂತರ ಏಷ್ಯನ್​​​ ಸ್ಪಿನ್ನರ್​​ಗಳಿಗೆ ಜೋ ರೂಟ್​ ಮಾತ್ರ ಸ್ವೀಪ್​ ಶಾಟ್​ ಬಾರಿಸುವಲ್ಲಿ ಹೆಚ್ಚು ನಿಪುಣತೆ ಹೊಂದಿದ್ದಾರೆ.

Root gets ready with his pet shot for "mini-battle with Ashwin"
ಸಾಂದರ್ಭಿಕ ಚಿತ್ರ

ಚೆನ್ನೈ: ಸ್ವೀಪ್​ ಶಾಟ್​​ನಲ್ಲಿ ಅಪರಿಮಿತ ಕೌಶಲ ಬೆಳೆಸಿಕೊಂಡಿರುವ ಇಂಗ್ಲೆಂಡ್​ ತಂಡದ ನಾಯಕ ಜೋ ರೂಟ್​, ನಾಳೆಯಿಂದ ಆರಂಭವಾಗಲಿರುವ ಭಾರತ-ಇಂಗ್ಲೆಂಡ್​ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್​​ ಸರಣಿಯಲ್ಲಿ ಆರ್.ಅಶ್ವಿನ್​ ಜೊತೆ ಮಿನಿ ಸಮರಕ್ಕೆ ಇಳಿಯಲಿದ್ದಾರೆ. ನಾಳೆಯಿಂದ ಭಾರತ-ಇಂಗ್ಲೆಂಡ್ ಮಧ್ಯೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ.

ಇಂಗ್ಲೆಂಡ್​ ಆಟಗಾರರಲ್ಲಿ​ ಮಾಜಿ ನಾಯಕ ಗ್ರಹಾಂ ಗೂಚ್​​​​ ಅವರ ನಂತರ ಏಷ್ಯನ್​​​ ಸ್ಪಿನ್ನರ್​​ಗಳಿಗೆ ಜೋ ರೂಟ್​ ಮಾತ್ರ ಸ್ವೀಪ್​ ಶಾಟ್​ ಬಾರಿಸುವಲ್ಲಿ ಹೆಚ್ಚು ನಿಪುಣತೆ ಹೊಂದಿದ್ದಾರೆ. ಶ್ರೀಲಂಕಾ ಪ್ರವಾಸದಲ್ಲಿ ಒಂದು ದ್ವಿಶತಕ (228) ಮತ್ತು ಒಂದು ಶತಕ (186)​ ಬಾರಿಸಿದ ರೂಟ್​​, ಕಡಿಮೆ ಮತ್ತು ನಿಧಾನಗತಿ ಟ್ರ್ಯಾಕ್​​ನಲ್ಲಿ ತಮ್ಮ ಪಾಂಡಿತ್ಯವನ್ನು ತೋರಿಸಿದರು. ನನಗೆ ಸ್ವೀಪ್ ಶಾಟ್ ಒಂದು ಲಾಭದಾಯಕವಾದದ್ದು. ಇದು ಬಹಳಷ್ಟು ರನ್ ಗಳಿಸುತ್ತದೆ. ಆದರೆ, ಶ್ರೀಲಂಕಾದಲ್ಲಿ ಪಿಚ್‌ಗಳಿದ್ದ ರೀತಿಗೆ ತಕ್ಕಂತೆ ಆಡಿದ್ದೇನೆ ಎಂದರು.

ವಿರಾಟ್​ ಕೊಹ್ಲಿ ಮತ್ತು ಸ್ಟೀವ್​ ಸ್ಮಿತ್​ ಅವರಂತೆ ಕಠಿಣವಾದ ಮತ್ತು ಕಷ್ಟದ ಹೊಡೆತಗಳ ಎದುರಿಸುವುದನ್ನು ಹೇಗೆ ಅಭಿವೃದ್ಧಿಪಡಿಸಿಕೊಳ್ಳಬೇಕು ಎಂಬುದನ್ನು ಕಲಿಯುತ್ತಿದ್ದೇನೆ. ಚಿಕ್ಕಂದಿನಿಂದಲೂ ದೈಹಿಕವಾಗಿ ಬೆಳೆಯಲು ಮತ್ತು ಅಭಿವೃದ್ಧಿ ಹೊಂದಲು ಬಹಳ ಸಮಯ ಹಿಡಿಯಿತು. ಇದು ಕೂಡ ಹಾಗೆ ಆರಂಭದಲ್ಲಿ ಸ್ಪಿನ್ನರ್​​ಗಳನ್ನು ಎದುರಿಸುವುದು ಕಷ್ಟವಾಗಿತ್ತು. ಅದರಿಂದ ಹೊರ ಬರಲು ಈ ಮಾರ್ಗ ಹುಡುಕಬೇಕಾಯಿತು. ಸ್ವೀಪ್ ಶಾಟ್ ಬಾರಿಸಲು ಪೂರ್ಣ ಪ್ರಮಾಣದಲ್ಲಿ ಶಕ್ತಿ ಪ್ರಯೋಗ ಮಾಡುತ್ತೇನೆ ಎಂದು ರೂಟ್​ ಹೇಳಿದರು.

