ETV Bharat / sports

Eng vs Ind 4ನೇ ಟೆಸ್ಟ್‌: 191ಕ್ಕೆ ಟೀಂ ಇಂಡಿಯಾ ಆಲೌಟ್‌; ಆರಂಭದಲ್ಲೇ ಆಂಗ್ಲರಿಗೆ ಆಘಾತ ನೀಡಿದ ಕೊಹ್ಲಿ ಬೌಲರ್ಸ್​​

author img

By

Published : Sep 2, 2021, 10:49 PM IST

Updated : Sep 2, 2021, 11:16 PM IST

ಭಾರತ, ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಕೇವಲ 191 ರನ್‌ಗಳಿಗೆ ಆಲೌಟ್ ಆಗಿದೆ. ಬಳಿಕ ಮೊದಲ ಇನ್ನಿಂಗ್ಸ್‌ ಆಡಿದ ಇಂಗ್ಲೆಂಡ್ ತಂಡ ಆದಷ್ಟು ಬೇಗ ಮೂರು ವಿಕೆಟ್ ಕಳೆದುಕೊಂಡಿತು. ಬೂಮ್ರಾ ಕೇವಲ 4.5 ಓವರ್​ಗಳಲ್ಲಿ 14 ರನ್ ನೀಡಿ 2 ವಿಕೆಟ್ ಪಡೆದುಕೊಂಡರು.

India vs England 4th Test : Bumrah strikes to remove England openers early after India's 191
Ind v/s Eng: 191ಕ್ಕೆ ಆಲ್​​ ಔಟ್​ ಆದ ಟೀಂ ಇಂಡಿಯಾ.. ಭಾರತಕ್ಕೆ ಬೂಮ್ರಾ ಭರವಸೆ

ಓವಲ್(ಇಂಗ್ಲೆಂಡ್): ಟೀಂ ಇಂಡಿಯಾ-ಇಂಗ್ಲೆಂಡ್​ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಕೊಹ್ಲಿ ಪಡೆ 191 ರನ್​ಗಳಿಗೆ ಸರ್ವಪತನ ಕಂಡಿದೆ. ನಾಯಕ ವಿರಾಟ್ ಕೊಹ್ಲಿ ಮತ್ತು ಶಾರ್ದೂಲ್ ಠಾಕೂರ್ ಅವರ ಅರ್ಧ ಶತಕದ ನೆರವಿನಿಂದ 191 ರನ್​ ಗಳಿಸಲು ಸಾಧ್ಯವಾಗಿದೆ.

ಪಂದ್ಯದಲ್ಲಿ ರೋಹಿತ್ ಶರ್ಮಾ 11, ಕೆ.ಎಲ್​. ರಾಹುಲ್ 17, ಪೂಜಾರಾ 4, ರವೀಂದ್ರ ಜಡೇಜಾ 10, ರಹಾನೆ 14, ಪಂಥ್ 9, ಉಮೇಶ್​​ ಯಾದವ್​ 10 ರನ್​ ಗಳಿಸಲಷ್ಟೇ ಶಕ್ತರಾದರು. ಬೂಮ್ರಾ ಶೂನ್ಯಕ್ಕೆ ಔಟಾಗಿದ್ದು, ಸಿರಾಜ್ 1 (ನಾಟ್​ಔಟ್​) ರನ್ ಗಳಿಸಿದರು.

ಟಾಸ್​ ಗೆದ್ದ ನಂತರ ಅತ್ಯದ್ಭುತವಾಗಿ ಬೌಲಿಂಗ್ ಮಾಡಿದ ಆತಿಥೇಯರು, ಭಾರತೀಯ ಬ್ಯಾಟ್ಸ್​​ಮನ್​ಗಳನ್ನು ಕಟ್ಟಿಹಾಕುವಲ್ಲಿ ಸಫಲರಾದರು. ರಾಬಿನ್​​ಸನ್​ 3, ಕ್ರಿಸ್ ವೋಕ್ಸ್​ 4, ಕ್ರೇಗ್ ಓವರ್ಟನ್ ಹಾಗೂ ಜೇಮ್ಸ್ ಆ್ಯಂಡರ್​ಸನ್ ತಲಾ ಒಂದು ವಿಕೆಟ್​ ಪಡೆದರು.

ಭಾರತ ಆಲೌಟ್ ಆದ ಬಳಿಕ ಮೊದಲ ಇನ್ನಿಂಗ್ಸ್ ಶುರು ಮಾಡಿದ ಇಂಗ್ಲೆಂಡ್ ತಂಡ ಆದಷ್ಟು ಬೇಗ ಮೂರು ವಿಕೆಟ್ ಕಳೆದುಕೊಂಡಿತು. ಬೂಮ್ರಾ ಕೇವಲ 4.5 ಓವರ್​ಗಳಲ್ಲಿ 14 ರನ್ ನೀಡಿ 2 ವಿಕೆಟ್ ಪಡೆದುಕೊಂಡರು. ಇದರ ಬೆನ್ನಲ್ಲೇ ಉಮೇಶ್​ ಯಾದವ್​ ಕ್ಯಾಪ್ಟನ್​ ರೂಟ್​ ವಿಕೆಟ್​ ಪಡೆದು ಗಮನ ಸೆಳೆದರು.

ರೋರಿ ಬರ್ನ್ಸ್​ 11 ರನ್​ ಗಳಿಸಿ ಔಟಾದರೆ, ಹಸೀಬ್ ಹಮೀದ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಜೋ ರೂಟ್​ (21ರನ್​) ಗಳಿಸಿ ವಿಕೆಟ್​ ಒಪ್ಪಿಸಿದರು. ಸದ್ಯ ಡೇವಿಡ್ ಮಲನ್ (26) ಹಾಗೂ ಓವರ್​ಟನ್​​(1) ಕಣದಲ್ಲಿದ್ದು, ಇಂಗ್ಲೆಂಡ್ ತಂಡ 3 ವಿಕೆಟ್ ನಷ್ಟಕ್ಕೆ ಒಟ್ಟು 53ರನ್ ಗಳಿಸಿದ್ದು, ಇನ್ನು 138ರನ್​ಗಳ ಹಿನ್ನಡೆಯಲಿದೆ.

ಇದನ್ನೂ ಓದಿ: ಇಂಗ್ಲೆಂಡ್‌ ವಿರುದ್ಧದ 4ನೇ ಟೆಸ್ಟ್​​ನಿಂದ ಆರ್​.ಅಶ್ವಿನ್ ಕೈಬಿಟ್ಟಿದ್ದಕ್ಕೆ ಆಕ್ರೋಶ: ​ಯಾರು, ಏನಂದ್ರು? ಇಲ್ಲಿದೆ ನೋಡಿ..

Last Updated : Sep 2, 2021, 11:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.