ETV Bharat / sports

ಹೆಚ್ಚು ಬಾರಿ ಕೊಹ್ಲಿ ವಿಕೆಟ್​ ಪಡೆದ ದಾಖಲೆ, ಲಿಯಾನ್​ ಜೊತೆ ಹಂಚಿಕೊಂಡ ಆ್ಯಂಡರ್ಸನ್​

author img

By

Published : Aug 25, 2021, 6:20 PM IST

ಹೆಡಿಂಗ್ಲೆಯಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ್ ಮೊದಲ ಇನ್ನಿಂಗ್ಸ್​ನಲ್ಲಿ​ 7 ರನ್​ಗಳಿಸಿದ್ದ ವಿರಾಟ್​ ಕೊಹ್ಲಿ ಅವರನ್ನು ಆ್ಯಂಡರ್ಸನ್​ ಪೆವಿಲಿಯನ್​ಗಟ್ಟಿದರು. ಟೆಸ್ಟ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದಾಖಲೆಯನ್ನು ಹೊಂದಿರುವ ಆ್ಯಂಡರ್ಸನ್​ ಭಾರತೀಯ ನಾಯಕನನ್ನು 7ನೇ ಬಾರಿ ಔಟ್​ ಮಾಡಿದ್ದಾರೆ.

ENG vs IND 3rd test
ಜೇಮ್ಸ್ ಆ್ಯಂಡರ್ಸನ್​

ಲೀಡ್ಸ್​: ಇಂಗ್ಲೆಂಡ್ ವೇಗದ ಬೌಲರ್​ ಜೇಮ್ಸ್​ ಆ್ಯಂಡರ್ಸನ್​ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿಯನ್ನು ಟೆಸ್ಟ್​​​ ಕ್ರಿಕೆಟ್​ನಲ್ಲಿ​​ ಅತಿ ಹೆಚ್ಚು ಬಾರಿ ಔಟ್​ ಮಾಡಿದ ದಾಖಲೆಯನ್ನು ಆಸ್ಟ್ರೇಲಿಯಾದ ನೇಥನ್ ಲಿಯಾನ್ ಜೊತೆ ಹಂಚಿಕೊಂಡಿದ್ದಾರೆ.

ಹೆಡಿಂಗ್ಲೆಯಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ್ ಮೊದಲ ಇನ್ನಿಂಗ್ಸ್​ನಲ್ಲಿ​ 7 ರನ್​ಗಳಿಸಿದ್ದ ವಿರಾಟ್​ ಕೊಹ್ಲಿಯನ್ನು ಆ್ಯಂಡರ್ಸನ್​ ಪೆವಿಲಿಯನ್​ಗಟ್ಟಿದರು. ಟೆಸ್ಟ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದಾಖಲೆಯನ್ನು ಹೊಂದಿರುವ ಆ್ಯಂಡರ್ಸನ್​ ಭಾರತೀಯ ನಾಯಕನನ್ನು 7ನೇ ಬಾರಿ ಔಟ್​ ಮಾಡಿದ್ದಾರೆ.

ಆಸ್ಟ್ರೇಲಿಯಾದ ಸ್ಪಿನ್ನರ್​ ನೇಥನ್ ಲಿಯಾನ್​ ಕೂಡ ವಿರಾಟ್​ ಕೊಹ್ಲಿ ವಿಕೆಟ್​ಅನ್ನು ಟೆಸ್ಟ್​ ಕ್ರಿಕೆಟ್​ನಲ್ಲಿ 7 ಬಾರಿ ಪಡೆದ ದಾಖಲೆ ಹೊಂದಿದ್ದಾರೆ. ಪಂದ್ಯದ 11ನೇ ಓವರ್​ನಲ್ಲಿ ವಿರಾಟ್​ ಕೊಹ್ಲಿ ಕವರ್​ ಡ್ರೈವ್ ಮಾಡುವ ಯತ್ನದಲ್ಲಿ ವಿಫಲರಾಗಿ ವಿಕೆಟ್​ ಕೀಪರ್​ ಜೋಸ್ ಬಟ್ಲರ್​ಗೆ ಸಿಂಪಲ್​ ಕ್ಯಾಚ್​ ನೀಡಿದರು. ಇದೇ ಪಂದ್ಯದಲ್ಲಿ ಜೇಮ್ಸ್​ ಆ್ಯಂಡರ್ಸನ್​ 94ನೇ ಟೆಸ್ಟ್​ ಪಂದ್ಯವನ್ನಾಡುವ ಮೂಲಕ ತವರಿನಲ್ಲಿ ಗರಿಷ್ಠ ಪಂದ್ಯವಾಡಿದ ದಾಖಲೆಯನ್ನು ಸರಿಗಟ್ಟಿದರು.

ಇನ್ನು ಟಾಸ್​ ಗೆದ್ದ ಭಾರತ ತಂಡ ಬ್ಯಾಟಿಂಗ್ ಆರಂಭಿಸಿ 56 ರನ್​ಗಳಾಗುವಷ್ಟರಲ್ಲಿ 4 ವಿಕೆಟ್​ ಕಳೆದುಕೊಂಡು ಆಘಾತಕ್ಕೀಡಾಗಿದೆ. ರಾಹುಲ್(0), ಪೂಜಾರ(1), ಕೊಹ್ಲಿ(7) ಮತ್ತು ರಹಾನೆ(18) ಅಲ್ಪ ಮೊತ್ತಕ್ಕೆ ವಿಕೆಟ್​ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಕೊನೆಗೂ ಟಾಸ್​ ಗೆದ್ದ ಕೊಹ್ಲಿ.. ಇಂಗ್ಲೆಂಡ್​ ನೆಲದಲ್ಲಿ ಸತತ ಟಾಸ್​ ಸೋಲಿನ ಸರಪಳಿಗೆ ಬ್ರೇಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.