ಇದನ್ನೂ ಓದಿ...ಧೋನಿ, ಸಚಿನ್​, ಬ್ರಾಡ್ಮನ್​, ಲಾರಾ, ದ್ರಾವಿಡ್​ ದಾಖಲೆ ಮೇಲೆ ಕೊಹ್ಲಿ ಕಣ್ಣು... ಇಲ್ಲಿದೆ ಅವುಗಳ ಸಂಪೂರ್ಣ ವಿವರ

ಅಶ್ವಿನ್ ಅವರ ಬೌಲಿಂಗ್​ ಹೇಗೆ ವ್ಯವಹರಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಕ್ಷಣಾತ್ಮಕ ಆಟಕ್ಕೆ ಒತ್ತು ಕೊಡುತ್ತೇನೆ. ಸ್ವಲ್ಪ ಸಮಯದವರೆಗೆ ಕ್ರೀಸ್​ನಲ್ಲಿ ಇದ್ದರೆ, ಬೌಂಡರಿಗಳನ್ನು ಬಾರಿಸಲು ಮುಂದಾಗುತ್ತೇನೆ. ಅಶ್ವಿನ್​ ವಿರುದ್ಧ ಆಡಿದ್ದೇನೆ. ರನ್ ಕೂಡ ಗಳಿಸಿದ್ದೇನೆ. ಒಂದೆರಡು ಬಾರಿ ಉತ್ತಮವಾಗಿ ಆಡಿದ್ದರೆ, ಕೆಲಬಾರಿ ಕಷ್ಟಪಟ್ಟಿದ್ದೇನೆ. ಅಶ್ವಿನ್ ಬೌಲಿಂಗ್ ಎದುರಿಸುವ ಸಂದರ್ಭದಲ್ಲಿ ಸ್ವಲ್ಪಮಟ್ಟಿಗೆ ಯುದ್ಧದ ವಾತಾವರಣ ಸೃಷ್ಟಿಯಾಗುತ್ತದೆ. ಅದೆ ನೀವು ಬಯಸುವ ಸ್ಪರ್ಧೆ ಎಂದರು.

ಸ್ವೀಪ್ ಶಾಟ್ ಮಾಡುವಾಗ ಬಹಳ ಸೂಕ್ಷವಾಗಿರಬೇಕು. ಕೊಂಚ ಯಾಮಾರಿದರೂ ಅಪಾಯ. ಸುಮಾರು 12-13ನೇ ವಯಸ್ಸಿನಿಂದಲೂ ಈ ಕುರಿತು ಅಭ್ಯಾಸ ಪಡೆದಿದ್ದೇನೆ. ಬ್ಯಾಟಿಂಗ್​ ಅಭಿವೃದ್ಧಿಪಡಿಸಿಕೊಂಡಿದ್ದೇನೆ. ಆದರೆ, ಲೈನ್​ ಅಂಡ್​ ಲೆಂತ್ ಮತ್ತು ಬೌನ್ಸರ್​ಗಳನ್ನು ಎದುರಿಸುವುದು ಸಮಸ್ಯೆ. ಆದರೆ, ಬೌಲರ್​ ಮತ್ತು ಬ್ಯಾಟ್ಸ್​​ಮನ್​ಗಳ ನಡುವೆ ಯಾವುದೇ ಸಮರ ಇರುವುದಿಲ್ಲ ಎಂಬುದನ್ನು ತಿಳಿಯಬೇಕಿದೆ. ನಾನು ಯಾವಾಗಲೂ ಸರಣಿ ಗೆಲ್ಲಲು ಪ್ರಯತ್ನಿಸುತ್ತೇನೆ ಎಂದು ರೂಟ್​ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.