ETV Bharat / sports

ಭಾರತ - ಇಂಗ್ಲೆಂಡ್​ ಮೊದಲ ಟೆಸ್ಟ್​: ಲಂಚ್​ ಬ್ರೇಕ್​ ವೇಳೆಗೆ ಕುಸಿತ ಕಂಡ ಆಂಗ್ಲ ಪಡೆ

author img

By

Published : Feb 5, 2021, 11:47 AM IST

Updated : Feb 5, 2021, 11:52 AM IST

ನಾಯಕ ಜೋ ರೂಟ್​​ಗೆ 100ನೇ ಪಂದ್ಯ ಇದಾಗಿದೆ. ಮತ್ತೊಂದು ವಿಶೇಷ ಅಂದ್ರೇ ರೂಟ್​ ಟೆಸ್ಟ್​ಗೆ ಪದಾರ್ಪಣೆ ಮಾಡಿದ್ದು, ಕೂಡ ಭಾರತದ ಎದುರೇ.. ಈಗ ನೂರನೇ ಪಂದ್ಯವನ್ನೂ ಟೀಂ ಇಂಡಿಯಾ ಎದುರೇ ಆಡುತ್ತಿದ್ದಾರೆ..

India-England 1st Test
ಭಾರತ-ಇಂಗ್ಲೆಂಡ್​ 1st ಟೆಸ್ಟ್

ಹೈದರಾಬಾದ್ : ಭಾರತ ಮತ್ತು ಇಂಗ್ಲೆಂಡ್​ ಮೊದಲ ಟೆಸ್ಟ್ ಪಂದ್ಯ ಎಂ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಇಂದು ಆರಂಭವಾಗಿದೆ. ಟಾಸ್​​ ಗೆದ್ದ ರೂಟ್​​ ನೇತೃತ್ವದ ಆಂಗ್ಲ​ ಪಡೆ ಬ್ಯಾಟಿಂಗ್​ ಆಯ್ದುಕೊಂಡಿದೆ.

ಇಂಗ್ಲೆಂಡ್​ ಪರ ಓಪನರ್​ ಆಗಿ ಕಣಕ್ಕಿಳಿದ ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ತಂಡಕ್ಕೆ ಉತ್ತಮ ಅಡಿಪಾಯ ಹಾಕಿ ಕೊಟ್ಟರು. ಮೊದಲ ವಿಕೆಟ್​ಗೆ 63 ರನ್​ಗಳ ಜೊತೆಯಾಟವಾಡಿದರು. ರೋರಿ ಬರ್ನ್ಸ್ 33 ರನ್​ಗಳಿಸಿದಾಗ ಅಶ್ವಿನ್​ ​ ಬೌಲಿಂಗ್​ನಲ್ಲಿ ಪಂತ್​ ಗೆ ಕ್ಯಾಚ್​ ನೀಡಿ ಔಟಾದರು. 60 ಬೌಲ್​ ಎದುರಿಸಿದ ಅವರು 2 ಬೌಂಡರಿ ಸಮೇತ 33 ರನ್​ಗಳಿಸಿದರು. ಇನ್ನು ಬರ್ನ್ಸ್ ಔಟಾದ ಬಳಿಕ ಕ್ರೀಸ್ ಬಂದ ಲಾರೆನ್ಸ್ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. 5 ಬೌಲ್​ ಎದುರಿಸಿದ ಅವರು ಬೂಮ್ರಾ ಬೌಲಿಂಗ್​ನಲ್ಲಿ ಶ್ಯೂನಕ್ಕೆ ಔಟಾಗಿ ಪೇವಲಿಯನ್​ ಹಾದಿ ಹಿಡಿದರು.

ಇನ್ನು ಸಿಬ್ಲಿ 26*, ಮತ್ತು ರೂಟ್ 4*​​ ಕ್ರೀಸ್​ನಲ್ಲಿದ್ದು ಮೊದಲ ವಿರಾಮದ ವೇಳೆಗೆ ಇಂಗ್ಲೆಂಡ್​​ ತಂಡದ ಮೊತ್ತ 67 ರನ್ ಕಲೆ ಹಾಕಿದೆ​​ . ಇನ್ನು ಟೀಂ ಇಂಡಿಯಾ ಪರ ಬೂಮ್ರಾ ಮತ್ತು ಅಶ್ವಿನ್​​​ ತಲಾ ಒಂದು ವಿಕೆಟ್​ ಪಡೆದು ಮಿಂಚಿದರು.

ಓದಿ: ಭಾರತ-ಇಂಗ್ಲೆಂಡ್​ ಮೊದಲ ಟೆಸ್ಟ್.. ಟಾಸ್​​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಆಂಗ್ಲರು..

Last Updated : Feb 5, 2021, 11:52 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.