ETV Bharat / sports

ಕೊನೆಯ 2 ಓವರ್​ಗಳಲ್ಲಿ ಒಂದು ವಿಕೆಟ್​ ಪಡೆಯಲು ಆಸೀಸ್ ವಿಫಲ.. ಸಿಡ್ನಿ ಟೆಸ್ಟ್​ನಲ್ಲಿ ರೋಚಕ ಡ್ರಾ ಸಾಧಿಸಿದ ಇಂಗ್ಲೆಂಡ್​​!

author img

By

Published : Jan 9, 2022, 2:17 PM IST

ಆ್ಯಶಸ್​ ಸರಣಿಯ ನಾಲ್ಕನೇ ಪಂದ್ಯದಲ್ಲಿ ಇಂಗ್ಲೆಂಡ್​ ಸೋಲಿನಿಂದ ತಪ್ಪಿಸಿಕೊಂಡಿದೆ. ಈ ಪಂದ್ಯ ರೋಚಕ ಡ್ರಾ ಸಾಧಿಸಿದೆ..

England Survive With one Wicket Remaining As 4th Test Ends In Draw
ಸಿಡ್ನಿ ಟೆಸ್ಟ್​ ರೋಚಕ ಡ್ರಾ

ಸಿಡ್ನಿ : ಆ್ಯಶಸ್​ ಸರಣಿಯ ನಾಲ್ಕನೇ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯಗೊಂಡಿದೆ. 5 ಪಂದ್ಯಗಳ ಸರಣಿಯಲ್ಲಿ ಈಗಾಗಲೇ 3-0 ಮುನ್ನಡೆಯೊಂದಿಗೆ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿರುವ ಆಸೀಸ್, ಕೊನೆಯ ಎರಡು ಓವರ್​ಗಳಲ್ಲಿ ಒಂದು ವಿಕೆಟ್​ ಪಡೆಯಲಾಗದೆ​ ಪಂದ್ಯ ಗೆಲ್ಲುವಲ್ಲಿ ವಿಫಲವಾಯಿತು.

388 ರನ್​ಗಳ ಗೆಲುವಿನ ಗುರಿ ಪಡೆದಿದ್ದ ರೂಟ್​ ಪಡೆ ನಾಲ್ಕನೇ ದಿನದಾಟದ ಅಂತ್ಯಕ್ಕೆ ವಿಕೆಟ್​ ನಷ್ಟವಿಲ್ಲದೆ 30 ರನ್​ ಗಳಿಸಿತ್ತು. ಆದರೆ, ಇಂದು ಬೆಳಗ್ಗೆ ದಿಢೀರ್​ ಕುಸಿತ ಕಂಡು 100 ರನ್​ ಗಳಿಸುವಷ್ಟರಲ್ಲಿ 3 ವಿಕೆಟ್​ ಕಳೆದುಕೊಂಡು ಸೋಲಿನತ್ತ ಮುಖಮಾಡಿತ್ತು.

ಈ ಸಂದರ್ಭದಲ್ಲಿ ತಂಡಕ್ಕೆ ನಾಯಕ ಜೋ ರೂಟ್​ (24) ಹಾಗೂ ಆಲ್​ರೌಂಡರ್​ ಬೆನ್​ ಸ್ಟೋಕ್ಸ್(60)​ ಜೊತೆಗೂಡಿ ರಕ್ಷಣಾತ್ಮಕ ಆಟವಾಡಿದರು. ಅರ್ಧಶತಕದ ಆಡವಾಡಿದ ಸ್ಟೋಕ್ಸ್(60)​ ನಾಯಕನ ವಿಕೆಟ್​ ಪತನದ ಬಳಿಕ ಜಾನಿ ಬೈರ್​ಸ್ಟೋ (41) ಇಂಗ್ಲೆಂಡ್​ಗೆ ನೆರವಾದರು.

ಆದರೆ, ಇವರಿಬ್ಬರು ಔಟ್​ ಆದ ಬಳಿಕ ವಿಕೆಟ್​ ಕೀಪರ್​ ಬ್ಯಾಟರ್​ ಜೋಸ್​ ಬಟ್ಲರ್​ ಕೂಡ 11, ವುಡ್​ 0 ಹಾಗೂ ಜಾಕ್​ ಲೀಚ್​ 26 ರನ್​ಗೆ ಪೆವಿಲಿಯನ್‌ಗೆ ಮರಳಿದ್ದು ಇಂಗ್ಲೆಂಡ್​ ಪಾಳೆಯದಲ್ಲಿ ಸೋಲಿನ ಆತಂಕ ಮೂಡಿಸಿತ್ತು.

ಆದರೆ, ಅಂತಿಮವಾಗಿ ಸ್ಟುವರ್ಟ್​ ಬ್ರಾಡ್​ 35 ಎಸೆತಗಳಲ್ಲಿ 8 ಹಾಗೂ ಜೇಮ್ಸ್​ ಎಂಡರ್ಸನ್​ 6 ಬಾಲ್​ ಎಂದುರಿಸಿ ಔಟಾಗದೆ ಉಳಿದುಕೊಂಡು ಆಂಗ್ಲರನ್ನು ಸೋಲಿನಿಂದ ಬಚಾವ್​ ಮಾಡಿದರು. ಈ ಮೂಲಕ ಇಂಗ್ಲೆಂಡ್ ಆ್ಯಶಸ್​ ಸರಣಿಯಲ್ಲಿ​ ವೈಟ್​ವಾಶ್​ ಮುಖಭಂಗದಿಂದ ಪಾರಾಯಿತು. ಕೊನೆಯ 2 ಓವರ್​ಗಳಲ್ಲಿ ಆಸೀಸ್​ಗೆ ವಿಕೆಟ್​ ಕಬಳಿಸಲಾಗಲಿಲ್ಲ.

ಆಸೀಸ್​ ಪರ ಟ್ರಾವಿಸ್​ ಹೆಡ್​ ಅನುಪಸ್ಥಿತಿಯಲ್ಲಿ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಎರಡೂ ಇನ್ನಿಂಗ್ಸ್​ಗಳಲ್ಲಿ ಶತಕ(137, 101*) ಬಾರಿಸಿ ಮಿಂಚಿದ ಉಸ್ಮಾನ್ ಖವಾಜಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸರಣಿಯ ಅಂತಿಮ ಪಂದ್ಯವು ಜ.14ರಿಂದ ಹೋಬಾರ್ಡ್​ನಲ್ಲಿ ನಡೆಯಲಿದೆ.

ಇದನ್ನೂ ಓದಿ: 65 ಎಸೆತಗಳಲ್ಲಿ 141 ರನ್​, ನಂಬಲಾಸಾಧ್ಯವಾದ ಶತಕ: 24ಕ್ಕೆ4 ವಿಕೆಟ್ ಕಳೆದುಕೊಂಡ್ರೂ 228 ರನ್​ ಚೇಸ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.