ETV Bharat / sports

ನಿಧಾನಗತಿಯ ಪಿಚ್​ ಇಂಗ್ಲೆಂಡ್​ ತಂಡದ ಹಿನ್ನಡೆಗೆ ಕಾರಣ: ಮೋರ್ಗಾನ್ ವಿಶ್ಲೇಷಣೆ

author img

By

Published : Mar 15, 2021, 9:34 AM IST

ನಿಧಾನಗತಿಯ ಪಿಚ್​ನಿಂದ ಎರಡನೇ ಟಿ -20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇಂಗ್ಲೆಂಡ್​ ತಂಡಕ್ಕೆ ಹಿನ್ನಡೆಯಾಯಿತು ಎಂದು ನಾಯಕ ಇಯಾನ್​ ಮೋರ್ಗಾನ್ ಹೇಳಿದರು.

Morgan
ನಾಯಕ ಇಯೊನ್ ಮೋರ್ಗಾನ್

ಅಹಮದಾಬಾದ್: ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎರಡನೇ ಟಿ 20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ನಿಧಾನಗತಿಯ ಪಿಚ್​ ಇಂಗ್ಲೆಂಡ್​ ತಂಡದ ಹಿನ್ನಡೆಗೆ ಕಾರಣವಾಯಿತು ಎಂದು ನಾಯಕ ಇಯೊನ್ ಮೋರ್ಗಾನ್ ಹೇಳಿದರು.

ಮೊದಲ ಟಿ-20 ಯಲ್ಲಿ ಭಾರತ ವಿರುದ್ಧ ಇಂಗ್ಲೆಂಡ್​ ಸುಲಭ ಗೆಲುವು ದಾಖಲಿಸಿತ್ತು. ಕೊನೆಯ ಪಂದ್ಯದಲ್ಲಿದ್ದ ಪಿಚ್​ಗಿಂತ ಇದು ಭಿನ್ನವಾಗಿದೆ ಎಂದು ಮೋರ್ಗನ್ ಅಭಿಪ್ರಾಯಪಟ್ಟರು.

ಇದನ್ನು ಓದಿ: ಚೊಚ್ಚಲ ಪಂದ್ಯದಲ್ಲೇ ಅಬ್ಬರಿಸಿದ ಕಿಶನ್​​: ಕೊಹ್ಲಿ ಬಗ್ಗೆ ಹೇಳಿದ್ದೇನು?

"ಭಾರತ ಉತ್ತಮವಾಗಿ ಬೌಲಿಂಗ್ ಮಾಡಿತು. ಇದು ಮೊದಲ ಪಂದ್ಯದ ಪಿಚ್​ಗಿಂತ ವಿಭಿನ್ನವಾದ ಪಿಚ್ ಆಗಿತ್ತು. ಅದರಲ್ಲಿ ಕಡಿಮೆ ವೇಗವಿತ್ತು. ಆರಂಭದಿಂದಲೂ ನಮಗೆ ಹಿನ್ನಡೆಯಾಯಿತು. ಚೆಂಡಿನ ವೇಗವು ಯಾವಾಗಲೂ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಿರುತ್ತದೆ. ನಾವು ಆಡಿದ ರೀತಿಗೆ ನಾನು ಸ್ವಲ್ಪ ನಿರಾಸೆಗೊಂಡಿದ್ದೇವೆ "ಎಂದು ಮೋರ್ಗನ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.