ETV Bharat / sports

ದೇಶಕ್ಕಾಗಿ ಇಂಗ್ಲೆಂಡ್​ ಸರಣಿ ಗೆಲ್ಲಲು ಬಯಸುತ್ತೇವೆ, WTCಗೆ ಅಭ್ಯಾಸ ಪಂದ್ಯವೆಂದು ಭಾವಿಸಲ್ಲ: ನೀಲ್ ವ್ಯಾಗ್ನರ್​

author img

By

Published : May 17, 2021, 6:29 PM IST

ನಾವು ಟೆಸ್ಟ್ ಕ್ರಿಕೆಟ್ ಆಡುತ್ತಿರುವ ರೀತಿಯಲ್ಲಿಯೇ ಅಲ್ಲಿಗೆ ಹೋಗುತ್ತಿದ್ದೇವೆ. ನಮಗೆ ನ್ಯೂಜಿಲೆಂಡ್​ಗೆ ಟೆಸ್ಟ್ ಪಂದ್ಯಗಳನ್ನು ಗೆಲ್ಲಿಸಿಕೊಡುವುದಕ್ಕೆ ಮೊದಲ ಆಧ್ಯತೆ ಎಂದು ವ್ಯಾಗ್ನರ್ ಹೇಳಿದ್ದಾರೆ..

ನೀಲ್ ವ್ಯಾಗ್ನರ್​
ನೀಲ್ ವ್ಯಾಗ್ನರ್​

ಆಕ್ಲೆಂಡ್ : ಮುಂಬರುವ ಇಂಗ್ಲೆಂಡ್ ವಿರುದ್ಧದ ಎರಡು ಟೆಸ್ಟ್​ ಪಂದ್ಯಗಳು ಭಾರತದ ವಿರುದ್ಧ ನಡೆಯುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗೆ ಅಭ್ಯಾಸ ಎಂದು ನಾವು ಪರಿಗಣಿಸುವುದಿಲ್ಲ ಎಂದು ನ್ಯೂಜಿಲ್ಯಾಂಡ್​ ತಂಡದ ವೇಗದ ಬೌಲರ್​ ನೈಲ್ ವ್ಯಾಗ್ನರ್​ ತಿಳಿಸಿದ್ದಾರೆ.

ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​ ತಂಡ ಜೂನ್ 2ರಿಂದ ಇಂಗ್ಲೆಂಡ್ ವಿರುದ್ದ ಟೆಸ್ಟ್​ ಸರಣಿಯನ್ನಾಡಲಿದೆ. ಈ ಸರಣಿ ಆಡುವುದಕ್ಕೆ ಈಗಾಗಲೇ ಕೆಲವು ಕಿವೀಸ್​ ಆಟಗಾರರ ಇಂಗ್ಲೆಂಡ್​ ತಲುಪಿದ್ದು, ಸೌತಾಂಪ್ಟನ್​ನಲ್ಲಿ 2 ವಾರಗಳ ಕಡ್ಡಾಯ ಕ್ವಾರಂಟೈನ್​ಗೆ ಒಳಗಾಗಿದೆ. ಸೋಮವಾರ ರಾಸ್​ ಟೇಲರ್, ವ್ಯಾಗ್ನರ್​, ಬಿಜೆ ವ್ಯಾಟ್ಲಿಂಗ್​ ಹಾಗೂ ಟಿಮ್ ಸೌಥಿ ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸಿದೆ.

ಈ ಸರಣಿ ಕುರಿತು ಮಾತನಾಡಿದ ವ್ಯಾಗ್ನರ್​, ನಾವು ಇಂಗ್ಲೆಂಡ್​ ವಿರುದ್ಧದ 2 ಟೆಸ್ಟ್​ ಪಂದ್ಯಗಳನ್ನು ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೆ ಕೇವಲ ಅಭ್ಯಾಸ ಎಂದು ಭಾವಿಸುವುದಕ್ಕೆ ಹೋಗುವುದಿಲ್ಲ.

ನಾವು ಟೆಸ್ಟ್ ಕ್ರಿಕೆಟ್ ಆಡುತ್ತಿರುವ ರೀತಿಯಲ್ಲಿಯೇ ಅಲ್ಲಿಗೆ ಹೋಗುತ್ತಿದ್ದೇವೆ. ನಮಗೆ ನ್ಯೂಜಿಲೆಂಡ್​ಗೆ ಟೆಸ್ಟ್ ಪಂದ್ಯಗಳನ್ನು ಗೆಲ್ಲಿಸಿಕೊಡುವುದಕ್ಕೆ ಮೊದಲ ಆಧ್ಯತೆ ಎಂದು ವ್ಯಾಗ್ನರ್ ಹೇಳಿದ್ದಾರೆ.

ಈ ಸರಣಿ ಮುಗಿಯುತ್ತಿದ್ದಂತೆ ನ್ಯೂಜಿಲ್ಯಾಂಡ್ ಹಾಗೂ ಭಾರತ ತಂಡ ಜೂನ್​ 18ರಿಂದ 22ರವರೆಗೆ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ಕಾದಾಡಲಿವೆ. ಭಾರತ ತಂಡ ಜೂನ್​ 2 ರಂದು ಇಂಗ್ಲೆಂಡ್​ಗೆ ಪ್ರಯಾಣಿಸಲಿದೆ.

ಇದನ್ನು ಓದಿ:89 ವರ್ಷದ ಟೆಸ್ಟ್​ ಇತಿಹಾಸ ಬ್ರೇಕ್​ ಮಾಡಲಿರುವ ಭಾರತ.. ಮೊದಲ ಬಾರಿಗೆ ತಟಸ್ಥ ಸ್ಥಳದಲ್ಲಿ ಕ್ರಿಕೆಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.